ಲೋಕದರ್ಶನ ವರದಿ
ಸಿರುಗುಪ್ಪ 21: ಕರ್ನಾಟಕದ ದಸರಾ ಹಬ್ಬ ನಾಡಹಬ್ಬವಾಗಿದೆ. ಮೈಸೂರು ಸಂಸ್ಥಾನದ ಅರಸು ವೈಭವದಿಂದ ಆಚರಿಸುತ್ತಿದ್ದರು ಎಂದು ಶಾಸಕ ಸೋಮಲಿಂಗಪ್ಪ ಹೇಳಿದರು
ನಗರದ ತಾಲೂಕು ಕ್ರೀಡಾಂಗಣದಲ್ಲಿ ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್ ಯುವಜನ ಸೇವೆ ಸಬಲೀಕರಣ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಿಂದ ತಾಲ್ಲೂಕು ಮಟ್ಟದ ದಸರಾ ಕ್ರೀಡಾವನ್ನು ಉದ್ಘಾಟಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಕ್ರೀಡೆಗಳನ್ನು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ದೇಶಕ್ಕೆ ಮಾದರಿ ಅರಸರ ಪರಂಪರೆಯನ್ನು ರಾಜ್ಯ ಸರ್ಕಾರ ಮುಂದುವರಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಭಜಂತ್ರಿ ಸರ್ವರನ್ನು ಸ್ವಾಗತಿಸಿದರು. ಸದಸ್ಯ ಎ.ಅಬ್ದುಲ್ ನಬಿ ಭಾವಗೀತೆ ಹಾಡಿದರು. ವಿಜಯರಂಗಾರೆಡ್ಡಿ ನಿರೂಪಿಸಿದರು. ದೇವಮ್ಮ, ಫಕ್ಕೀರಪ್ಪ, ಈರಣ್ಣ, ರಮೇಶ್, ಚೆನ್ನಪ್ಪ, ಉಪೇಂದ್ರ, ವೈ.ಡಿವೆಂಕಟೇಶ್, ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಶಾದ್ ಅಲಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಕ್ರೀಡಾಕೂಟಕ್ಕೆ ಕ್ರೀಡಾಪಟುಗಳು ಆಗಮಿಸಿದ್ದರು ಆರಂಭದಲ್ಲಿ ನಾಡಗೀತೆ ಹಾಡಲಾಯಿತು.