ಜೀವನ ನಿರ್ವಹಣೆಗೆ ಕೌಶಲ್ಯ ಉದ್ಯೋಗ ಅಗತ್ಯ

ಲೋಕದರ್ಶನವರದಿ

ರಾಣೇಬೆನ್ನೂರು16: ಜೀವನ ಸಾಗಿಸುವಲ್ಲಿ ಕೌಶಲ್ಯಗಳ ಪ್ರಾಮುಖ್ಯತೆ ಬಹಳ ಮುಖ್ಯ, ವಿದ್ಯಾಥರ್ಿ ಜೀವನದಲ್ಲಿಯೇ ಕೌಶಲ್ಯ ಪಡೆಯಬೇಕು, ಅಂದಾಗ ಮಾತ್ರ ಉತ್ತಮವಾದ ಜೀವನ ನಡೆಸಬಹುದು ಎಂದು ಪ್ರಾಧ್ಯಾಪಕ ಡಾ| ಅಶೋಕ ಕುಲರ್ಿ ಹೇಳಿದರು.ನಗರದ ಸಕರ್ಾರಿ ಪ್ರಥಮ ದಜರ್ೆ ಮಹಾವಿದ್ಯಾಲಯದಲ್ಲಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾವಂತರಾದರೆ ಸಾಲದು ಕೌಶಲ್ಯ ನೈಪುಣ್ಯತೆ ಇಂದು ಬಹಳ ಅಗತ್ಯವಿದೆ ಎಂದರು.ಪ್ರಾಂಶುಪಾಲ ಎಲ್.ವಿ. ಸಂಗಳದ ಮಾತನಾಡಿ, ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಉತ್ತಮ ಜೀವನವನ್ನು ನಡೆಸಬಹುದೆಂದು ಉದಾಹರಣೆಗಳ ಮೂಲಕ ತಿಳಿಸಿದ ಅವರು, ವಿದ್ಯಾಥರ್ಿಗಳು ಈ ರೀತಿಯ ತರಬೇತಿಗಳನ್ನು ಹೆಚ್ಚು ಪಡೆಯಬೇಕು ಎಂದರು. ನೊಡಲ್ ಅಧಿಕಾರಿ ನಾರಯಣಕರ್ ಪಿ.ಎಂ. ಮಾತನಾಡಿ, ಇಂದಿನ ಯುಗದಲ್ಲಿ ಕೌಶಲ್ಯಗಳ ಪ್ರಾಮುಖ್ಯತೆ ಕುರಿತು ವಿವರಣೆ ಮೂಲಕ ತಿಳಿಸಿದರು. ಸಂಯೋಜಕ ಸುನಿಲ ಎಂ.ಹೆಚ್, ಶಶಿಧರ ಹಿರೇಮಠ, ಶಶಿಕಾಂತ ರಾಠೋಡ, ನಾಗಣ್ಣನವರ, ಗುಡಿಸಾಗರ, ಲಕ್ಷ್ಮಣ ಹಾಗೂ ಅನಿಲ ಇದ್ದರು.