ಲೋಕದರ್ಶನ ವರದಿ
ಸಿಂದಗಿ 27: ಚಿತ್ರರಂಗ ಕ್ಷೇತ್ರದಲ್ಲಿ ಉತ್ತರ ಕರ್ನಾಕದ ಕಲಾವಿಧರಿಗೆ ಅವಕಾಶಗಳು ಕಡಿಮೆ ಎಂದು ಸಿಂದಗಿಯ ಭಾಗ್ಯರಾಜ್ ಕಂಭೈನ್ಸ್ ಚಿತ್ರ ಸಂಸ್ಥೆಯ ನಿರ್ಮಾಪಕ ಭಾಗಪ್ಪ ಶಂಭೇವಾಡ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರ ಜಿಲ್ಲೆ ಕಲಾವಿದರ ತವರಾಗಿದೆ. ಈ ತವರು ನೆಲದಿಂದ ನಿರ್ಮಿತವಾದ ಪಯಣ ಕನ್ನಡ ಚಲನಚಿತ್ರ ಸ.27 ರಂದು ರಾಜ್ಯಾಧ್ಯಂತ ಬಿಡುಗಡೆ
ತಾರಾಗಣದಲ್ಲಿ ನಾನು ರೈತನ ಪಾತ್ರದಲ್ಲಿ ನಟಿಸಿರುವೆನು. ಹಿರಿಯ ನಟಿ ಭವ್ಯಾ, ಜೊ ಸೈಮನ್, ಶಂಕರ, ಅಂಜನಪ್ಪ, ಸುಧಾ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಈ ಚಿತ್ರವು ಕೊಲ್ಕತ್ತಾದಲ್ಲಿ ನಡೆಯುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೋಳ್ಳಲಿದೆ ಎಂದು ಹೇಳಿದರು.
ಪಯಣ ಚಲನಚಿತ್ರ ಬಿಡುಗಡೆ ಮಾಡಲು ಸಾಕಷ್ಟು ತೊಂದರೆಗಳು ಕಂಡು ಬಂದವು. ಉತ್ತರ ಕರ್ನಾಟಕದಲ್ಲಿ ಚಲನಚಿತ್ರ ಬಿಡುಗಡೆ ಮಾಡಲು ಒಂದು ಚಿತ್ರಮಂದಿರಗಳು ಸಿಗಲಿಲ್ಲ. ಆದರೆ ಸ್ಥಳಿಯ ಆನಂದ ಚಿತ್ರ ಮಂದಿರದ ಮಾಲಿಕರಾದ ಅಶೋಕ ಮನಗೂಳಿ ಅವರು ತಮ್ಮ ಚಿತ್ರಮಂದಿರದಲ್ಲಿ ಚಲನಚಿತ್ರ ಬಿಡುಗಡೆ ಮಾಡಲು ಅವಕಾಶನೀಡಿದ್ದಾರೆ. ಅಲ್ಲದೆ ಉತ್ತರ ಕರ್ನಾಟಕದಲ್ಲಿರುವ ಚಲನಚಿತ್ರ ಮಂದಿರಗಳಲ್ಲಿ ಚಲನಚಿತ್ರ ಬಿಡುಗಡೆ ಮಾಡಲು ಚಿತ್ರ ಮಂದಿರಗಳ ಮಾಲಿಕರ ಮನವಲಿಸಿದ್ದಾರೆ. ಕಲಾಭಿಮಾನಿಗಳು ಚಿತ್ರಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡರು.