ಲೋಕದರ್ಶನ ವರದಿ
ಬೆಳಗಾವಿ 10: ಪಟ್ಟಣದ ಗಣೇಶಪೂರ ನಿವಾಸಿ ಸುಷ್ಮಾ ಬಾಪಟ (55) ಇತ್ತಿಚೇಗೆ ಕೆಎಲ್ಇ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಅಂತಿಮ ಇಚ್ಚೆಯಂತೆ ಜೈಂಟ್ಸ್ ಆಯ್ ಪೌಂಡೇಶನ್ ಹಾಗೂ ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ ವತಿಯಿಂದ ಚರ್ಮವನ್ನು ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ಕೆಎಲ್ಇ ರೋಟರಿ ಸ್ಕೀನ್ ಬ್ಯಾಂಕ್ (ಚರ್ಮ ಬಂಡಾರ)ಕ್ಕೆ ಮೃತರ ಚರ್ಮವನ್ನು ದಾನ ನೀಡಿದ್ದಾರೆ.
ಚರ್ಮದಾನದಿಂದ ಸುಟ್ಟಗಾಯಗಳಿಂದ ಬೆಂಕಿ ಅವಘಡ, ಅಪಘಾತ, ಅಸಿಡ್ ದಾಳಿಗೊಳಗಾದವರು ಇನ್ನಿತರ ಸಂದರ್ಭದಲ್ಲಿ ಗಾಯಾಳುವಿನ ಚಿಕಿತ್ಸೆಗೆ ಸೂಕ್ತ ಸಮಯದಲ್ಲಿ ಚರ್ಮದ ಲಭ್ಯತೆ ಇಲ್ಲದಿದ್ದಾಗ ಇಂತಹ ಚರ್ಮದಾನದಿಂದ ಅನುಕೂಲವಾಗಲಿದೆ. ಇಂತಹ ಚರ್ಮದಾನ ಮಾಡಿದ ದಾನಿಗಳ ಚರ್ಮವನ್ನು ಶೇಖರಿಸಿ ಚರ್ಮನಾಟಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ.
ಅದೇ ರೀತಿ ಮೃತರ ದೇಹವನ್ನು ಬೆಳಗಾವಿ ಕೆ.ಎಲ್.ಇ ವಿಶ್ವವಿದ್ಯಾಲಯದ ಜವಾಹರ್ಲಾಲ್ ನೆಹರೂ ವೈದ್ಯಕೀಯ ಮಹಾವಿದ್ಯಾಲಯಕ್ಕೆ (ಜೆಎನ್ಎಂಸಿ) ದೇಹವನ್ನು ದಾನವಾಗಿ ನೀಡಿ ವೈದ್ಯ ವಿದ್ಯಾರ್ಥಿಗಳ ಶರೀರ ರಚನೆ ಅವಯವಗಳ ಜ್ಞಾನಾರ್ಜನೆಗೆ ಅನುಕೂಲ ಮಾಡಿದ್ದಾರೆ.
ಬಾಪಟ ಕುಟುಂಬದವರಿಗೆ ಜೈಂಟ್ಸ್ ಆಯ್ ಪೌಂಡೇಶನ್ ಸಂಸ್ಥಾಪಕ ಮದನ ಬಾಮಣೆ ಅಧ್ಯಕ್ಷರಾದ ಶಿವರಾಜ್ ಪಾಟೀಲ, ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಎಂ.ವಿ.ಜಾಲಿ, ಮುಖ್ಯ ಪ್ಲಾಸ್ಟಿಕ ಸರ್ಜನ್ ಹಾಗೂ ಸ್ಕೀನ್ ಬ್ಯಾಂಕ್ ಮುಖ್ಯಸ್ಥ ಡಾ.ರಾಜೇಶ ಪವಾರ, ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಎಸ್. ಮಹಾಂತಶೆಟ್ಟಿ, ಡಾ. ರಾಮಣ್ಣವರ ಪ್ರತಿಷ್ಠಾನದ ಅಧ್ಯಕ್ಷ ಡಾ. ಸುಶೀಲಾದೇವಿ ರಾಮಣ್ಣವರ ಇವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೃತರಿಗೆ ಪತಿ, ಪುತ್ರ ಅಕ್ಷಯ ಇದ್ದಾರೆ.
ನೇತ್ರ ಮತ್ತು ದೇಹದಾನಕ್ಕೆ ಹೆಚ್ಚಿನ ಮಾಹಿತಿಗಾಗಿ : ಬೈಲಹೊಂಗಲ ಡಾ. ರಾಮಣ್ಣವರ ಪ್ರತಿಷ್ಠಾನ ಮೊ : 9242 496 497. ಸಂಪರ್ಕಿಸಬಹುದು.