ಮಾಂಜರಿ 02: ಕಾಲಕ್ಕೆ ತಕ್ಕಂತೆ ಜಗತ್ತು ಬದಲಾಗುತ್ತಿದೆ. ಅದೇ ರೀತಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲೂ ಬದಲಾವಣೆಗಳು ಆಗುತ್ತಿವೆ. ನೀವು ಜಾಗರೂಕರಾಗಿದ್ದರೆ, ನೀವು ಯಶಸ್ವಿಯಾಗುತ್ತೀರಿ. ಈ ಯುಗದಲ್ಲಿ ಕೌಶಲ್ಯಪೂರ್ಣ ಜ್ಞಾನದ ಅಗತ್ಯವಾಗಿದ್ದು, ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯವು ನಿಮ್ಮನ್ನು ಯಶಸ್ಸಿನ ಶಿಖರಕ್ಕೆ ಕೊಂಡೊಯ್ಯುತ್ತದೆ ಎಂದು ಗೊಮಟೇಶ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎನ್.ಎ. ಮಗದುಮ್ಮ ಹೇಳಿದ್ದಾರೆ.
ಅವರು, ಇಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಗೊಮಟೇಶ ಶಿಕ್ಷಣ ಸಂಸ್ಥೆಯ ನಸಿಂರ್ಗ್ ಕಾಲೇಜಿನ ಬಿಎಸ್ಸಿ ನಸಿಂರ್ಗ್‌ನ ಎರಡನೇ ಬ್ಯಾಚ್ ಮತ್ತು 23 ನೇ ಬ್ಯಾಚ್ ನಸಿಂರ್ಗ್ ಡಿಪ್ಲೊಮಾ ವಿದ್ಯಾರ್ಥಿಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಸಂಸ್ಥೆಯ ಕೋಶಾಧಿಕಾರಿ ಎಲ್.ಎನ್.ಮಗದುಮ್ಮ ಉಪಸ್ಥಿತರಿದ್ದು, ಮಾತನಾಡಿದರು. ಡಾ. ಅರ್ಚನಾ ಶುಕ್ಲಾ, ಪ್ರಾ. ಎನ್.ಎಸ್. ನಿಡಗುಂಡೆ, ಪ್ರಾ. ವರ್ಷಾ ಥೋರಾಥ, ಪ್ರಾ. ಬಿ.ಆರ್. ಸಂಗಪ್ಪಗೋಳ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪಸ್ಥಿತರಿದ್ದ ಗಣ್ಯರು ದೀಪ ಬೆಳಗಿಸಿ ಚಾಲನೆ ನೀಡಿದರು.
ಬಾಹುಬಲಿ ಚೌಗುಲೆ, ರಾಜು ತೊರಸೆ, ರಾಘವೆಂದ್ರ ಸಂಕೇಶ್ವರಿ, ಚಂದ್ರಶೇಖರ ಎಚ್., ದಯಾರುಲ್ ಮಿರ್ಜೇಕರ್, ನಾಗೇಶ ಪಾಟೀಲ್, ಪ್ರೇಮಾ ನಾವ್ಹಿ, ರಜಿಯಾ ಬಾಗವಾನ್, ವಾಜಿ ಬೇಗಂ, ಜಯಶ್ರೀ ಚಿಕ್ಕೂಡ, ಪೂಜಾ ಪತೀವ, ಹೀನಾ ಜಮಾದಾರ, ಜ್ಯೋತಿ ಬಜಂತ್ರಿ ಸೇರಿದಂತೆ ಕಾಲೇಜಿನ ಪ್ರಾಚಾರ್ಯರರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಿದ್ದಾರೂಢ ಸ್ವಾಗತಿಸಿದರು. ಪೂಜಾ ಪಾಟೀಲ ನಿರೂಪಿಸಿದರು.