ಸ್ಮೃತಿ ಮಂದನ ವಿಶ್ವ ದಾಖಲೆಯ ಫಿಫ್ಟಿ


ಲಂಡನ್ 30: ಭಾರತದ  ಸ್ಟಾರ್ ಆಟಗಾತರ್ಿ ಸ್ಮೃತಿ  ಮಂದನ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟಿ 20 ಲೀಗ್ನಲ್ಲಿ ವನಿತಾ ಟಿ 20 ಕ್ರಿಕೆಟ್ ಇತಿಹಾಸದ ಅತೀ ವೇಗದ ಅರ್ಧ ಶತಕ ಬಾರಿಸಿ ವಿಶ್ವದಾಖಲೆ ಸರಿದೂಗಿಸಿದ್ದಾರೆ.   

2015ರಲ್ಲಿ ನ್ಯೂಜಿಲ್ಯಾಂಡ್ ನ ಸೋಫಿಯೋ ಡಿವೈನ್ ಅವರು ಕೇವಲ 18 ಎಸೆತಗಳಲ್ಲಿ ಅವೀ ವೇಗದ ಅರ್ಧ ಶತಕ (50) ಬಾರಿಸಿ ನಿಮರ್ಿಸಿದ್ದ ದಾಖಲೆಯನ್ನು ಸ್ಮೃತಿ ಮಂದನ ಸರಿಗಟ್ಟಿದಂತಾಗಿದೆ. 

ಭಾನುವಾರ ರಾತ್ರಿ ಲೌಬರೋ ಲ್ಶೆಟ್ನಿಂಗ್ ವಿರುದ್ಧ ನಡೆದ ಪಂದ್ಯದಲ್ಲಿ  ವೆಸ್ಟನರ್್ ಸ್ಟಾಮರ್್ ಆರಂಭಿಕ ಆಟಗಾತರ್ಿಯು  ಈ ವಿಶ್ವ ದಾಖಲೆಯ ಇನ್ನಿಂಗ್ಸಲ್ಲಿ  4 ಬೌಂಡರಿ 4 ಸಿಕ್ಸರ್ ಸಹಿತ19 ಎಸೆತಗಳಲ್ಲಿ 52 ರನ್ ಹೊಡೆದರು.  ಮಳೆಯಿಂದಾಗಿ 6  ಓವರ್ ಗಳಿಗೆ ಸೀಮಿತವಾಗಿ ನಡೆದ ಪಂದ್ಯದಲ್ಲಿ ವೆಸ್ಟನರ್್ ಸ್ಟಾರ್ಮ 2 ವಿಕೆಟ್ ಗೆ 85 ರನ್ ಗಳಿಸಿದರೆ, ಲೌಬರೋ ಲ್ಶೆಟ್ನಿಂಗ್ ತಂಡ 67 ರನ್ಗಳಿಸಲಷ್ಟೆ ಶಕ್ತವಾಯಿತು.