ಸಿರುಗುಪ್ಪ: ಶಬ್ ಎ ಮೆರಾಜ್ ಉನ್ ನಬಿ ಇಸ್ಲಾಂ ನ ಪವಿತ್ರ ರಾತ್ರಿ ಸೌದಾಗರ್ ಮಜೀದ್ ನಲ್ಲಿ ಆಚರಣೆ
Siruguppa: Shab-e-Meraj-un-Nabi, the holy night of Islam, celebrated at Saudagar Masjid
ಸಿರುಗುಪ್ಪ 18: ಮುಖದ್ದಸ್ ನೂರಾನಿ ರಾತ್ ಶಬ್ ಎ ಮೆರಾಜ್ ಉನ್ ನಬಿ ಸೊಲ್ಲೆಲ್ಲಾಹು ಅಲೈಹಿವ ಸಲ್ಲಂ ಪ್ರತಿಯೊಬ್ಬ ಮುಸ್ಲಿಮರು ಇಸ್ಲಾಂ ನ ಪವಿತ್ರ ರಾತ್ರಿಯ ವಿಶೇಷತೆ ತಿಳಿದುಕೊಳ್ಳಬೇಕು ಇಸ್ಲಾಂ ನಲ್ಲಿ ಇದನ್ನು ಅತ್ಯಂತ ಪವಿತ್ರ ರಾತ್ರಿ ಎಂದು ಪರಿಗಣಿಸಲಾಗಿದೆ ಈ ರಾತ್ರಿ ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರ್ ಸೊಲ್ಲೆಲ್ಲಾಹು ಅಲೈಹಿವ ಸಲ್ಲಂ ಅವರು ಅಲ್ಲಾಹನಿಂದ ವಿಶೇಷ ಗೌರವನ್ನು ಪಡೆದರು ಶಬ್ ಏ ಮೆರಾಜ್ ಇಸ್ಲಾಮಿನ ಜನ್ಮ ವಾರ್ಷಿಕ ಉತ್ಸವ ವಾಗಿದೆ ಇದು ಮಹತ್ವದ ರಾತ್ರಿ ಈ ರಾತ್ರಿ ಒಂದು ಗಮನಾರ್ಹವಾದ ಪವಾಡದ ಘಟನೆ ಸಂಭವಿಸಿದೆ ಪವಿತ್ರವಾದ ಖುರಾನ್ ಈ ರಾತ್ರಿಯ ಘಟನೆಗಳನ್ನು ಅಲ್ ಇಸ್ರಾ ವಲ್ ಮೆರಾಜ್ ಎಂದು ಉಲ್ಲೇಖಿಸುತ್ತದೆ ಶಬ್ ಏ ಮೆರಾಜ್ ಉನ್ ನಬಿಯನ್ನು ಯಾವಾಗ ಮತ್ತು ಏಕೆ ಆಚರಿಸಲಾಗುತ್ತದೆ ಎಂಬುದನ್ನು ನಾವೆಲ್ಲರೂ ಕಲಿಯೋಣ ಎಂದು ಮೌಲಾನ ಖಲೀಫಾ ಎಸ್ ಅಬ್ದುಲ್ ಸಮದ್ ನಿಜಾಮಿ ಬಂದಾನವಾಜಿ ಕಾಮಿ ಉಲ್ ಹಾದೀಸ್ ಜಾಮಿಯಾ ನಿಜಾಮಿಯಾ ಹೈದರಾಬಾದ್ ಅವರು ಹೇಳಿದರು
ಸಿರುಗುಪ್ಪ ನಗರದ ಸೌದಾಗರ್ ಜುಮ್ಮ ಸುನ್ನಿ ಮಸ್ಜಿದ್ ನಲ್ಲಿ ಮುಖದ್ದಸ್ ನೂರಾನಿ ರಾತ್ ಶಬ್ ಏ ಮೇರಾಜ್ ಉನ್ ನಬೀ ಸೊಲ್ಲೆಲ್ಲಾಹು ಅಲೈಹಿವಾ ಸಲ್ಲಂ ನಮಾಜ್ ಎ ಇಶಾ ವಿಶೇಷ ನಫೀಲ್ ನಮಾಜ್ ನಲ್ಲಿ ಸಮುದಾಯದ ಸರ್ವರನ್ನು ಉದ್ದೇಶಿಸಿ ಅವನು ಬಯಾನ್ ಭಾಷಣ ಉಪನ್ಯಾಸದಲ್ಲಿ ಅಲ್ಲಾಹನ ರಸೂಲರ ಜಗದ್ಗುರುಗಳ ಆದರ್ಶ ಗುಣ ತತ್ವ ಸಿದ್ಧಾಂತ ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಅನುಸರಿಸಬೇಕು ಎಂದು ಕರೆ ಕೊಟ್ಟರು ಖುರಾನ್ ಖಿರಾತ್ ನಾತ್ ದುವಾ ಆಶೀರ್ವಚನ ನೀಡಿದರು ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಬಳ್ಳಾರಿ ಜಿಲ್ಲಾ ಮಾಜಿ ಸದಸ್ಯರು ಸಮಾಜ ಸುಧಾರಕ ಅಲ್ ಹಾಜ್ ಎ ಅಬ್ದುಲ್ ನಬಿ ಚಿಸ್ತಿ ನಿಜಾಮಿ ಅವರ ಸಲಾತೊ ಸಲಾಂ ಗೆ ಸಮುದಾಯದ ಎಲ್ಲರೂ ಧ್ವನಿಗೂಡಿಸಿ ಹೇಳಿದರು ಸರ್ವರಿಗೂ ಪ್ರಸಾದ ವಿತರಿಸಲಾಯಿತು ಸಾಮಾಜಿಕ ಕಾರ್ಯಕರ್ತ ಡಾ ಮೊಹಮ್ಮದ್ ಅಲಿ ಮಸೀದಿಯ ಅಧ್ಯಕ್ಷ ಮಕಾಂದರ್ ಮೆಹಬೂಬ್ ಬಾಷಾ ಸೌದಾಗರ್ ಹಾಜಿ ಮೊಹಮ್ಮದ್ ಇಲಿಯಾಸ್ ಖತೀಬ್ ಜಹೀರುದ್ದೀನ್ ಬಾಬು ಮೊಹಮ್ಮದ್ ನೌಶಾದ್ ಅಲಿ ಹಂಡಿ ಹುಸೇನ್ ನಿಜಾಮಿ ಸಮುದಾಯದವರು ಪರಸ್ಪರ ವಿನಿಮಯದೊಂದಿಗೆ ಶುಭ ಹಾರೈಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 