ಸಿಂದಗಿ 20: ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಡಿ.24 ರಂದು ಬೆಳಗ್ಗೆ 10.30 ಗಂಟೆಗೆ ತಾಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ.
ನಗರದ ಹಜರತ್ ಟಿಪ್ಪು ಸುಲ್ತಾನ್ ವೃತ್ತದಿಂದ ಪ್ರತಿಭಟನೆ ಆರಂಭಗೊಂಡು, ಅಂಜುಮನ್ ಈದ್ಗಾ ಮೈದಾನದಲ್ಲಿ ಸಮಾವೇಶಗೊಳ್ಳಲಿದೆ ಎಂದು ಸಂಘಟನೆಗಳ ಮುಖಂಡರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಬ್ಬೀರ್ ಪಟೇಲ್, ಸಲೀಮ್ ಅಲ್ದಿ, ರಾಜು ಮಾದರ, ದಸ್ತಗೀರ್ ಮುಲ್ಲಾ, ಮಹ್ಮದ್ ಅಶ್ಪಾಕ್ ಕರ್ಜಗಿ, ಅಶೋಕ ಕೋರಹಳ್ಳಿ, ಹಾಸೀಮ್ ಆಳಂದ, ಸಲೀಮ್ ಜಮಾದಾರ, ಜಗದೀಶ ಕಲಬುರ್ಗಿ, ಜಿಲ್ಲಾನಿ ಮುಲ್ಲಾ, ಸೋಯ್ಯಬ್ ಬ್ಯಾಕೋಡ, ರಾಕೇಶ ಕಾಂಬಳೆ ಮತ್ತಿತರರಿದ್ದರು.