ಲೋಕದರ್ಶನ ವರದಿ
ಸಿಂದಗಿ 17: ಪಟ್ಟಣದಲ್ಲಿ ಕಾಯಿಪಲ್ಲೆ, ಹಣ್ಣು ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಒದಗಿಸಬೇಕು ಎಂದು ಪುರಸಭೆ ಮಾಜಿ ಸದಸ್ಯ ಇಕ್ಬಾಲ ತಲಕಾರಿ ಅವರು ಸಚಿವ ಎಂಸಿ.ಮನಗೂಳಿ ಅವರಿಗೆ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣದಲ್ಲಿ ಕಾಯಿಪಲ್ಲೆ ಮತ್ತು ಹಣ್ಣು ಮಾರಾಟ ಮಾಡುವವರಿಗೆ ಪಟ್ಟಣದ ಬಸ್ ನಿಲ್ದಾಣದ ಎದುರಿನಲ್ಲಿನ ಹಳೆ ಪ್ರವಾಸಿ ಮಂದಿರದದ ಸ್ಥಳದಲ್ಲಿ ಅಥವಾ ಈಗ ಖಾಲಿ ಇರುವ ಹಳೆ ತಹಶೀಲ್ದಾರ ಕಚೇರಿಯ ಆವರಣದಲ್ಲಿ ಆವರಣಸುಸಜ್ಜಿತವಾದ ಮತ್ತು ಸೂಕ್ತವಾದ ಮಾರುಕಟ್ಟೆ ನಿರ್ಮಾಣ ಮಾಡಿಕೊಡಿ ಎಂದು ಬಹುದಿನಗಳಿಂದ ಹಿಂದಿನ ಶಾಸಕರಿಗೆ, ಸಚಿವ ಎಂ.ಸಿ.ಮನಗೂಳಿ ಅವರಿಗೆ, ಜಿಲ್ಲಾಧಿಕಾರಿ, ತಹಶೀಲ್ದಾರ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೇ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಹಣ್ಣು ಮಾರಾಟ ಮತ್ತು ಟಿಪ್ಪು ಸುಲ್ತಾನ ವೃತ್ತದಿಂದ ಪುರಸಭೆ ಹತ್ತಿರದ ಭೀಮಾಶಂಕರ ಮಠದ ವರೆಗಿನ ರಸ್ತೆ ಬದಿಗಳಲ್ಲಿ ಕಾಯಿಪಲ್ಲೆ ಮಾರಾಟಮಾಡಲಾಗುತ್ತಿದೆ. ಪುರಸಭೆ ಎದುರಿನಲ್ಲಿನ ದೊಡ್ಡ ಗಟಾರ ನೀರಿನಂದ ಕಾಯಿಪಲ್ಲೆ ಮಾರಾಟ ಮಾಡಲು ತೊಂದರೆ ಯಾಗುತ್ತಿದೆ ಎಂದರು.
ಮಾರುಕಟ್ಟೆಯ ನಿರ್ಮಾಣಕ್ಕಾಗಿ ನಾವೆಲ್ಲರೂ ಜನನಾಯಕರಿಗೆ ಬೇಟಿ ನಿಡಿದೆವು. ಆದರೆ ಅವರು ಒಂದೊಂದು ಅಂಗಡಿಗೆ ಒಂದು ಲಕ್ಷ ರೂ ಕೊಡಿ 50 ಅಂಗಡಿಗಳನ್ನು ನಿರ್ಮಿಸಿಕೊಡುವುದಾಗಿ ಹೇಳಿದರು. ಹಣ ಕೇಳಿದವರ ಹೆಸರು ಹೆಳಲು ಇಚ್ಚೆಪಡಲಿಲ್ಲ. ಜನನಾಯಕರೆ ಹೀಗಂದಾಗ ನಮ್ಮಂತವರಪಾಡೇನು. ಆದ್ದರಿಂದ ನಮಗೆ ಸೂಕ್ತ ಮಾರುಕಟ್ಟೆ ನಿಮರ್ಾಣ ಮಾಡಬೇಖೂ ಏಂದು ಬೇಡಿಕೆಯೊಂದಿಗೆ ಜು.20 ಮತ್ತು 21 ರಂದು ಕಾಯಿಪಲ್ಲೆ, ಹಣ್ಣು ಮಾರಾಟ ಸಂಪೂನರ ಬಂದ ಮಾಡುತ್ತೇವೆ. ಜು.21 ರಂದು ರವಿವಾರ ಸಂತೆ ಕೂಡಾ ಬಂದಿರುತ್ತದೆ. ರೈತರು, ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಅಧ್ಯಕ್ಷ ಸೈಫನ್ ನಾಟಿಕಾರ, ಉಪಾಧ್ಯಕ್ಷ ಹಾಜಿಗುಲಾಬಸಾಬ ಮತರ್ೂರ, ಬಸೀರಸಾಬ ಮತರ್ೂರ, ಬಂದೇನವಾಜ ಶಾಪೂರ, ರಾಜು ಖೇಡ, ಮಹೀಬುಬಸಾಬ ಅಳ್ಳೋಳ್ಳಿ ಹಾಗೂ ಇತರರು ಮಾತನಾಡಿದರು. ಕಾಯಿಪಲ್ಲೆ ಮತ್ತು ಹಣ್ಣು ಮಾರಾಟ ಸೇರಿದಂತೆ ಬಾಗವಾನರು ಪತ್ರಿಕಾ ಗೋಷ್ಠಿಯಲ್ಲಿ ಇದ್ದರು.