ಸದಾನಂದ ಮಜತಿ
ಬೆಳಗಾವಿ: ಉಪಚುನಾವಣೆ ಘೋಷಣೆಯಾದ ದಿನದಿಂದಲೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗೆದ್ದ ಎಲ್ಲ ಅನರ್ಹ ಶಾಸಕರಿಗೂ ಸಚಿವ ಸ್ಥಾನ ನೀಡಲಾಗುವುದು ಎಂದು ಹೇಳುತ್ತಲೇ ಇದ್ದಾರೆ. ಜೆತೆಗೆ ಹಿರಿಯ ಮುಖಂಡ ಉಮೇಶ ಕತ್ತಿ ಅವರಿಗೂ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಜತೆಗೆ ಗೆದ್ದ ಮೂವರು ಹಾಗೂ ಉಮೇಶ ಕತ್ತಿ ಸೇರಿ ಜಿಲ್ಲೆಯಿಂದ ಆರು ಶಾಸಕರು ಮಂತ್ರಿಗಳಾಗುತ್ತಾರೆ ಎಂಬುದು ಬಹುತೇಕರ ಲೆಕ್ಕಾಚಾರವಾಗಿದೆ.
ಆದರೆ ಇತ್ತೀಚಿನ ವಿದ್ಯಮಾನ ಗಮನಿಸಿದರೆ ಅಥಣಿಯಿಂದ ಗೆದ್ದ ಮಹೇಶ ಕುಮಠಳ್ಳಿ ಮತ್ತು ಕಾಗವಾಡದಿಂದ ಗೆದ್ದಿರುವ ಶ್ರೀಮಂತ ಪಾಟೀಲರಿಗೆ ಸಚಿವಗಿರಿ ಕೈತಪ್ಪಲಿದ್ದು, ನಿಗಮಮಂಡಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣ ಮೂಲ ಬಿಜೆಪಿಗರಿಂದ ಎದುರಾಗಿರುವ ಒತ್ತಡ. ಮೊದಲ ಹಂತದ ಸಂಪುಟ ವಿಸ್ತರಣೆ ವೇಳೆ ಅಸಮಾಧಾನ ಹೊರಹಾಕಿದ್ದ ಹಲವು ಮುಖಂಡರನ್ನು ಮುಂದೆ ನೋಡೋಣ ಎಂದು ಸುಮ್ಮನಿರಿಸಿದ್ದ ಬಿಎಸ್ವೈಗೆ ಈಗ ಆ ನಾಯಕರು ಮುಖ್ಯಮಂತ್ರಿ ದುಂಬಾಲು ಬಿದ್ದಿದ್ದಾರೆ. ಇವರಲ್ಲಿ ಉಮೇಶ ಕತ್ತಿ, ಮುರುಗೇಶ ನಿರಾಣಿ, ಅರವಿಂದ ಲಿಂಬಾವಳಿ, ರಾಜೂಗೌಡ ಸೇರಿದಂತೆ ಆಪ್ತರೇ ಹೆಚ್ಚಿರುವುದು ಬಿಎಸ್ವೈ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇತ್ತ ಮೊದಲಿನಂತೆ ಹೈಮಾಂಡ್ನತ್ತ ಬೆರಳು ತೋರಿಸುವಂತೆಯೂ ಇಲ್ಲ. ಅತ್ತ ಪಕ್ಷ ಸೇರ್ಪಡೆಗೊಂಡವರನ್ನು ನಿರ್ಲಕ್ಷಿಸುವಂತೆಯೂ ಇಲ್ಲ.
ಮೈತ್ರಿ ಸಕರ್ಾರದ ವಿರುದ್ಧ 17 ಶಾಸಕರು ಬಂಡಾಯ ಸಾರಿದ ವೇಳೆ ಎಲ್ಲ ಅನರ್ಹ ಶಾಸಕರಿಗೂ ಸಚಿವ ಸ್ಥಾನ ಕೊಡುವುದು ಹಾಗೂ ಅತೃಪ್ತರ ನೇತೃತ್ವ ವಹಿಸಿರುವ ರಮೇಶ ಜಾರಕಿಹೊಳಿ ಅವರಿಗೆ ಜಲಸಂಪನ್ಮೂಲ ಖಾತೆ ಜತೆಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಕುರಿತು ಮಾತುಕತೆಯಾಗಿತ್ತಂತೆ. ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಬಂಡಾಯ ಸಾರಿ ಕಾಂಗ್ರೆಸ್-ಜೆಡಿಎಸ್ಗೆ ರಾಜೀನಾಮೆ ನೀಡಿದ್ದ ಎಲ್ಲ 17 ಶಾಸಕರು ಸಚಿವರಾಗಿ ಉಪಚುನಾವಣೆ ಎದುರಿಸಬೇಕಿತ್ತು.
