ಲೋಕದರ್ಶನ ವರದಿ
ಗದಗ 16: 847ನೇ ಶಿವಯೋಗಿ ಸಿದ್ದರಾಮ ಜಯಂತಿಯನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಕನ್ನಡ ಮತ್ತು ಸಂಸ್ಕೃತ ಇಲಾಖೆ ಗದಗ ಇವರ ಸಹಯೊಗದಲ್ಲಿ ಗದಗ ನಗರದ ಸಿದ್ದರಾಮೇಶ್ವರ ನಗರದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಮೋಹನ ಡಿ. ದುರಗಣ್ಣವರ ಅಧ್ಯಕ್ಷರು ತಾಲೂಕು ಪಂಚಾಯತ್ ಗದಗ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಮಂಜುನಾಥ. ಆರ್.ಚವ್ಹಾಣ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳು ಜಿ.ಪಂ.ಗದಗ ಮಾತನಾಡಿ ಜಯಂತಿಯನ್ನು ಆಚರಿಸುವ ಮುಖ್ಯ ಉದ್ದೇಶ ಸಮಾಜಕ್ಕೆ ಸಿಮಿತವಾಗದೆ ಇತರೆ ಜನಾಂಗಕ್ಕೆ ಮಾದರಿಯಾಗಬೇಕು ಸಾಧಕರ ಚಂತನೆಯಿಂದ ನಮ್ಮ ಬದುಕನ್ನು ಬದಲಾಯಿಸಿಕೊಳ್ಳಬೇಕೆಂದು ಹೇಳಿದರು. ಉಪನ್ಯಾಸ ಡಾ.ಆರ್.ಎಚ್.ಜಂಗಣ್ಣವರ ಪ್ರಾಧ್ಯಾಪಕ ಉಪನ್ಯಾಸಕರು ಮುಂಡರಗಿ ಮಾತನಾಡಿ ಜಗತ್ತಿನ ದಾರ್ಶನಿಕರ ನೆನೆದು ಶಿವಯೋಗಿ ಸಿದ್ದರಾಮ ಒಬ್ಬರು ಅವರು ದೈವತ್ವವನ್ನು ಪಡೆದಿರುವ ಮಹಾನ್ ಶರಣರು ಲೋಕ ಕಲ್ಯಾಣಕ್ಕಾಗಿ ಜನಿಸಿದ ಸಿದ್ದರಾಮ ಬಾಲ್ಯದಲ್ಲಿ ದನಕಾಯುತ್ತಿದ್ದ ಜಂಗಮ ರೂಪದಲ್ಲಿ ಬಂದ ಶಿವನ್ನನ್ನು ಕಂಡು ನಂತರ ಆ ಜಂಗಮ ರೂಪ ಶಿವನನ್ನು ಹುಡುಕುತ್ತಾ ಶೈಲಕ್ಕೆ ತೆರಳಿ ಅಲ್ಲಿ ಸಾಕ್ಷಾತ್ಕಾರ ಮಾಡಿಕೊಂಡ ಮಹಾನ್ ವ್ಯಕ್ತಿ ಮುಂದೆ ಲೋಕ ಕಲ್ಯಾಣಕ್ಕಾಗಿ ಬದುಕನ್ನೆ ಮುಡುಪಾಗಿಟ್ಟ ಮಹಾನ್ ಶರಣ ಸೊಲ್ಲಾಪುರದ ಶಿವಯೋಗಿ ಸಿದ್ದರಾಮರು ಎಂದು ಉಪನ್ಯಾಸ ಮಾಡಿದರು.
ಪಿ. ಎಸ್. ಮಂಜುನಾಥ ಉಪ ವಿಭಾಗಾಧಿಕಾರಿಗಳು ಗದಗ ಮಾತನಾಡಿ ದಾರ್ಶನಿಕರ, ದೈವಿ ಪುರುಷರ ಜೀವನ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದು ಹೇಳಿದರು. ಇದೆ ಸಂದರ್ಭದಲ್ಲಿ ಭೋವಿ ಸಮಾಜದ ಗಣ್ಯರು ಮುಖಂಡರು ಭಾಗಿಯಾಗಿದ್ದರು. ಭೋವಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ಎಚ್.ವಾಯ್. ಸಂದಕದ, ಭೋವಿ ಸಮಾಜದ ಮುಖಂಡರಾದ ಆಯ್.ಎಫ್.ಬೇಟಗೇರಿ.ಇತರ ಸಮಾಜದ ಮುಖಂಡರು.