ಕೌಲಾಲಂಪುರ (ಮಲೇಷ್ಯಾ), ಏ 22,ಬ್ಯಾಡ್ಮಿಂಟನ್ ವಿಶ್ವ ಫೆಡರೇಷನ್ (ಬಿಡಬ್ಲ್ಯುಎಫ್) ವಿಶ್ವ ಚಾಂಪಿಯನ್ ಪಿ.ವಿ. ಸಿಂಧೂ ಅವರನ್ನು ತನ್ನ ' ಐ ಆ್ಯಮ್ ಬ್ಯಾಡ್ಮಿಂಟನ್ ' ಜಾಗೃತಿ ಅಭಿಯಾನದ ರಾಯಭಾರಿಗಳಲ್ಲಿ ಒಬ್ಬರಾಗಿ ಬುಧವಾರ ಹೆಸರಿಸಿದೆ.ಈ ಅಭಿಯಾನವು ಆಟಗಾರರನ್ನು ಬ್ಯಾಡ್ಮಿಂಟನ್ ಕುರಿತು ತಮ್ಮ ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸಲು ಮತ್ತು ಸ್ವಚ್ಛ ಹಾಗೂ ಪ್ರಾಮಾಣಿಕ ಆಟಕ್ಕೆ ಪ್ರತಿಪಾದಿಸುವ ಮೂಲಕ ಬದ್ಧರಾಗುವ ವೇದಿಕೆಯನ್ನು ಒದಗಿಸುತ್ತದೆ.ಯಾವುದೇ ಕ್ರೀಡೆಯಲ್ಲಿ ಸ್ವಚ್ಛ ಮತ್ತು ಪ್ರಾಮಾಣಿಕತೆಯ ಆಟವಾಡುವುದು ಬಹಳ ಮುಖ್ಯ ಎಂದು 24 ವರ್ಷದ ಷಟ್ಲರ್ ಸಿಂಧೂ ಹೇಳಿದ್ದಾರೆ. '' ಈ ಸಂದೇಶ ಒಂದೇ ಧ್ವನಿಯಲ್ಲಿ ಆರಂಭವಾಗುತ್ತದೆ. ನಾವು ರಾಯಭಾರಿಗಳಾಗಿ ಇದನ್ನು ಪ್ರಚಾರ ಮಾಡಲು ಸಾಧ್ಯವಾದರೆ, ಇದು ಮತ್ತಷ್ಟು ಆಟಗಾರರಿಗೆ ಹರಡುತ್ತದೆ ಎಂದು ನಾವು ಭಾವಿಸುತ್ತೇನೆ. ನೀವು ನಿಮಗಾಗಿ ಕ್ರೀಡೆಯನ್ನು ಆಡುತ್ತಿದ್ದೀರಿ. ನೀವು ಅದರ ಬಗ್ಗೆ ಸಂತೋಷವಾಗಿರಬೇಕು. ನೀವು ಅದನ್ನು ತುಂಬಾ ಸ್ವಚ್ಛವಾಗಿ ಆಡಬೇಕು. ಅದು ನನಗೆ ಬಹಳ ಮುಖ್ಯ, '' ಎಂದು ಸಿಂಧೂ ಹೇಳಿದ್ದಾರೆ.
ಬಿಡಬ್ಲ್ಯುಎಫ್ ನ ಸಮಗ್ರತೆ ಘಟಕ ರಚನೆಯಾಗಿ ಐದು ವರ್ಷಗಳಾಗಿವೆ ಮತ್ತು ಈ ಬಾರಿಯ ಅಭಿಯಾನ ಆಡಳಿತ ಮಂಡಳಿಯು ಸಮಗ್ರತೆಗೆ ತನ್ನ ಮಾರ್ಗವನ್ನು ತಿಳಿಸುವ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿದೆ..ಸಿಂಧೂ ಜತೆಗೆ ಇತರ ರಾಯಭಾರಿಗಳ ಪೈಕಿ ಕೆನಡಾದ ಮಿಚೆಲ್ ಲಿ, ಚೀನಾದ ಜೆಂಗ್ ಸಿ ವೀ ಮತ್ತು ಹುವಾಂಗ್ ಯಾ ಕಿಯೊಂಗ್ , ಇಂಗ್ಲೆಂಡ್ ನ ಜ್ಯಾಕ್ ಶೆಫರ್ಡ್, ಜರ್ಮನಿಯ ವೇಲೆಸ್ಕಾ ನಾಬ್ಲಾಚ್, ಹಾಂಕಾಂಗ್ ನ ಚಾನ್ ಹೋ ಯುಯೆನ್ ಮತ್ತು ಜರ್ಮನಿಯ ಮಾರ್ಕ್ ಜ್ವಿಬ್ಲೆರ್ ಸೇರಿದ್ದಾರೆ. "ಹೊಸ ಬ್ಯಾಚ್ ನ ರಾಯಭಾರಿಗಳು 2016 ರಿಂದ ಅಭಿಯಾನವನ್ನು ಮುನ್ನಡೆಸಿದ ಹಿಂದಿನ ಮತ್ತು ಪ್ರಸ್ತುತ ಹಲವು ಗಣ್ಯ ಆಟಗಾರರ ಶ್ರೇಷ್ಠ ಕಾರ್ಯವನ್ನು ಮುಂದುವರಿಸಲಿದ್ದಾರೆ," ಎಂದು ಬಿಡಬ್ಲ್ಯಎಫ್ ಹೇಳಿಕೆಯಲ್ಲಿ ತಿಳಿಸಿದೆ.