ಅಮೇಥಿ, ಅಮೇಥಿ ಸಂಸದೀಯ ಕ್ಷೇತ್ರದಲ್ಲಿ 1000 ನೇ ಅತ್ಯಾಧುನಿಕ ನಂದ್ ಘರ್' ಅಂಗನವಾಡಿ ಕೇಂದ್ರವನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಉದ್ಘಾಟಿಸಿದರು .
1000 ನೇ ನಂದ್ ಘರ್ ಉದ್ಘಾಟನೆ 'ಗಣಿಗಾರಿಕೆಗೆ ಲೋಹಗಳು' ಸಂಘಟಿತ ವೇದಾಂತ ಲಿಮಿಟೆಡ್ನ ಸಿಎಸ್ಆರ್ ನ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಸಹಯೋಗದೊಂದಿಗೆ ವಿವಿಧ ರಾಜ್ಯಗಳಲ್ಲಿ ಅಂಗನವಾಡಿಗಳನ್ನು ನಿರ್ಮಿಸಿ ,ನವೀಕರಿಸಲು ಸಂಸ್ಥೆ ಮುಂದಾಗಿದೆ.
'ನಂದ್ ಘರ್ ಇ-ಕಲಿಕೆಗಾಗಿ ಟೆಲಿವಿಷನ್, ಸೌರ ಫಲಕಗಳು, ಶುದ್ದ ಕುಡಿಯುವ ನೀರು, ಶೌಚಾಲಯ ಮುಂತಾದ ಹಲವು ವಿಶೇಷ ಸೌಲಭ್ಯ ಹೊಂದಿದೆ ಅಮೇಥಿಯಲ್ಲಿ, ವೇದಾಂತ ಲಿಮಿಟೆಡ್ ಇಂತಹ 50 ನಂದ್ ಘರ್ ಅನ್ನು ಎರಡು ಹಂತಗಳಲ್ಲಿ ನಿರ್ಮಿಸಲಿದೆ.
ಇರಾನಿ, ತಮ್ಮ ಕ್ಷೇತ್ರದಲ್ಲಿ ಮೊದಲ ನಂದ್ ಘರ್ ಉದ್ಘಾಟಿಸಿ, ಮಹಿಳೆ, ಮಕ್ಕಳ ಒಟ್ಟಾರೆ ಯೋಗಕ್ಷೇಮಕ್ಕೆ ಇದೊಂದು ದೊಡ್ಡ ಕೊಡುಗೆಯಾಗಲಿದೆ ನಂದ್ ಘರ್ಸ' ದೇಶಾದ್ಯಂತ ಸುಮಾರು 40,000 ಮಕ್ಕಳು ಮತ್ತು 30,000 ಮಹಿಳೆಯರಿಗೆ ಪ್ರಯೋಜನವಾಗಲಿದೆ ಎಂದರು .
ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಗಮನ ಕೊಡಲಾಗಿದ್ದು ದೇಶದ ಉದ್ದಗಲಕ್ಕೂ ದೀನದಲಿತ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಇಂತಹ ಹಲವು ಸೌಲಭ್ಯ ಕಲ್ಪಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ನವ ಭಾರತ ನಿರ್ಮಾಣದ ಕನಸು ನನಸು ಮಾಡಲು ಹೆಚ್ಚಿನ ಸಹಕಾರ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.