ಸಿಂದಗಿ: ಯುವತಿಯರು ಉತ್ತಮ ಸಾಧಕರಾಗಲು ಶಶಿಕಲಾ ಚಿಂಗಳೆ ಕರೆ

ಲೋಕದರ್ಶನ ವರದಿ

ಸಿಂದಗಿ 28: ಸ್ವಾಮಿ ವಿವೇಕಾಂದರ ಏಳಿ ಎದ್ದೇಳಿ ಎಂಬ ವಾಣಿಯನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಪ್ರಜೆಯಾಗುವುದರೊಂದಿಗೆ ಉತ್ತಮ ಸಾಧಕರಾಗಬೇಕೆಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಶಿಕಲಾ ಚೆಂಗಳಿ ಯುವತಿಯರಿಗೆ ಹೇಳಿದರು.

ನಗರದ ಕುಮಾರ ಇನ್ಪೋಟೆಕ್ ಸಂಸ್ಥೆಯ ಆವರಣದಲ್ಲಿ   ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,  ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಜೀವನೋಪಾಯ ಇಲಾಖೆಯಿಂದ ಮಾನ್ಯತೆ ಪಡೆದ ಕುಮಾರ ಇನ್ಪೋಟೆಕ್ ಕವಶಲ್ಯಾಭಿವೃದ್ಧಿ ಹಾಗೂ ಕಂಪ್ಯೂಟರ್ ತರಬೇತಿ ಸಂಸ್ಥೆಯ ಇವರ ಸಂಯುಕ್ತಾಶ್ರಯದಲ್ಲಿ  2019-20 ಸಾಲಿನ ಮಹಿಳಾ ತರಬೇತಿ ಯೋಜನೆಯಡಿ ಫಿಲ್ಡ್ ಟೆಕ್ನಿಸೆನ್ ಕಂಪ್ಯೂಟರಿಂಗ್ ಪೆರಫಲ್ಸ್ ಮತ್ತು ಡಾಕ್ಯೂಮೆಂಟೆಷನ್ ಅಸಿಸ್ಟಂಟ್ ಕೋರ್ಸುಗಳಿಗೆ ಆಯ್ಕೆಯಾದ ನಿರುದ್ಯೋಗ ಯುವತಿಯರಿಗೆ  ಹಮ್ಮಿಕೊಂಡಿದ್ದ ಕವಶಲ್ಯಾಭಿವೃದ್ಧಿ   ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಕುಮಾರ ಇನ್ಪೋಟೆಕ್ ಸಂಸ್ಥೆಯ ಅಧ್ಯಕ್ಷ ಕುಮಾರ ಮಠ ಪ್ರಾಸ್ತವಿಕ ಮಾತನಾಡಿ, ತರಬೇತಿ ಯೋಜನೆಯಡಿ ವಿವಿಧ ಕೋರ್ಸಗಳಿಗೆ 200 ಯುವತಿಯರನ್ನು ಆಯ್ಕೆ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಡಿ ವಿದ್ಯಾರ್ಥಿತಿಗಳಿಗೆ ತರಬೇತಿ ನೀಡಿ ಉದ್ಯೋಗವನ್ನು ಕಲಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರಿಕ್ಷಕರಾದ ಶ್ರೀಮತಿ ಎ.ವಿಜಯಕುಮಾರಿ, ಜಿಲ್ಲಾ ಸಂಯೋಜಕರಾದ ಭಾರತಿ ಪಾಟಿಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಬಿ.ಜಿ.ಹೊಸಮನಿ,ಯೋಜನಾಧಿಖಾರಿ ಡಿ.ಆರ್.ಪಿಗಳಾದ, ಕೆ.ಕೆ.ದೇಸಾಯಿ, ಮಹಾದೇವಿ, ಸೀಮಾ ಸಾಲಿಮಠ, ಆನಂದ ಗೊರಗುಂಡಗಿ ಸೇರಿದಂತೆ ಇತರರು ಇದ್ದರು. ಸೌಮ್ಯ ಪಾಟೀಲ ಸ್ವಾಗತಿಸಿ ನಿರೂಪಿಸಿದರು. ಕೃಷ್ಣಮೂರ್ತಿ  ವಂದಿಸಿದರು.