ಸಿರುಗುಪ್ಪ: ಕೋಮುವಾದ ಪಕ್ಷಕ್ಕೆ ಸೋಲಿಸಿ: ಸಿದ್ದರಾಮಯ್ಯ

ಲೋಕದರ್ಶನ ವರದಿ

ಸಿರುಗುಪ್ಪ 19: ಅನ್ನಭಾಗ್ಯ, ಕ್ಷೀರ ಭಾಗ್ಯ, ಆರೋಗ್ಯ ಭಾಗ್ಯ, ರೈತರ ಬೆಳೆ ಸಾಲ ಮನ್ನಾ ಕರ್ನಾಟಕ ವಿಶೇಷ ಸ್ಥಾನಮಾನ ನೀಡಿದೆ ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಇದ್ದೇನೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಿಗೆ  ಮತದಾನ ಮಾಡಿ ಬೆಂಬಲ ನೀಡಬೇಕು ಎಂದು ಕನರ್ಾಟಕ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹೇಳಿದರು 

ನಗರದ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಕಾಂಗ್ರೆಸ್ ಜೆಡಿಎಸ್ ಹಮ್ಮಿಕೊಂಡ ಬೃಹತ್ ಲೋಕಸಭಾ ಚುನಾವಣೆ ಬಿರುಸಿನ ಪ್ರಚಾರದಲ್ಲಿ ಅವರು ಮಾತನಾಡಿ ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಯಿವರಿಗೆ ಅತ್ಯಂತ ಅಮೂಲ್ಯ ಮತದಾನ ಮಾಡಿ ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಮಾಜಿ ಸಚಿವರಾದ ಬಸವರಾಜ ರಾಯರೆಡ್ಡಿ, ಮಾಜಿ ಶಾಸಕರಾದ, ಬಿ.ಯಂ.ನಾಗರಾಜ, ಚಂದ್ರಶೇಖರಯ,  ಕೆಪಿಸಿಸಿ ಯುವ ಅಧ್ಯಕ್ಷ ಬಾವಲಿ ಬಸನಗೌಡ, ಮಾಜಿ ಶಾಸಕ ಬಾದಲರ್ಿ ಹಂಪನಗೌಡ,ಮಲ್ಲಿಕಾರ್ಜುನ  ಸ್ವಾಮಿ, ಕರಿಬಸಪ್ಪ, ಸವಿತಾ ಅರುಣ ಪ್ರತಾಪರೆಡ್ಡಿ, ಹುಚಿರಪ, ಮೊಹಮ್ಮದ್ ನೂರಲ್ಲ, ಮಲ್ಲಿಕಾರ್ಜುನ , ಮುಖಂಡರು ಕಾರ್ಯಕರ್ತರು ಭಾಗವಹಿಸಿ ಕೋಮುವಾದಿ ಸಂವಿಧಾನ ವಿರೋಧಿಗಳನ್ನು  ಸೋಲಿಸಬೇಕು ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ರಾಹುಲ್ ಗಾಂಧಿ ಅವರು ಪ್ರಧಾನ ಮಂತ್ರಿ ಆಗಬೇಕು ಎಂದುಆಶೀರ್ವಾದ  ಪ್ರತಿಯೊಬ್ಬರು ಮಾಡಬೇಕು ಎಂದು ಮತದಾರರಲ್ಲಿ ಮತ ಯಾಚಿಸಿದರು.