ಸ್ಪೀಕರ್ ರಮೇಶ್ಕುಮಾರ್ ಎಲ್ಲ 17 ಶಾಸಕರ ವಿರುದ್ಧ ಅನರ್ಹತೆಯ ಅಸ್ತ್ರ ಪ್ರಯೋಗಿಸಿದ್ದು, ಬಂಡಾಯ ಸಾರಿದ ಶಾಸಕರ ಲೆಕ್ಕಾಚಾರ ಬುಡಮೇಲಾಗುವಂತೆ ಮಾಡಿತು. ಬಳಿಕ ಪ್ರಕರಣ ಸುಪ್ರೀಂ ಅಂಗಳ ತಲುಪಿ ನ್ಯಾಯಾಲಯ ಅನರ್ಹತೆ ಎತ್ತಿ ಹಿಡಿದರೂ ಚುನಾವಣೆಗೆ ಸ್ಪಧರ್ಿಸಲು ಅವಕಾಶ ನೀಡಿದ್ದು ಅನರ್ಹರು ನಿಟ್ಟುಸಿರು ಬಿಡುವಂತೆ ಮಾಡಿತ್ತು. 15 ಶಾಸಕರಲ್ಲಿ ರಾಣೇಬೆನ್ನೂರು ಶಾಸಕ ಆರ್. ಶಂಕರ ಕಣದಿಂದ ಹಿಂದೆ ಸರಿದು 14 ಅನರ್ಹ ಉಪಚುನಾಚಣೆಯಲ್ಲಿ ಸ್ಪಧರ್ಿಸಿ 11 ಜನರು ಜಯಶಾಲಿಯಾಗಿದ್ದಾರೆ.
ಈಗ ಉಳಿದಿರುವ 16 ಸಚಿವ ಸ್ಥಾನಗಳಲ್ಲಿ 13ನ್ನು ಅನರ್ಹರಿಗೆ ನೀಡಿದರೆ ಉಳಿಯುವುದು ಮೂರು ಸ್ಥಾನ ಮಾತ್ರ. ಮೂರು ಸ್ಥಾನಗಳಿಗೆ ಸುಮಾರು ಆರೇಳು ಪ್ರಭಾವಿ ಮುಖಂಡರು ಒತ್ತಡ ಹೇರುತ್ತಿರುವುದು ಪರಿಸ್ಥಿತಿ ಇನ್ನಷ್ಟು ಜಟೀಲಗೊಳಿಸಿದೆ. ಅಲ್ಲದೆ ಬೆಳಗಾವಿ ಜಿಲ್ಲೆಗೆ ಆರು ಸಚಿವ ಸ್ಥಾನ ನೀಡಿದರೆ ಸಂಪುಟದಲ್ಲಿ ಪ್ರಾದೇಶಿಕ, ಸಮುದಾಯ ಪ್ರಾತಿನಿಧ್ಯದಲ್ಲಿ ಅಸಮತೋಲನ ಉಂಟಾಗಿ ಪಕ್ಷಕ್ಕೆ ಹಿನ್ನಡೆಯಾಗುವ ಭೀತಿ ಪಕ್ಷದ ವರಿಷ್ಠರಲ್ಲಿದೆ.
ರಮೇಶ ಗೆಲುವಿನಲ್ಲಿ ಉಮೇಶ ಕತ್ತಿ ಅವರ ಪಾತ್ರವೂ ಇದ್ದು, ಹಾಗಾಗಿ ಜಾರಕಿಹೊಳಿ ಸಹೋದರರು ಅವರ ಲಾಭಿ ನಡೆಸಿದ್ದಾರೆ. ಹೇಗೋ ಮಹೇಶ ಕುಮಠಳ್ಳಿ ಹಾಗೂ ಶ್ರೀಮಂತ ಪಾಟೀಲರು ಸಚಿವ ಸ್ಥಾನಕ್ಕೆ ಆಸೆಪಟ್ಟು ಕಾಂಗ್ರೆಸ್ ತೊರೆದವರಲ್ಲ. ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೊಡಿಸಿ ಗೆಲುವಿಗೆ ಅಗತ್ಯ ಸಹಾಯ, ಸಹಕಾರ ನೀಡಿದ ರಮೇಶ ಜಾರಕಿಹೊಳಿ ಮಾತಿಗೆ ಕಟ್ಟುಬಿದ್ದು ರಾಜೀನಾಮೆ ನೀಡಿ ಹೊರಬಂದವರು. ರಮೇಶ ಹಾಗೂ ಚಾಲಚಂದ್ರ ಜಾರಕಿಹೊಳಿ ಉಮೇಶ ಕತ್ತಿ ಪರ ಲಾಭಿ ಮಾಡುತ್ತಿರುವುದರಿಂದ ಇಬ್ಬರು ಶಾಕರ ಮನವೊಲಿಸುವ ಜವಾಬ್ದಾರಿ ಅವರಿಗೆ ವಹಿಸಿ ಮಹತ್ವದ ನಿಗಮ ಮಂಡಳಿ ಸ್ಥಾನ ನೀಡುವ ಫಾಮರ್ುಲಾ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಶಾಸಕರೂ ಒಪ್ಪಿಕೊಂಡಿದ್ದು, ಅಂದುಕೊಂಡಂತೆ ನಡೆದರೆ ಬೆಳಗಾವಿ ಜಿಲ್ಲೆಯಿಂದ ನಾಲ್ಕು ಜನ ಸಚಿವರು ಮಾತ್ರ ಯಡಿಯೂರಪ್ಪ ಸಂಪುಟದಲ್ಲಿರಲಿದ್ದಾರೆ.