ನವದೆಹಲಿ, ಡಿ 17 ಭಾರತ ಮಹಿಳಾ
ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರು ವರ್ಷದ ಐಸಿಸಿ ಮಹಿಳಾ ಏಕದಿನ ಮತ್ತು ಟಿ-20
ಎರಡೂ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಸೋಮವಾರ ವರ್ಷದ ಮಹಿಳಾ
ಏಕದಿನ ಹಾಗೂ ಟಿ20 ತಂಡಗಳನ್ನು ಪ್ರಕಟಿಸಿದೆ. ಆಸ್ಟ್ರೇಲಿಯಾ ತಂಡದ ಎಲ್ಲಿಸ್ ಪೆರ್ರಿ ಅವರು 2019ರ ವರ್ಷದ ಮಹಿಳಾ ಆಟಗಾರ್ತಿ
ಹಾಗೂ ರಾಚೆಲ್ ಹೆಹೊ ಫ್ಲಿಂಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಪೆರ್ರಿ ಐಸಿಸಿ ವರ್ಷದ ಮಹಿಳಾ ಏಕದಿನ ಆಟಗಾರ್ತಿ ಹಾಗೂ ಮತ್ತೊರ್ವ ಆಟಗಾರ್ತಿ
ಅಲಿಸಾ ಹೀಲಿ ಐಸಿಸಿ ವರ್ಷದ ಮಹಿಳಾ ಟಿ-20 ಆಟಗಾರ್ತಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಥಾಯ್ಲೆಂಡ್
ನ ಚನಿಡಾ ಸುತ್ತಿರುಂಗ ಅವರು ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಸ್ಮೃತಿ
ಮಂಧಾನ ಜತೆಗೆ ಭಾರತದ ಮೂವರು ಆಟಗಾರ್ತಿಯರಾದ ಶಿಖಾ ಪಾಂಡೆ, ಜೂಲನ್ ಗೋಸ್ವಾಮಿ ಹಾಗೂ ಪೂನಮ್ ಯಾದವ್
ಅವರು ಮೆಕ್ ಲ್ಯಾನಿಂಗ್ ನಾಯಕತ್ವದ ವರ್ಷದ ಏಕದಿನ ಮಹಿಳಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.ವರ್ಷದ
ಮಹಿಳಾ ಟಿ20 ಪಂದ್ಯದಲ್ಲಿ ದೀಪ್ತಿ ಶರ್ಮಾ ಹಾಗೂ ರಾಧ ಯಾಧವ್ ಸ್ಥಾನ ಪಡೆದಿದ್ದಾರೆ. ಈ ತಂಡವನ್ನೂ
ಮೆಗ್ ಲ್ಯಾನಿಂಗ್ ಅವರೇ ಮುನ್ನಡೆಸಲಿದ್ದಾರೆ.ಐಸಿಸಿ ವರ್ಷದ ಮಹಿಳಾ ಏಕದಿನ ತಂಡ: ಅಲಿಸಾ ಹೀಲಿ (ವಿ.ಕೀ)
(ಆಸ್ಟ್ರೇಲಿಯಾ), ಸ್ಮೃತಿ ಮಂಧಾನ (ಭಾರತ), ತಮ್ಸಿನ್ ಬಿಮೌಂಟ್ (ಇಂಗ್ಲೆಂಡ್), ಮೆಗ್ ಲ್ಯಾನಿಂಗ್
(ನಾಯಕಿ) (ಆಸ್ಟ್ರೇಲಿಯಾ), ಸ್ಟೆಫಾನಿ ಟೇಲರ್ (ವೆಸ್ಟ್ ಇಂಡೀಸ್), ಎಲ್ಲಿಸ್ ಪೆರ್ರಿ (ಆಸ್ಟ್ರೇಲಿಯಾ),
ಜೆಸ್ ಜೊನಾಸೆನ್ (ಆಸ್ಟ್ರೇಲಿಯಾ), ಶಿಖಾ ಪಾಂಡೆ (ಭಾರತ), ಜೂಲನ್ ಗೋಸ್ವಾಮಿ (ಭಾರತ), ಮೆಗನ್ ಸ್ಕಾಟ್
(ಆಸ್ಟ್ರೇಲಿಯಾ), ಪೂನಮ್ ಯಾದವ್ (ಭಾರತ).ಐಸಿಸಿ ವರ್ಷದ ಮಹಿಳಾ ಟಿ-೨೦ ತಂಡ: ಅಲಿಸಾ ಹೀಲಿ (ವಿ.ಕೀ)
(ಆಸ್ಟ್ರೇಲಿಯಾ), ಡೇನಿಯಲ್ ವ್ಯಾಟ್ (ಇಂಗ್ಲೆಂಡ್), ಮೆಗ್ ಲ್ಯಾನಿಂಗ್ (ನಾಯಕಿ) (ಆಸ್ಟ್ರೇಲಿಯಾ),
ಸ್ಮೃತಿ ಮಂಧಾನ (ಭಾರತ), ಲಿಝೆಲ್ಲೆ ಲೀ (ದಕ್ಷಿಣ ಆಫ್ರಿಕಾ), ಎಲ್ಲಿಸಾ ಪೆರ್ರಿ (ಆಸ್ಟ್ರೇಲಿಯಾ),
ದೀಪ್ತಿ ಶರ್ಮಾ(ಭಾರತ), ನಿಡಾ ದರ್ (ಪಾಕಿಸ್ತಾನ), ಮೆಗನ್ ಸ್ಕಾಟ್ (ಆಸ್ಟ್ರೇಲಿಯಾ), ಶಬ್ನಿಮ್ ಇಸ್ಮಾಯಿಲ್
(ದಕ್ಷಿಣ ಆಫ್ರಿಕಾ), ರಾಧ ಯಾದವ್ (ಭಾರತ).