ಕುಟುಂತ್ತ ಸಾಗಿರುವ ಸ್ಮಾಟರ್್ಸಿಟಿ ಕಾಮಗಾರಿ ಶೀಘ್ರವೇ ಸಚಿವ ಹದರ್ಿಪ್ ಸಿಂಗ್ ಬೆಳಗಾವಿಗೆ


ಬೆಳಗಾವಿ : ಕೇಂದ್ರ ಸಕರ್ಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾಗಿರುವ ಸ್ಮಾಟರ್್ ಸಿಟಿ ಕಾಮಗಾರಿಯ ಅನುಷ್ಠಾನದಲ್ಲಿ ರಾಜ್ಯ ಸಕರ್ಾರ ನಿರಾಸಕ್ತಿ ವಹಿಸಿರುವುದರಿಂದ ಬೆಳಗಾವಿ ಸ್ಮಾಟರ್್ ಸಿಟಿ ಯೋಜನೆ ಕುಂಟುತ್ತ ಸಾಗಿದ್ದು, ಅದನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಬೇಕು ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಹದರ್ಿಪ್ ಸಿಂಗ್ ಅವರಿಗೆ ಸಂಸದ ಸುರೇಶ ಅಂಗಡಿ ಮನವಿ ಮಾಡಿದರು. 

ಮಂಗಳವಾರ ದೆಹಲಿಯಲ್ಲಿರುವ ಸಚಿವಾಲಯಕ್ಕೆ ತೆರಳಿ ಸಚಿವರನ್ನು ಭೇಟಿ ಮಾಡಿದ ಸಂಸದರು, ಕೇಂದ್ರ ಸಕರ್ಾರ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡಿದ್ದರೂ, ಯಾವುದೇ ಕಾಮಗಾರಿ ಸರಿಯಾಗಿ ಅನುಷ್ಠಾನಗೊಂಡಿಲ್ಲ. ಅಧಿಕಾರಿಗಳು ಇನ್ನೂ ಆಮೆ ಗತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ಮಾಟರ್್ ಸಿಟಿ ಕಚೇರಿಯಲ್ಲಿ ವ್ಯವಸ್ಥಾಪಕ ನಿದರ್ೆಶಕ ಹಾಗೂ ಸಹಾಯಕ ಬಿಟ್ಟರೇ, ಇನ್ನೂಳಿದ ಎಲ್ಲ ಹುದ್ದೆಗಳು ಖಾಲಿ ಉಳಿದಿವೆ. ಹೀಗಾದರೇ ಕೆಲಸ ಮಾಡುವರು ಯಾರು ಎಂದು ಸಚಿವರನ್ನು ಸಂಸದರು ಪ್ರಶ್ನಿಸಿದ್ದಾರೆ. 

ಆದಷ್ಟು ಬೇಗನೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಕಾಮಗಾರಿಯನ್ನು ತ್ವರಿತಗೊಳಿಸಲು ಸೂಚನೆ ನೀಡುವುದಾಗಿ ಸಚಿವ ಹದರ್ಿಪ್ ಸಿಂಗ್ ಭರವಸೆ ನೀಡಿದ್ದಾರೆ. ಅಲ್ಲದೇ ಶೀಘ್ರವೇ ಬೆಳಗಾವಿ ನಗರಕ್ಕೆ ಭೇಟಿ ನೀಡಿ, ಸ್ಮಾಟರ್್ ಸಿಟಿ ಯೋಜನೆ ಅನುಷ್ಠಾನದ ಕುರಿತು ಪ್ರಗತಿ ಪರಿಶೀಲನೆ ನಡೆಸುವುದಾಗಿ ಸಚಿವರು ಹೇಳಿದ್ದಾರೆ ಎಂದು ಸಂಸದ ಅಂಗಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮುತಾಲಿಕ ದೇಸಾಯಿ 

ಇದ್ದರು.