ಸಿಂದಗಿ: ಪರಮಾತ್ಮ ಶಿವ ಏಕ ರೂಪದಲ್ಲಿದ್ದಾನೆ

ಲೋಕದರ್ಶನ ವರದಿ

ಸಿಂದಗಿ 22: ಪರಮಾತ್ಮ ಶಿವ ಏಕ ರೂಪದಲ್ಲಿದ್ದಾನೆ. ಅವನು ನಿರಾಕಾರಿಯಾಗಿದ್ದಾನೆ ಸತ್ಯ, ತಾಳ್ಮೆ ಸತ್ಕಾರ್ಯದಿಂದ ವ್ಯಕ್ತಿ ಮನುಷ್ಯತ್ವದಿಂದ ದೈವತ್ವದೆಡೆಗೆ ಸಾಗಲು ಸಾದ್ಯ ಎಂದು ಸ್ಥಳಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಕೇಂದ್ರದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಪವಿತ್ರಾ ಅಕ್ಕ ಹೇಳಿದರು.

ಶುಕ್ರವಾರ ಪಟ್ಟಣದ ಓಂಶಾಂತಿ ನಗರದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಮಹಾಶಿವರಾತ್ರಿಯ ಪ್ರಯುಕ್ತ ವತಿಯಿಂದ ಹಮ್ಮಿಕಕೊಂಡ 84 ನೇ ತ್ರಿಮೂತರ್ಿ ಶಿವಜಯಂತಿ ಆಚರಣೆ ನಿಮಿತ್ತ ಈಶ್ವರೀಯ ಧ್ವಜಾರೋಹಣದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೆರಿಸಿ ಅವರು ಮಾತನಾಡಿ, ಇನ್ನೊಬ್ಬರ ದೌರ್ಬಲ್ಯಗಳನ್ನು ಎತ್ತಿ ತೋರಿಸುವುದು ದುಃಖದ ವಿಚಾರ ಸದಾಚಾರ, ಸನ್ಮಾರ್ಗಗಳಿಂದ ಇನ್ನೊಬ್ಬರ ಹಿತ ಬಯಸುವ ಜೀವನ ಶ್ರೇಷ್ಠತೆಯ ಉತ್ತುಂಗಕ್ಕೇರುತ್ತಾನೆ. ಕಾರಣ ಪರೋಪಕಾರದ ಜೀವನ ಶ್ರೇಷ್ಠ ಜೀವನ ಜಗದ ಆತ್ಮದ ದೀಪಗಳನ್ನು ಬೆಳಗಲು ಹಾಗೂ ಪರಮಾತ್ಮನ ಸಂದೇಶ ಪಡೆಯಲು ಹಬ್ಬಗಳು ಸಹಕಾರಿಯಾಗುತ್ತವೆ. ಶಿವಸ್ಮೃತಿ ಶ್ರೇಷ್ಠವಾದದ್ದು ಬರೀ ನೀರಿನಲ್ಲಿ ಮುಳಿಗೇಳುವುದರಿಂದ ಮನಶುದ್ದಿಯಾಗುವುದಿಲ್ಲ, ಆತ್ಮಶುದ್ದಿಯಾಗಬೇಕಾದರೆ ಪರಮಾತ್ಮನ ದ್ಯಾನದಲ್ಲಿ ಲೀನವಾಗಬೇಕು. ನಾನು ಅನ್ನುವುದನ್ನು ಬಿಟ್ಟು ನಾವು ಎನ್ನುವ ಶ್ರೇಷ್ಠತೆಯಡೆಗೆ ಸಾಗುವುಕೆಯೇ ಮನುಷ್ಯನ ಉನ್ನತ್ತಿಯ ಗುಣ ಎಂದರು.

ಕಲಿಯುಗದಲ್ಲಿ ಶಿವನು ತನ್ನ ಮಕ್ಕಳ ಬಳಿ ಬಿಕ್ಷೆ ಬೇಡಲು ಧರೆಗೆ ಇಳಿದಿದ್ದಾನೆ. ಮನುಷ್ಯನಲ್ಲಿನ ಕಾಮ, ಕ್ರೋದ, ಲೋಭ, ಮದ, ಮತ್ಸರ ಪಂಚ ವಿಕಾರಗಳನ್ನು ಬಿಕ್ಷೆ ಬೇಡಲು ಬಂದಿದ್ದಾನೆ. ಆದರೆ ನಾವು ಈ ಪಂಚ ವಿಕಾರಗಳನ್ನು ನೀಡದೇ ವಿಲಾಸಿ ಜೀವನ ನಡೆಸುತ್ತಾ ಅಶಾಂತಿ ಯಲ್ಲಿ ಮುಳಗಿದ್ದೇವೆ. ಆದ್ದರಿಂದ ಪರಮಾತ್ಮ ಪರಿಚಯ ಮಾಡಿಕೊಂಡು ಪರಮಾತ್ಮನ ಸಂದೇಶವನ್ನು ಪಾಲಿಸುವ  ಮೂಲಕ ಜೀವನ ಪಾವನ ಮಾಡಿಕೊಳ್ಳೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ  ಡಾ.ಬಿ.ಜಿ.ಪಾಟೀಲ, ಅಕ್ಕ ಸೀಮಾ ಉಡಚಾಣ, ಎಸ್.ಎಸ್.ಬುಳ್ಳಾ, ಎಸ್.ಎಂ.ಬಿರಾದಾರ ಆಹೇರಿ, ಶಿವನಗೌಡ ಬಿರಾದಾರ ತಾನಾಜಿ, ಎಂ.ಎಂ.ದೊಡಮನಿ, ವಿಜಯಕುಮಾರ ತೇಲಿ,  ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಲಿಂಗ ಚೌಧರಿ, ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ, ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಶೋಕ ಬಿರಾದಾರ, ಕಸಾಪ ಗೌರವ ಕಾರ್ಯದಶರ್ಿ ಬಸವರಾಜ ಅಗಸರ, ಮಲ್ಲಿಕಾಜರ್ುನ ಅಲ್ಲಾಪೂರ, ಪಂಡಿತ ಯಂಪೂರೆ, ಗುಂಡಣ್ಣ ಕುಂಬಾರ ಸೇರಿದಂತೆ ಹಲವರಿದ್ದರು. 

ತನ್ನಿಮಿತ್ಯ ದೇವರ ಹಿಪ್ಪರಗಿಯಲ್ಲಿ ಶಿವಜಯಂತಿ ಹಾಗೂ ದ್ವಾದಶಿ ಜ್ಯೋತಿಲರ್ಿಂಗ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿದ್ದು  ಫೇ 22 ಸಂಜೆ 5 ಗಂಟೆಗೆ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು ಅಲ್ಲದೇ ಫೇ. 23,24,ಹಾಗೂ25ರಂದು ಮೌಂಟ ಅಬುದಿಂದ ಬಂದಂಥ ರಾಜಯೋಗಿನಿ ರವಿ ಕಲಾ ಅಕ್ಕಾ ಅವರು ರಾಜಯೋಗ ಆದ್ಯಾತ್ಮ ಶೀಬಿರವನ್ನು ನಡೆಸಿ ಕೊಡುವರು ಕಾರಣ ಸಮಸ್ತ ದೈವಿ ಪರಿವಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿ ಗೊಳಿಸಬೇಕೆಂದು ಸಿಂದಗಿ ಬ್ರಹ್ಮಕುಮಾರಿ ರಾಜಯೋಗಿನಿ ಪವಿತ್ರಾ ಅಕ್ಕಾ ಕೋರಿದ್ದಾರೆ.