ಲೋಕದರ್ಶನ ವರದಿ
ಸಿರುಗುಪ್ಪ 24: ನಗರದ ತಾಲ್ಲೂಕು ಕ್ರೀಡಾಂಗಣ ಕಟ್ಟಡದ ಗ್ಯಾಲರಿಯ ಮೇಲ್ಚಾವಣೆಯ ಒಂದು ಭಾಗದ ಸಜ್ಜಾ ಕುಸಿದು ಸದಾಶಿವ ನಗರದ ನಿವಾಸಿ ಶಿವಕುಮಾರ್ 32 ಸ್ಥಳದಲ್ಲಿಯೇ ಮೃತಪಟ್ಟರು. ತಾಲ್ಲೂಕಿನ ಕೆ.ಬೆಳಗಲ್ಲು ಗ್ರಾಮದ ಐಟಿಐ ವಿದ್ಯಾರ್ಥಿ ಚಿಗಳಿ ರಾಮು 18 ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಗೆ ಕರೆದೊಯ್ಯುವಾಗ ಸಾವನೊಪ್ಪಿದರು. 25ಕ್ಕೂ ಹೆಚ್ಚು ಜನರಿಗೆ ಗಾಯಗೊಂಡರು. ನಗರದ ಜನತೆಯನ್ನು ತಲ್ಲಣಗೊಳಿಸಿದೆ.
ಹಚ್ಚೊಳ್ಳಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟವನ್ನು ವೀಕ್ಷಿಸಲು ವಿದ್ಯಾಥರ್ಿಗಳು ಮತ್ತು ಸ್ಥಳಿಯರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಸಣ್ಣಪುಟ್ಟ ಗಾಯಗಳಾಗಿರುವವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಮತ್ತು ಸಿರುಗುಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಶಾಸಕ ಎಂ.ಎಸ್.ಸೋಮಲಿಂಗಪ್ಪ, ಕೊಪ್ಪಳ ಲೋಕಸಭಾ ಸದಸ್ಯರು ಕರಡಿ ಸಂಗಣ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ನಿತೀಷ್, ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಸಿ.ಕೆ.ಬಾಬಾ, ತಹಶಿಲ್ದಾರ್ ದಯಾನಂದ ಹೆಚ್ ಪಾಟೀಲ್, ಸಚಿವ ಬಿ.ಶ್ರೀರಾಮುಲು, ಪಿಲ್ ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸವನಗೌಡ, ಲೋಕ ಶಿಕ್ಷಣ ಸಮಿತಿ ಸದಸ್ಯ ಎ.ಅಬ್ದುಲ್ ನಬೀ ಮತ್ತಿತರರು ಗಾಯಗೊಂಡವರಿಗೆ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಸಾರ್ವಜನಿಕರು ಸಂಪೂರ್ಣ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ಈ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.