ಲೋಕದರ್ಶನ ವರದಿ
ಬೆಳಗಾವಿ 19: ಜನರ ಮೊಗದಲ್ಲಿ ಮಂದಹಾಸವನ್ನು ಮೂಡಿಸುವಲ್ಲಿ ಬದ್ಧವಾದ ಜೆ.ಎಸ್.ಡಬ್ಲ್ಯೂ. ಸಮೂಹ ಈಗಾಗಲೇ ಮುಂದಾಳತ್ವನನ್ನು ವಹಿಸಿಕೊಂಡಿದೆ. ತನ್ನ ಸಾಮಾಜಿಕ ಅಭಿವೃದ್ಧಿಯ ಕಾರ್ಯ ಚಟುವಟಿಕೆಗಳನ್ನು ಜೆ.ಎಸ್.ಡಬ್ಲ್ಯೂ. ಫೌಂಡೇಶನ್ ಮೂಲಕ ನಿರಂತರವಾಗಿ ಕೈಗೊಳ್ಳುತ್ತ ಜನರ ಬದುಕನ್ನು ಹಸನು ಮಾಡುವ ಕಾರ್ಯ ನಡೆಸುತ್ತಿದೆ. ಆರೋಗ್ಯ, ಶಿಕ್ಷಣ, ಬದುಕು, ಸ್ವಚ್ಚತೆ, ಪರಿಸರರಕ್ಷಣೆ, ಮೂಲಭೂತ ಸೌಲಭ್ಯಗಳು, ವೃತ್ತಿಪರ ತರಬೇತಿ, ಕ್ರೀಡಾಭಿವೃದ್ಧಿ ಅಲ್ಲದೆ ಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿದೆ.
ಈಗಾಗಲೇ ಕಾಪರ್ೋರೇಟ್ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಹಲವಾರು ಜನಪರ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು 87 ಹಳ್ಳಿಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಜೆ.ಎಸ್.ಡಬ್ಲ್ಯೂ.ತನ್ನ ಪರಿಸರದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಿ ಅವರ ಉದ್ಯೋಗ ಪಡೆಯುವ ಅವಕಾಶ ಹೆಚ್ಚಿಸುವ ಗುರಿ ಹೊಂದಿದೆ. ಈ ಹಿನ್ನಲೆಯಲ್ಲಿ ಶಕ್ತಿ (ಡಾಟಾಹಳ್ಳಿ), ಕೇಂದ್ರ ನಡೆಸುತ್ತಿದೆ. ಈ ಕೇಂದ್ರದಲ್ಲಿ ಗ್ರಾಮೀಣ ಮಹಿಳೆಯರು, ಅದರಲ್ಲೂ ಯುವತಿಯರನ್ನು, ಮಾಹಿತಿ ಮತ್ತು ತಂತ್ರಜ್ಞಾನವನ್ನು (ಐ.ಟಿ) ಅವರಿಗೆ ಪರಿಚಯಿಸಿ ಅವರ ಆಥರ್ಿಕ ಮತ್ತು ಸಾಮಾಜಿಕ ಆಥರ್ಿಕ ಸ್ಥಿತಿಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ, ಜೆ.ಎಸ್.ಡಬ್ಲ್ಯೂ. ಫೌಂಡೇಶನ್ 2005ನೇ ಇಸವಿಯಿಂದ ಶಕ್ತಿ-ಡಾಟಾಹಳ್ಳಿ (ಬಿ.ಪಿ.ಓ.)ವನ್ನು ನಡೆಸುತ್ತಾ ಬಂದಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಹತ್ತನೇ ತರಗತಿ ಪಾಸಾಗಿ 18 ವರ್ಷದ ಗ್ರಾಮೀಣ ಯುವತಿಯರಿಗೆ ಗೌರವಯುತ ಉದ್ಯೋಗ ಸಿಗುವಲ್ಲಿ ಯಶಸ್ವಿಯಾಗಿದೆ. ಶಕ್ತಿ ಡಾಟಾಹಳ್ಳಿಯಲ್ಲಿ ಯುವತಿಯರಿಗೆ ಕಂಪ್ಯೂಟರ್ನ ಬಳಕೆಯ ಬಗ್ಗೆ ಕೌಶಲ್ಯ ತರಬೇತಿ ನೀಡಿ ಡಾಟಾಎಂಟ್ರೀ, ಡಾಟಾ ಪ್ರೋಸೆಸಿಂಗ್ ಕಲಿಸಿ ವಿವಿಧ ಗ್ರಾಹಕರಿಗೆ ಕೆಲಸ ಮಾಡುತ್ತಿದ್ದಾರೆ.
ಈ ಶಕ್ತಿ ಡಾಟಾಹಳ್ಳಿಯಲ್ಲಿ ಆರೋಗ್ಯ ರಕ್ಷಣೆ, ಇನ್ಶೋರೆನ್ಸ್, ಬ್ಯಾಕಿಂಗ್, ಡಿಜಿಟೈಜೇಶನ್, ಈ-ಪಬ್ಲಿಶಿಂಗ್, ಅಕೌಂಟ್ಸ್ ಪೇಯಬಲ್ ಸಂಬಂಧಪಟ್ಟ ವ್ಯವಹಾರಗಳನ್ನು ನಡೆಸಲಾಗುತ್ತಿದೆ. ಈವರೆಗೆ 2505 ಮಹಿಳೆಯರನ್ನು ತರಬೇತಿ ಹೊಂದ್ದಿದ್ದಾರೆ. ಸದ್ಯ 257 ಮಹಿಳೆಯರು ಈ ಸಂಸ್ಥೆಯಿಂದ ತಮ್ಮ ಬದುಕನ್ನು ನಡೆಸುತ್ತಿದ್ದಾರೆ.
ಜೆ.ಎಸ್.ಡಬ್ಲ್ಯೂ.ಸ್ಟೀಲ್ ಸಂಸ್ಥೆಯು ಬಿ.ಪಿ.ಓ. ಘಟಕಕ್ಕೆ ಮೂಲಭೂತ ಸೌಕರ್ಯ, ವಿದ್ಯುತ್, ಕಂಪ್ಯೂಟರ್ ಸಪೋರ್ಟ, ತಾಂತ್ರೀಕ ಬೆಂಬಲವಾಗಿ ಡೌನ್ಲೋಡ್ ಹಾಗೂ ಅಪ್ಲೋಡ್ ವ್ಯವಸ್ಥೆ, ಮತ್ತು ನೆಟ್ವರ್ಕ ಒದಗಿಸಲಾಗಿದೆ. ಇದಲ್ಲದೆ ಅಲ್ಲಿ ಬರುವ ಫಲಾನುಭವಿಗಳಿಗೆ ಮನೆಯಿಂದ ಸಾರಿಗೆ ವ್ಯವಸ್ಥೆ, ತರಬೇತಿ ಭತ್ಯೆ (ಸ್ಟೈಪೆಂಡ್) ವೇತನ, ಪಿಎಫ್, ಆರೋಗ್ಯ/ಅಪಘಾತ ವಿಮೆ ಸೌಲಭ್ಯ, ಪ್ರೋತ್ಸಾಹಧನ, ವ್ಯಕ್ತಿತ್ವ ವಿಕಸನ ಹಾಗೂ ಸಮವಸ್ತ್ರ ನಿಡಲಾಗುತ್ತಿದೆ.
ಶಕ್ತಿ ಬಿ.ಪಿ.ಓ.ದಿಂದ ಹತ್ತನೇತರಗತಿ ಪಾಸಾದ ಯುವತಿಯರಿಗೆ ಉದ್ಯೋಗವಕಾಶ ಹೆಚ್ಚಿಸಿದಲ್ಲದೆ ಅವರಿಗೆ ಒಂದು ಗೌರವಯುತ ಸ್ಥಾನಮಾನವನ್ನು ತಮ್ಮ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ತಂದುಕೊಟ್ಟಿದೆ.
ಜೆ,ಎಸ್,ಡಬ್ಲ್ಯೂ. ಫೌಂಡೇಶನ್ ನಡೆಸುತ್ತಿರುವ ಶಕ್ತಿ ಬಿ.ಪಿ.ಓ. ಒಂದು ಅನುಕರಣೀಯ ಮಾದರಿಯಾಗಿ ಹೊರಹೊಮ್ಮಿದೆ. ಶಂಕರಗುಡ್ಡ ಟೌನ್ಶಿಪ್, ರತ್ನಾಗಿರಿ, ಡೋಲ್ವಿ, ಸಾಲ್ಬೋನಿ, ಸೇಲಂ, ಕಲ್ಮೇಶ್ವರ ಮತ್ತು ಬಾರ್ಮರ್ನಲೂ ್ಲಕೂಡ ಬಿ.ಪಿ.ಓ. ತೆರೆಯಲಾಗಿದೆ.
