ಕೌಶಲ್ಯ ಆಧಾರಿತ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿಯಾಗಬೇಕು:

ಕೌಶಲ್ಯ ಆಧಾರಿತ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿಯಾಗಬೇಕು:  Skill-based educational institutions should be developed:

ಬಳ್ಳಾರಿ  19: ಹೈದರಾಬಾದ್ ಕರ್ನಾಟಕದಲ್ಲಿ ಕೌಶಲ್ಯ ಆಧಾರಿತ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿಯಾಗಬೇಕು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ. ಮುನಿರಾಜು ಹೇಳಿದರು. 

ಇಲ್ಲಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ.ಆರ್‌. ಅಂಬೇಡ್ಕರ್ ಸಭಾಂಗಣದಲ್ಲಿ ಬುಧವಾರದಂದು ಬದುಕು ಸೆಂಟರ್ ಫಾರ್ ಲೈವಿಲಿಹುಡ್ಸ್‌ ಲರ್ನಿಂಗ್, ಬೆಂಗಳೂರು ಹಾಗೂ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಕನ್ನಡ ಅಧ್ಯಯನ ವಿಭಾಗದ ಸಂಯುಕ್ತ ಆಶ್ರಯದಲ್ಲಿ ‘ಸಮೂಹ ಸಂವಹನ ಮತ್ತು ಕನ್ನಡ’ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವವಿದ್ಯಾಲಯದ ಕುಲಸಚಿವರಾದ ಎಸ್‌.ಎನ್‌.ರುದ್ರೇಶ್ ಮಾತನಾಡಿ, ಸಾಹಿತ್ಯವು ಓದುಗರ ಬದುಕನ್ನು ಕಟ್ಟಿಕೊಳ್ಳವ ಕೆಲಸ ಮಾಡುತ್ತದೆ. ಸಾಹಿತ್ಯವನ್ನು ಅರಗಿಸಿಕೊಂಡು ಬೆಳೆದಷ್ಟು ವಿದ್ಯಾರ್ಥಿಗಳು ಅಭಿವೃದ್ದಿ ಹೊಂದುತ್ತಾರೆ. ವಿದ್ಯಾರ್ಥಿಗಳಿಗೆ ಗುರಿಯೊಂದೇ ಮುಖ್ಯವಲ್ಲ, ಗುರಿಯ ಜೊತೆಗೆ ಮಾರ್ಗವು ಮುಖ್ಯವಾಗಿರುತ್ತದೆ ಎಂದು ಹೇಳಿದರು.ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ.ಕೆ. ಸಂತೋಷ್ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಈ ಸಂದರ್ಭದಲ್ಲಿ ಬದುಕು ಸೆಂಟರ್ ಫಾರ್ ಲೈವಿಲಿಹುಡ್ಸ್‌ ಲರ್ನಿಂಗ್, ಬೆಂಗಳೂರು ಮಾಧ್ಯಮ ಅಧ್ಯಾಪಕರು ಹಾಗೂ ಲೇಖಕರಾದ ದಯಾನಂದ, ಕಲಾ ನಿಕಾಯದ ಡೀನರಾದ ಪ್ರೊ. ರಾಬರ್ಟ್‌ ಜೋಸ್, ಪ್ರದರ್ಶನ ಕಲೆ ನಾಟಕ ವಿಭಾಗದ ಮುಖ್ಯಸ್ಥರಾದ ಪ್ರೊ. ಎನ್‌. ಶಾಂತನಾಯ್ಕ್‌, ಡಾ. ಕೆ. ಎಸ್ ಶೀವಪ್ರಕಾಶ ವೇದಿಕೆ ಮೇಲೆೆ ಉಪಸ್ಥಿತರಿದ್ದರು. ವಿವಿಯ ಕನ್ನಡ ಅಧ್ಯಯನ ವಿಭಾಗದ ಉಪನ್ಯಾಸಕರಾದ ಡಾ. ಆರನಕಟ್ಟೆ ರಂಗನಾಥ ನಿರೂಪಿಸಿದರು. ಡಾ. ಶಕೀಲಾ ಕೆ ವಂದಿಸಿದರು. ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.