ಸಿರುಗುಪ್ಪ: ನಿರಂತರ ಸುರಿದ ಮಳೆ

ಲೋಕದರ್ಶನ ವರದಿ

ಸಿರುಗುಪ್ಪ 20: ತಾಲ್ಲೂಕಿನಲ್ಲಿ ಸುರಿದ ಎರಡು ದಿನಗಳ ಮಳೆಗೆ ಹಗರಿ ನದಿ ಹಳ್ಳ ಕೊಳ್ಳಗಳು ನೀರು ತುಂಬಿ ಎಲ್ಲವೂ ತಾಲ್ಲೂಕಿನ ಸಿರಿಗೇರಿ ಹೊರತುಪಡಿಸಿ ಬಿದ್ದ ಉತ್ತಮ ಮಳೆಯಾಗಿದೆ. ಸಿರುಗುಪ್ಪ 37ಮಿ.ಮೀ.ಹಚ್ಚೊಳ್ಳಿ 19.4ಮಿ.ಮೀ, ಕೆಬೆಳಗಲ್ಲು 21.6ಮಿ.ಮೀ, ಮಣ್ಣೂರು ಸೂಗೂರು 1.6ಮಿ.ಮೀ, ತೆಕ್ಕಲಕೋಟೆ 11.8 ಮಿ.ಮೀ, ರಾವಿಹಾಳು 25.2 ಮಿ.ಮೀ, ಕರೂರು 6.4 ಮಿ.ಮೀ, ಮಳೆಯಾದ ಬಗ್ಗೆ ವರದಿಯಾಗಿದೆ.  

           ಬಳ್ಳಾರಿ ಮೇಲ್ಭಾಗದಲ್ಲಿ ಸುರಿಯುತ್ತಿರುವ ಬಿದ್ದ ಮಳೆ ನೀರಿನ ರಾರಾವಿ ಹತ್ತಿರದ ಹಗರಿನದಿ ಹಳ್ಳ ತುಂಬಿ ಹರಿದವು. ಕರೂರು ಹತ್ತಿರದ ಹಿರೇಹಳ್ಳ ಉಪಹಳ್ಳಗಳು ಮೈದುಂಬಿ ಮತ್ತು ಹಾಗಲೂರು ಹೊಸಳ್ಳಿ ಹತ್ತಿರ ಹಳ್ಳ ತುಂಬಿ ಹರಿಯುವ ನೀರಿನಿಂದ ಭತ್ತದ ಗದ್ದೆಗಳಲ್ಲಿ ನಾಟಿ ಮಾಡಿದ ಸಾವಿರಾರು ರೂ ವೆಚ್ಚ ಮಾಡಿ ಸಸಿ ನೆಟ್ಟಿದ್ದು ಕೊಚ್ಚಿಹೋಗಿವೆ. ತಾಲ್ಲೂಕಿನ ಇತರ ಕಡೆ ನೀರು ಗದ್ದೆಗಳಲ್ಲಿ ನುಗ್ಗಿ ಭತ್ತದ ನೆಲ್ಲು ಗದ್ದೆಗಳಲ್ಲಿ ಹಚ್ಚಿದ ಸಸಿಗಳು ಬೆಳಕಾಗುವಷ್ಟರಲ್ಲಿ ಕೊಚ್ಚಿಹೋಗಿವೆ. 

          ತಹಸೀಲ್ದಾರ್ ದಯಾನಂದ ಹೆಚ್ ಪಾಟೀಲ್ ಮಾತನಾಡಿ ತಾಲ್ಲೂಕಿನಲ್ಲಿ ಎರಡು ದಿನಗಳಿಂದ ಸುರಿದ ಉತ್ತಮ ಬಿದ್ದ ಮಳೆ ಸುರಿದ ಮಳೆಗೆ ಯಾವುದೇ ಹಾನಿಯಾಗಿಲ್ಲ ಹಳ್ಳ ಕೊಳ್ಳಗಳ ಜಮೀನು ಮುಳುಗಿದ್ದು ನೀರಿನ ಪ್ರಮಾಣ ಕಡಿಮೆಯಾದ ಬಳಿಕ ಜಂಟಿ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದರು.