ಧಾರವಾಡ (ಉಪ್ಪಿನ ಬೆಟಗೇರಿ) 22: ಇಂದಿನ ದಿನಗಳಲ್ಲಿ ಮಾನವ ಸಂಪನ್ಮೂಲ ತಜ್ಞರು ಸರಿಯಾದ ಕೌಶಲ್ಯವನ್ನು ಹೊಂದಿರುವ ದುರ್ಬಲ ವರ್ಗದವರು, ಯುವಜನತೆ ಮತ್ತು ಮಹಿಳೆಯರನ್ನು ಹುಡುಕುವ ಸಮಸ್ಯೆಯನ್ನು ಎದುರಿಸುತ್ತಿದಾರೆ. ಸಮಾಜದ ದುರ್ಬಲ ವರ್ಗದವರು, ಯುವಜನತೆ ಮತ್ತು ಮಹಿಳೆಯರು ಸಬಲೀಕರಣಗೊಂಡಾಗಲೇ ಕೌಶಲ್ಯ ಅಭಿವೃದ್ಧಿಯ ಪರಿಕಲ್ಪನೆ ನಿಜವಾಗುವುದೆಂದು ಮಾಜಿ ಶಾಸಕಿ ಸೀಮಾ ಅ. ಮಸೂತಿ ಹೇಳಿದರು.
ಕನರ್ಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರ, ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ಧಾರವಾಡ, ಕೆ.ಸಿ.ಸಿ. ಬ್ಯಾಂಕ ಧಾರವಾಡ, ಶಿವಶರಣೆ ಅಕ್ಕಮಹಾದೇವಿ ವಿವಿದೊದ್ದೇಶಗಳ ಸಹಕಾರಿ ಸಂಘ ಉಪ್ಪಿನ ಬೆಟಗೇರಿ ಮತ್ತು ಸಹಕಾರ ಇಲಾಖೆ, ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ 65ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಸಂಸ್ಥೆಗಳ ಮೂಲಕ ಕೌಶಲ್ಯ, ತಾಂತ್ರಿಕತೆ ವೃದ್ಧಿಪಡಿಸುವುದು ದಿನದ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೌಶಲ್ಯ ಅಭಿವೃದ್ಧಿ ವ್ಯವಸ್ಥೆ ಮಾಡಿದರೆ ಕೌಶಲ್ಯಪೂರ್ಣ ಅಭ್ಯಥರ್ಿಗಳು ದೊರಕಲು ಸಾಧ್ಯವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ.ಸಿ.ಸಿ. ಬ್ಯಾಂಕ ಹಾಗೂ ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಾಪುಗೌಡ ಡಿ. ಪಾಟೀಲ ಅವರು ಭಾರತದಲ್ಲಿ ಕೌಶಲ್ಯಾಭಿವೃದ್ಧಿ ಎಂಬ ಹೊಸ ಕಲ್ಪನೆಯನ್ನು ಕೇಂದ್ರ ಸಕರ್ಾರ ಜಾರಿಗೊಳಿಸಿದೆ. ಇದರಿಂದ ಯುವ ಜನರಲ್ಲಿ ಕೌಶಲ್ಯಾಭಿವೃದ್ಧಿ ಉಂಟಾಗಿ ಅವರನ್ನು ಸಬಲಗೊಳಿಸುವ ಪ್ರಯತ್ನ ಈ ಯೋಜನೆಯ ಉದ್ದೇಶವಾಗಿದೆ. ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಕೌಶಲ್ಯಾಭಿವೃದ್ಧಿ ಹೊಸ ಸಚಿವಾಲಯವನ್ನು ಸೃಷ್ಠಿಸಲಾಗಿದೆ. ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ನಬಾರ್ಡದಿಂದ ದೊರೆಯುವಂತಹ ಸಹಾಯ ಸೌಲಭ್ಯಗಳನ್ನು ಕೆ.ಸಿ.ಸಿ. ಬ್ಯಾಂಕ ಮುಖಾಂತರ ಒದಗಿಸುವುದಾಗಿ ಭರವಸೆ ನೀಡಿದರು.
ಮತ್ತೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ.ಸಿ.ಸಿ. ಬ್ಯಾಂಕ ನಿದರ್ೆಶಕ ಉಮೇಶ ಎಸ್. ಭೂಮಣ್ಣವರ ಅವರು ಮಹಿಳೆಯರು ಕೌಶಲ್ಯ ಬೆಳವಣಿಗೆಯ ಗುರಿ ಮುಟ್ಟಲು ಅಗತ್ಯ ಯೋಜನೆಗಳನ್ನು ರೂಪಿಸಿಕೊಂಡು ಗುರಿ ತಲುಪಲು ಕರೆ ನೀಡಿದರು.
