ಬಾಗಲಕೋಟೆ: ಜಿಲ್ಲೆಯಲ್ಲಿರುವ ಕಳ್ಳಬಟ್ಟಿ ಸಾರಾಯಿ ಮಾರಾಟವನ್ನು ಸಂಪೂರ್ಣವಾಗಿ ತಡೆಗಟ್ಟಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅಬಕಾರಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲೆಯಲ್ಲಿರುವ ಕಳ್ಳಬಟ್ಟಿ ಕೇಂದ್ರಗಳ ಸಂಪೂರ್ಣ ನಿಮರ್ೂಲನೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳ್ಳಬಟ್ಟಿ ಸಾರಾಯಿ ದಂಧೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆಯನ್ನು ರೂಪಿಸಲಾಗಿದೆ. ಈ ಕಾರ್ಯಕ್ಕೆ ಕಂದಾಯ, ಜಿಲ್ಲಾ ಪಂಚಾಯತ, ಪೊಲೀಸ್, ಅರಣ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದ ಜೊತೆಗೆ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.
ಸಾರಾಯಿ ನಿಷೇಧಿಸಿದ ನಂತರ ಕಳ್ಳಬಟ್ಟಿ ತಯಾರಿಕಾ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡುವಂತಹ ಕಾರ್ಯವನ್ನು ಸಂಪೂರ್ಣವಾಗಿ ನಿಮರ್ೂಲನೆ ಮಾಡುವ ನಿಟ್ಟಿನಲ್ಲಿ ಅರಿವು ಕಾಯರ್ಾಚರಣೆಯಲ್ಲಿ ಪೊಲೀಸ್ ಇಲಾಖೆಯ ಜೊತೆ ಜಂಟಿಯಾಗಿ ಕಾಯರ್ಾಚರಣೆ ಮಾಡಲು ತಿಳಿಸಿದ ಜಿಲ್ಲಾಧಿಕಾರಿಗಳು ಕಳ್ಳಬಟ್ಟಿ ಪ್ರಕರಣಗಳು ಕಂಡುಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಸೂಚಿಸಿದರು.
ತಾಂಡಾದ ವ್ಯಾಪ್ತಿಯಲ್ಲಿ ಇರುವ ಜಮೀನುಗಳಲ್ಲಿ ಕಳ್ಳಬಟ್ಟಿ ತಯಾರಿಸಲು ಅನುವು ಮಾಡಿದಲ್ಲಿ ಹಾಗೂ ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ಸಂಗ್ರಹಿಸುವುದು ಹಾಗೂ ತಯಾರಿಸಿದ ಕಳ್ಳಬಟ್ಟಿಯನ್ನು ಸಂಗ್ರಹಣೆಗೆ ಜಾಗ ನೀಡಿದ್ದು, ಕಂಡಬಂದಲ್ಲಿ ಅಂತಹ ಜಮೀನಿನ ಮಾಲಿಕರ ಮೇಲೆ ಅಬಕಾರಿ ಕಾನೂನಿನನ್ವಯ ಸೂಕ್ತ ಕ್ರಮ ಜರುಗಿಸುವ ಕುರಿತು ತಹಶೀಲ್ದಾರರಿಂದ ತಿಳುವಳಿಕೆ ಪತ್ರ ಹೊರಡಿಸುವಂತೆ ಅಬಕಾರಿ ಉಪ ಆಯುಕ್ತರಾದ ಬಸವರಾಜ ಸಂದಿಗವಾಡ ಜಿಲ್ಲಾಧಿಕಾರಿಗಳಲ್ಲಿ ಕೋರಿದಾಗ ಈ ಕುರಿತು ಆಯಾ ತಾಲೂಕಾ ತಹಶೀಲ್ದಾರರಿಗೆ ತಿಳುವಳಿಕೆ ಪತ್ರ ಹೊರಡಿಸಲು ನಿದರ್ೇಶಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಅಬಕಾರಿ ಉಪ ಆಯುಕ್ತರಾದ ಬಸವರಾಜ ಸಂದಿಗವಾಡ ಮಾತನಾಡಿ ಗ್ರಾಮೀಣ ಭಾಗದಲ್ಲಿ ಕಳ್ಳಬಟ್ಟಿ ಸೇವನೆಯ ಚಟಹೊಂದಿರುವ ಮನಃ ಪರಿವರ್ತನೆ, ಕಳ್ಳಬಟ್ಟಿ ತಯಾರಿಕೆಯಲ್ಲಿ ತೊಡಗಿರುವ ಮಹಿಳೆಯರನ್ನು ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಅಡಿಯಲ್ಲಿ ಸಂಘಟಿಸಿ ಪಯರ್ಾಯ ಉದ್ಯೋಗಕ್ಕೆ ಉತ್ತೇಜನ ನೀಡುವುದು, ಲಂಬಾಣಿ ತಾಂಡಾ, ಹರಣಶಿಕಾರಿ ಕಾಲನಿಗಳಲ್ಲಿ ಇರುವ ಶಾಲೆಗಳ ಮಕ್ಕಳಿಗೆ ಕಳ್ಳಬಟ್ಟಿ ಸಾರಾಯಿ ಸೇವೆನೆಯಿಂದ ಮಾನವನ ಆರೋಗ್ಯದ ಮೇಲೆ ಉಂಟಾಗಲಿರುವ ದುಷ್ಪರಿಣಾಮದ ಕುರಿತು ತಿಳುವಳಿಕೆ ಮೂಡಿಸುವುದಾಗಿ ಸಭೆಗೆ ತಿಳಿಸಿದರು.
ಜಿಲ್ಲೆಯಲ್ಲಿ ಕಳ್ಳಬಟ್ಟಿ ಸಾರಾಯಿ ತಯಾರಿಕೆ, ಸಂಗ್ರಹಣೆ, ಮಾರಾಟದ ದಂಧೆಯನ್ನು ಹತ್ತಿಕ್ಕಲು ಅಬಕಾರಿ ಇಲಾಖೆ ಜಾಗೃತಿ ವಹಿಸಲಾಗುತ್ತಿದೆ. ಇಂತಹ ಕಳ್ಳಬಟ್ಟಿ ದಂಧೆಕೋರರ ಬಗ್ಗೆ ಅಬಕಾರಿ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಕಳ್ಳಬಟ್ಟಿ ನಿಮರ್ೂಲನೆಗೆ ಸಾರ್ವಜನಿಕರು ಸಹಕರಿಸುವ ಅಗತ್ಯವಿದೆ ಎಂದರು. ಚುನಾವಣಾ ನೀತಿ ಸಂಹಿತೆ ಸಂದರ್ಭದಲ್ಲಿ ಎಂ.ಸಿ.ಸಿ ತಂಡಗಳನ್ನು ಸಮರ್ಪಕವಾಗಿ ಬಳಸಿಕೊಂಡು ದಾಳಿ ಮಾಡಿದ್ದರಿಂದ ಪ್ರಕರಣಗಳ ಅಂಕಿ ಅಂಶಗಳನ್ನು ಗಮನಿಸಿದಾಗ ಕಳ್ಳಬಟ್ಟಿ ದಂಧೆ ಕ್ರಮೇಣ ಇಳಿಮುಖವಾಗಿರುವುದು ಕಂಡುಬಂದಿದೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಪ್ರೋಬೇಷನರಿ ಐಎಎಸ್ ಅಧಿಕಾರಿ ಗರಿಮಾ ಪಂವಾರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜಯ್ಯ, ಪ್ರಾದೇಶಿಕ ಸಾರಿಗೆ ಅಧಿಕಾರಿ ಯಲ್ಲಪ್ಪ ಪಡಸಾಲಿ ಸೇರಿದಂತೆ ಅಬಕಾರಿ ಇಲಾಖೆಯ ತೇಲಿ, ರಾಜು ಹೊಸಮನಿ, ಸಂಗಮೇಶ ಗೋನಾಳ, ಪ್ರಭುಗೌಡ ಪಾಟೀಲ ಉಪಸ್ಥಿತರಿದ್ದರು.