ಇಂಡಿಯಾ ಬ್ಯೂರೋಕ್ರಸಿ ಅವಾರ್ಡ (2017) ಐ.ಎಸ್.ಓ.,ಕ್ಯೂ.ಎಮ್.ಎಸ್. ದೃಢೀಕರಣ 9001-2015 (2016), ನ್ಯಾಸ್ಕಾಮ್ ಸೋಶಿಯಲ್ ಇನೋವೇಶನ್ ಅವಾರ್ಡ (2014), ಗ್ಲೋಬಲ್ ಸೋರ್ಸ ಪೀಪಲ್ ಚಾಯ್ಸಅವಾರ್ಡ(2013) ಅಂತಹ ಮೊದಲಾದ ಪ್ರಶಸ್ತಿಗಳನ್ನು ಮಹಿಳಾ ಸಬಲೀಕರಣದ ಬದ್ದತೆಯನ್ನು ಹೊಂದಿದ ಜೆ.ಎಸ್.ಡಬ್ಲ್ಯೂ. ಫೌಂಡೇಶನ್ ತನ್ನ ಮುಡಿಗೇರಿಸಿಕೊಂಡಿದ್ದು ಹೆಮ್ಮೆಯ ಸಂಗತಿ. ಮಷೀನ್ ನಡೆಸುವುದು ಮತ್ತು ಅದರ ನಿರ್ವಹಣೆ ತರಬೇತಿ ಕೇಂದ್ರ. ಮ್ಯಾಟ್ರಿಕ್ ಪಾಸ್ಸಾದ ಯುವಕರಿಗೆ ಒಳ್ಳೆ ಕೆಲಸ ಸಿಗುವಂತಾಗಲು ಅವರಿಗೆ ಒಂದು ವರ್ಶದ ಮಷೀನ್ ನಡೆಸುವುದು ಮತ್ತು ಅದರ ನಿರ್ವಹಣೆ ತರಬೇತಿ ನೀಡಲಾಗುತ್ತಿದೆ. ನೆಟ್ಟೂರ್ಟೆಕ್ನಿಕಲ್ ಟ್ರೇನಿಂಗ ಫೌಂಡೇಶನ್ (ಓಖಿಖಿಈ) ಮೂಲಕ ಯುವಕರಿಗೆ ಎಲೆಕ್ಟ್ರಿಕಲ್, ವೆಲ್ಡಿಂಗ್, ಮಷೀನ್ ಶಾಪ್ ಬಗ್ಗೆ ತರಬೇತಿಯನ್ನು ನೀಡಲಾಗುತ್ತಿದೆ. ಕೋಸರ್್ ಮುಗಿದ ನಂತರಅವರಿಗೆ ಪ್ರಮಾಣ ಪತ್ರ ನೀಡಿ ಅವರಿಗೆ ಉದ್ಯೋಗ ದೊರಕಿಸಿ ಕೊಡಲು ಸಹಾಯ ಮಾಡಲಾಗುತ್ತಿದೆ. ಈಗಾಗಲೇ 1357 ಯುವಕರು ಈ ಕೇಂದ್ರದ ಲಾಭ ಪಡೆದಿದ್ದಾರೆ.
ಹೊಲಿಗೆ ಹಾಗೂ ಸಿದ್ದ ಉಡುಪು ತಯಾರಿಕಾ ತರಬೇತಿ ಕೇಂದ್ರ:
ಗ್ರಾಮೀಣ ಮಹಿಳೆಯರು ಆಥರ್ಿಕವಾಗಿ ಸ್ವಾವಲಂಬಿಗಳಾಗಲು ಅವರಿಗೆ ಹೊಲಿಗೆ ಹಾಗೂ ಸಿದ್ದ ಉಡುಪು ತಯಾರಿಕಾ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದ ನಂತರಅವರು ಸ್ವಂತಉದ್ಯೋಗ ಮಾಡಬಹುದು ಅಥವಾ ಓ.ಪಿ.ಜೆ. ಸೆಂಟರ್ನಲ್ಲಿ ಸಿದ್ಧ ಉಡುಪು (ಸಮವಸ್ತ್ರ) ತಯಾರಿಕಾಘಟಕದಲ್ಲಿ ಕೆಲಸ ಮಾಡಬಹುದು. ಅವರಿಗೆ ವೇತನ ಜೊತೆಗೆ ಕೆಲಸಧಾರಿತ ಪ್ರೋತ್ಸಾಹ ಧನವನ್ನು ನೀಡಲಾಗುವುದು. ಈಗಾಗಲೇ 975 ಮಹಿಳೆಯರು ತರಬೇತಿ ಪಡೆದಿದ್ದರೆ ಹಾಗೂ ಸುಮಾರು 80 ಮಹಿಳೆಯರು ಸಿದ್ಧಉಡುಪು ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ.
2018-19ನೇ ವರ್ಷದಿಂದ ಲೇಬರ್ನೆಟ್ಟ್ (ಟಚಿಛಠಡಿಟಿಜಣ) ಸಂಸ್ಥೆಯ ಸಹಯೋಗದೊಂದಿಗೆ ಸ್ಥಳೀಯ ಯುವಕ-ಯುವತಿಯರಿಗೆ ಅಸಿಸ್ಟೆಂಟ್ ಬ್ಯೂಟಿಥೇರಾಪಿಸ್ಟ್, ಜನರಲ್ಡ್ಯೂಟಿ ಅಸ್ಸಿಸ್ಟಂಟ್ಸ್ (ನಸಿರ್ಂಗ್) ಒಳಗೊಂಡ ಕೆಲವು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸದ್ಯ 112 ಯುವಕ- ಯುವತಿಯರು ತರಬೇತಿಯನ್ನು ಪಡೆದಿದ್ದಾರೆ ಹಾಗೂ 53 ಜನರ ತರಬೇತಿ ನಡೆಯುತ್ತಿದೆ.