ಲೋಕದರ್ಶನವರದಿ
ಮುಧೋಳ: ವಿದ್ಯಾಥರ್ಿನಿಯರ ಜೊತೆಗೆ ಅಥವಾ ಯಾವುದೆ ಸ್ತ್ರೀಯರ ಜೊತೆಗೆ ಯಾರಾದರೂ ಅಸಭ್ಯವಾಗಿ ನಡೆದುಕೊಂಡರೆ ಅಂತಹ ಕಿಡಿಗೆಡಿಗಳ ಮೇಲೆ ಕೂಡಲೆ ಉಗ್ರ ಕಾನೂನು ಕ್ರಮ ಜರುಗಿಸಲಾಗುದೆಂದು ಪಿ.ಎಸ್,ಐ.ಶಿವಶಂಕರ ಮುಕರಿ ಎಚ್ಚರಿಕೆ ನೀಡಿದ್ದಾರೆ.
ನಗರದ ಬಿ.ಜಿ.ಎಂ.ಐ.ಟಿ. ಇಂಜಿನಿಯರಿಂಗ ಮಹಾವಿದ್ಯಾಲಯದಲ್ಲಿ ನಡೆದ ರ್ಯಾಂಗಿಗ್ ವಿರೋಧಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಶಾಂತಿ ಹಾಗೂ ಕಾನೂನು ಸುವ್ಯಸ್ಥೆಗೆ ಯಾರಾದರೊ ಭಂಗ ಉಂಟು ಮಾಡಿದರೆ ಅವರನ್ನು ಕೂಡಲೆ ಬಂಧಿಸಿ ಯೋಗ್ಯ ಕ್ರಮ ಜರುಗಿಸಲಾಗುದೆಂದು ಮುಕರಿ ಹೇಳಿ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ ಗಸ್ತು ಹೆಚ್ಚಿಸಲಾಗುವುದು, ಮತ್ತೂ ಅಂತಹ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಪೊಲೀಸ್ ಪಾಂಯಿಂಟ್ ಬುಕ್ಕ್ ಈಡಲಾಗುವುದೆಂದು ಅವರು ತಿಳಿಸಿದರು.
ರ್ಯಾಗಿಂಗ್ ವಿರೋಧಿ ಸಮಿತಿ ಸದಸ್ಯ ಹಾಗೂ ತಾಲೂಕಾ ದಂಡಾಧಿಕಾರಿ ಸಂಜಯ ಇಂಗಳೆ ಮಾತನಾಡಿ ನಗರದ ಯಾವುದೆ ಕಾಲೇಜನಲ್ಲಿ ಅಹಿತಕರ ಘಟನೆ ನಡೆದರೆ ತಮ್ಮ ಗಮನಕ್ಕೆ ತಂದರೆ ಕೂಡಲೆ ಪೊಲೀಸರನ್ನು ಅಲ್ಲಿಗೆ ಕಳಿಸಲಾಗುವುದೆಂದು ತಿಳಿಸಿದರು.
ಪತ್ರಕರ್ತ ಹಾಗೂ ಸಮಿತಿ ಸದಸ್ಯ ಅಶೋಕ ಕುಲಕಣರ್ಿ ಮಾತನಾಡಿ, ಈ ಕಾಲೇಜ್ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ರ್ಯಾಗಿಂಗ್ನಂತಹ ಒಂದು ಪ್ರಕರಣ ಜರುಗಿಲ್ಲವೆಂದು ಅಭಿಮಾನದಿಂದ ತಿಳಿಸಿದರು.
ಸಮಿತಿಯ ಅಧ್ಯಕ್ಷ ಹಾಗೂ ಕಾಲೇಜ ಪ್ರಾಚಾರ್ಯ ಡಾ.ಶ್ರವಣಕುಮಾರ ಕೆರೂರ ಪ್ರಸ್ತಾವಿಕವಾಗಿ ಮಾತನಾಡಿ ಕಾಲೇಜನಲ್ಲಿ ಶಾಂತಿ, ಸುವ್ಯವಸ್ಥೆ, ಹಾಗೂ ಶಿಸ್ತನ್ನು ಕಾಪಾಡಿಕೊಂಡು ಹೊಗಲು, ತಾಲೂಕಾಡಳಿತ ಹಾಗೂ ಜನತೆಯ ಸಹಕಾರವೇ ಕಾರಣವೆಂದು ಹೇಳಿದರು.
ಸಮಿತಿಯ ಸದಸ್ಯರಾದ ಚಂದ್ರಶೇಖರ ರೂಗಿ, ವಿಜಯಲಕ್ಷ್ಮಿ ಹಿರೇಮಠ,ವೀರಭದ್ರ ಭದ್ರೆ, ಸಚಿನ ಮಧಬಾವಿ,ಪ್ರೀಯಾಂಕಾ ಲಿಂಗಾಪೂರ,ಮಲ್ಲಪ್ಪ ಕೋಮಾರ, ಉಪಸ್ಥಿತರಿದ್ದರು, ಪಾಂಡುರಂಗ ಪಾಟೀಲ ಸ್ವಾಗತಿಸಿದರು, ಭದ್ರೆ ವಂದಿಸಿದರು.