ಸಿಂದಗಿ: ನಾಳೆ ಹಿಂದೂ ರಾಷ್ಟ್ರ ಜಾಗೃತಿ ಸಭೆ

ಲೋಕದರ್ಶನ ವರದಿ

ಸಿಂದಗಿ 14: ಹಿಂದೂ ಧರ್ಮದ ಮೇಲೆ ಅನೇಕ ರೀತಿಯಲ್ಲಿ ಅಕ್ರಮಣಗಳು ನಡೆಯುತ್ತಿದೆ. ಧರ್ಮ ಪರಂಪರೆಗಳ ಭಗ್ನ ಮಾಡುವುದು, ಹಿಂದೂ ದೇವತೆಗಳ, ಸಂತರ ಅಪಮಾನ ಮಾಡುವುದು ಸೇರಿದಂತೆ ಅನೇಕ ಪ್ರಕರಣಗಳು ಅವ್ಯವಾಹತವಾಗಿ ನಡೆಸುತ್ತ ಬರಲಾಗುತ್ತಿದ್ದು ಇದನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಹಿಂದೂ ರಾಷ್ಟ್ರ ನಿಮರ್ಾಣಕ್ಕಾಗಿ ಇದೇ 16 ರಂದು ರವಿವಾರ ಸಾಯಂಕಾಲ 5.30 ಗಂಟೆಗೆ ಪಟ್ಟಣದ ಜ್ಯೋತಿ ನಗರದ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ ಹಮ್ಮಿಕೊಂಡಿದ್ದು ಕಾರಣ ತಾಲೂಕಿನ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಂಚಾಲಕ ವೆಂಕಟರಮಣ ನಾಯ್ಕ ಕರೆ ನೀಡಿದರು.

ಈ ಸಭೆಗಳ ಮಾದ್ಯಮದಿಂದ ಹಿಂದೂ ಧಮರ್ಿಯರಲ್ಲಿ ಸ್ವಧರ್ಮದ ಬಗ್ಗೆ ಸ್ವಾಭಿಮಾನವನ್ನು ಜಾಗೃತಿಗೊಳಿಸಲಾಗುತ್ತಿದೆ. ಇದುವರೆಗೆ 13 ರಾಜ್ಯಗಳಲ್ಲಿ 7 ಭಾಷೆಗಳಲ್ಲಿ 1740ಕ್ಕೂ ಅಧಿಕ ಸ್ಥಳಗಳಲ್ಲಿ ಯಶಸ್ವಿ ಸಭೆಗಳನ್ನು ಆಯೋಜಿಸಿ 20 ಲಕ್ಷಕ್ಕಿಂತಲೂ ಅಧಿಕ ಹಿಂದೂಗಳಲ್ಲಿ ಜಾಗೃತಿ ಮಾಡಲಾಗಿದೆ. ಈ ಸಭೆಯಲ್ಲಿ ಹಿಂದೂ ಧರ್ಮಜಾಗೃತಿ ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ದೇಶದಿಂದ ಅಮೂಲ್ಯ ಪ್ಲೇಕ್ಸಗಳ ಮತ್ತು ಗ್ರಂಥ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಸಮಸ್ತ ಹಿಂದೂ ಭಾಂಧವರು ಹಾಗೂ ಧರ್ಮಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ತಮ್ಮ ಧರ್ಮಕರ್ತವ್ಯವನ್ನು ನಿಭಾಯಿಸಬೇಕು ಎಂದರು..

ಸನಾತನ ಸಂಸ್ಥೆಯ ಬಾಗಲಕೋಟ ಸಂಚಾಲಕಿ ಸುಜಾತಾ ಹುಳಿಪಲ್ಲೆ ಮಾತನಾಡಿ, ಹಿಂದೂ ಧರ್ಮದಲ್ಲಿ ಬಹುದೊಡ್ಡ ಶ್ರೇಷ್ಠತೆಯಿದೆ ಆದರೆ ಹಿಂದೂಗಳಲ್ಲಿ ಶಿಕ್ಷಣದ ಅಭಾವವಿದೆ ಅದಕ್ಕೆ ಮೌಢ್ಯ ಆಚರಣೆಗಳಿಗೆ ಒಳಗಾಗಿ ಮತಾಂತರರಾಗುತ್ತಿದ್ದಾರೆ ಅದನ್ನು ತಡೆಗಟ್ಟಬೇಕಾದರೆ ಹಿಂದೂಗಳಲ್ಲಿ ರಾಷ್ಟ್ರ ಜಾಗೃತಿ ಆಗುವುದು ಅತ್ಯವಶ್ಯಕತೆಯಿದ್ದು ಈ ಸಭೆಗೆ ಮುಖ್ಯ ಬಾಷಣಕಾರರಾಗಿ ಶಿವಸೇನೆ ಸಂಘಟನೆಯ ಸಂಸ್ಥಾಪಕ ಸಂಚಾಲಕ ಪ್ರಮೋದ ಮುತಾಲಿಕಜಿ ಆಗಮಿಸಲಿದ್ದು ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಸಭೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.