ಲೋಕದರ್ಶನ ವರದಿ
ಕೊಪ್ಪಳ 01: ವಿಶ್ವ ಹಿಂದು ಪರಿಷತ್ನ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ಬಿಜೆಪಿ ಪಕ್ಷದ ಯುವ ಮುಖಂಡ ಶಿವಕುಮಾರ ಹಕ್ಕಾಪಕ್ಕಿಯವರನ್ನು ಆಯ್ಕೆ ಮಾಡಲಾಗಿದೆ.
ನಗರದ ಕಿನ್ನಾಳ ರಸ್ತೆಯಲ್ಲಿರುವ ವಿಸ್ಡಂ ಕೋಚಿಂಗ್ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ವಿಶ್ವ ಹಿಂದು ಪರಿಷತ್ನ ಉತ್ತರ ಪ್ರಾಂತ ಸಂಘಟನಾ ಕಾರ್ಯದಶರ್ಿ ಮಹಾಬಳೇಶ್ವರ ಹೆಗಡೆಯವರು ಈ ಆಯ್ಕೆಯನ್ನು ಘೋಷಿಸಿದರು.
ಗೌರವಾಧ್ಯಕ್ಷ ವಿಹಿಂಪ ಹಿಂದಿನ ಜಿಲ್ಲಾಧ್ಯಕ್ಷ ಈಶಣ್ಣ ಬಳ್ಳೊಳ್ಳಿ, ಉಪಾಧ್ಯಕ್ಷರಾಗಿ ಅಮರಸಿಂಗ್ ಮತ್ತು ಪ್ರಕಾಶಕುಮಾರ, ಜಿಲ್ಲಾ ಕಾರ್ಯದಶರ್ಿಯಾಗಿ ವೇಣುಗೋಪಾಲ ಜಾಗೀರದಾರ, ಸಹ ಕಾರ್ಯದಶರ್ಿಯಾಗಿ ಮರಿಶಾಂತಗೌಡ ಮಾಲಿಪಾಟೀಲ್, ಕೊಪ್ಪಳ ನಗರಧ್ಯಕ್ಷರಾಗಿ ದಾಮೋದರ ವಣರ್ೇಕರ್, ನಗರ ಕಾರ್ಯದಶರ್ಿಯಾಗಿ ರಮೇಶ ಜಾಗೀರದಾರ ಹಾಗೂ ಗ್ರಾಮೀಣ ಕಾರ್ಯದಶರ್ಿಯಾಗಿ ಚೇತನ್ ಅವರನ್ನು ಆಯ್ಕೆಗೊಳಿಸಲಾಯಿತು.
ಪ್ರಾಸ್ತವಿಕವಾಗಿ ಬಿಜೆಪಿ ಮುಖಂಡ ಅಪ್ಪಣ್ಣ ಪದಕಿ ಮಾತನಾಡಿ ವಿಶ್ವ ಹಿಂದು ಪರಿಷತ್ 80ರ ದಶಕದಲ್ಲಿ ಆಗಿನ ಕೊಪ್ಪಳ ತಾಲೂಕಿನಲ್ಲಿ ಸಂಘಟನೆ ಹರಡಿದ ರೀತಿಯನ್ನು ವಿವರಿಸಿದರು. ಗೋಹತ್ಯೆ ನಿಷೇಧ, ವ್ಮತಾಂತರ ತಡೆ, ವಿವಿಧ ಘಟಕಗಳ ಪುನಾರಚನೆ ಜಿಲ್ಲೆಯಲ್ಲಿ ಸಂಘಟನೆಯನ್ನು ಮತ್ತೆ ಬಲಪಡಿಸುವ ಕ್ರಮಗಳ ಕುರಿತು ಹೊಸ ಪದಾಧಿಕಾರಿಗಳು ಕಾಯರ್ೋನ್ಮುಖರಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಹಿಂಪ ಉತ್ತರ ಪ್ರಾಂತ ಸಂಘಟನಾ ಕಾರ್ಯದಶರ್ಿ ಮಹಾಬಳೇಶ್ವರ ಹೆಗಡೆ ಅವರು ಸಂಘಟನೆಯ ಒಟ್ಟಾರೆ ಧ್ಯೇಯೋದ್ದೇಶಗಳನ್ನು ವಿವರಿಸಿದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಿವಕುಮಾರ ಹಕ್ಕಾಪಕ್ಕಿ ಮಾತನಾಡಿ ಹಿರಿಯರ ಮಾರ್ಗದರ್ಶನದಲ್ಲಿ ಸಂಘಟನೆಯನ್ನು ಜಿಲ್ಲೆಯಲ್ಲಿ ಬಲಪಡಿಸಲಾಗುವುದು ವಿವಿಧ ಘಟಕಗಳಿಗೆ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲು ಶೀಘ್ರ ಸಭೆಯನ್ನು ಕರೆಯುವುದಾಗಿ ತಿಳಿಸಿದರು.
ಸೇವಾ ಸಮಿತಿ ಅಧ್ಯಕ್ಷ ಗವಿಸಿದ್ದಪ್ಪ ಕಂದಾರಿ, ಬಿಜೆಪಿ ಯುವ ಮುಖಂಡರಾದ ಹಾಲೇಶ ಕಂದಾರಿ, ದೇವರಾಜ್ ಹಾಲಸಮುದ್ರ, ರಾಘವೇಂದ್ರ ಸೇರಿದಂತೆ ವಿಹಿಂಪ ಸಂಘಟನೆಯ ಹಲವಾರು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು ಎಂದು ತಿಳಿಸಿದ್ದಾರೆ.