ಸಹಕಾರ ಸಂಘಗಳ ಉಪ ನಿಬಂಧಕರಾದ ಸಾವಿತ್ರಿ ಕಡಿ ಅವರು ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಕೌಶಲ್ಯಾಭಿವೃದ್ಧಿಗೆ ಹೆಚ್ಚು ಒತ್ತು ನೀಡುವಂತೆ ಸಲಹೆ ನೀಡುತ್ತಿವೆ, ಕೌಶಲ್ಯಾಭಿವೃದ್ಧಿಗೆ ಅಗತ್ಯ ಹಣಕಾಸು ಸಂಪನ್ಮೂಲ ಕ್ರೂಡೀಕರಣಕೆ ಪ್ರಯತ್ನಾಸಲಾಗುತ್ತಿದೆ. ಇದಕ್ಕಾಗಯೇ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ ಎಂದರು.
ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ನಿದರ್ೆಶಕ ಬಾಳಪ್ಪ ಎನ್. ಕೇಶಗೊಂಡ, ಕೆಲಗೇರಿ ಶಿವಶಕ್ತಿ ವಿವಿಧೋದ್ದೇಶಗಳ ಸಹಕಾರ ಸಂಘ ಅಧ್ಯಕ್ಷ ವಿಜಯಲಕ್ಷ್ಮಿ ಲೂತಿಮಠ, ಜಿ.ಪಂ. ಸದಸ್ಯ ಕಲ್ಲಪ್ಪ ಚ. ಪುಡಕಲಕಟ್ಟಿ, ಗ್ರಾ.ಪಂ.ಉಪಾಧ್ಯಕ್ಷ ರತ್ನಾ ಶಿ. ವಿಜಾಪೂರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ರಾಮಲಿಂಗಪ್ಪ ಬ. ನವಲಗುಂದ, ಶಿವಶರಣೆ ಅಕ್ಕಮಹಾದೇವಿ ವಿವಿಧೋದ್ದೇಶಗಳ ಸಹಕಾರ ಸಂಘ ಅಧ್ಯಕ್ಷ ಅಕ್ಕಮಹಾದೇವಿ ರಾ. ನವಲಗುಂದ ಉಪಸ್ಥಿತರಿದ್ದು ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ ಧಾರವಾಡ ಜಿಲ್ಲಾ ಕೋ-ಆಫ್ ಪರ್ಚಜ & ಸೇಲ ಯೂನಿಯನ್ ಅಧ್ಯಕ್ಷ ಹಾಗೂ ಕೆ.ಸಿ.ಸಿ. ಬ್ಯಾಂಕಿನ ನಿದರ್ೆಶಕ ಮಂಜುನಾಥಗೌಡ ಶಂ. ಮುರಳ್ಳಿ ಸಮಾಜದ ಅಭಿವೃದ್ಧಿಯಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಸಮಾನ ಸ್ಥಾನ ಅಗತ್ಯ. ಈ ಸಮಾನತೆ ಸಾಧಿಸದೆ ಅಭಿವೃದ್ಧಿ ಸಾಧ್ಯವಿಲ್ಲ. ಸಹಕಾರಿ ಸಂಘಗಳು ಸ್ವಯಂ ಸೇವಾ ಸಂಘಗಳಾಗಿದ್ದು ಸಮಾನತೆಯನ್ನು ಸಾಧಿಸುವಲ್ಲಿ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದರು. ಅವರು ಮುಂದುವರೆದು ಮಹಿಳೆಯರು, ಯುವಕರು ಮತ್ತು ದುರ್ಬಲ ವರ್ಗದವರ ಸಬಲೀಕರಣ ಅರ್ಥ ವ್ಯವಸ್ಥೆಯ ಪ್ರಮುಖ ಲಕ್ಷಣಗಳಾಗಿವೆ ಎಂದರು. ಸದರ ಕಾರ್ಯಕ್ರಮದಲ್ಲಿ ಗಣ್ಯ ಮಾನ್ಯರನ್ನು ಸನ್ಮಾನಿಸಲಾಯಿತು. ಯೂನಿಯನ್ದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ತಳವಾರ ಉಪನ್ಯಾಸ ನೀಡಿದರು.
ಸಂಘದ ಕಾರ್ಯದಶರ್ಿ ಕಸ್ತೂರಿ ಯಲಿಗಾರ ಸ್ವಾಗತಿಸಿದರು. ಯೂನಿಯನ್ದ ಜಿಲ್ಲಾ ಸಹಕಾರ ಶಿಕ್ಷಕ ಸವಿತಾ ಕುರ್ಲಗೇರಿ ಹಿರೇಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.