ಸಿಂದಗಿ: ತಾಳ್ಮೆಯಿಂದ ಬಿತ್ತನೆ ಬೀಜ ಪಡೆಯಲು ಕರೆ

ಲೋಕದರ್ಶನ ವರದಿ

ಸಿಂದಗಿ 26: ರೈತರು ತಾಳ್ಮೆಯಿಂದ ಸರದಿಯಲ್ಲಿ ಬಿತ್ತನೆ ಬೀಜ ಪಡೆದುಕೊಳ್ಳಬೇಕು ಎಂದು ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ ಹೇಳಿದರು.

ಬುಧವಾರ ಪಟ್ಟಣದ ಸಿಂದಗಿ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ತೊಗರಿ ಬೀಜ ವಿತರಿಸಿ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ರೈತರು ಸರದಿಯಲ್ಲಿ ನಿಂತು ಬೀಜ ಪಡೆದರೆ ಎಲ್ಲರಿಗೂ ಸಿಗುತ್ತವೆ. ಒಂದು ವೇಳೆ ತೊಗರಿ ಬೀಜ ಕಡಿಮೆ ಬಿದ್ದಲ್ಲಿ ಮತ್ತೆ ದಾಸ್ತಾನು ತರಿಸಲಾಗುವುದು. ರೈತರು ಆತಂಕ ಪಡಬೇಕಾಗಿಲ್ಲ. ಒಂದು ಖಾತೆದಾರರಿಗೆ 5 ಪಾಕೀಟ ತೊಗರಿ ಬೀಜವನ್ನು ನೀಡಲಾಗುವುದು. ಬಿತ್ತನೆ ಬೀಜಗಳನ್ನು ಪಡೆಯುವಾಗ ಸಂಭಂದಿಸಿದ ಖಾತೇದಾರರ ಆಧಾರ ಕಾರ್ಡ, ಪಾಣಿ ಉತಾರಿ, ಖಾತೆ ಉತಾರಿ ಪ್ರತಿಗಳನ್ನು ಇಲಾಖೆಗೆ ಸಲ್ಲಿಸಬೇಕು ಎಂದು ಹೇಳಿದರು.

ಕೃಷಿ ಸಹಾಯಕ ನಿರ್ದೇಶಕ  ಡಾ.ಎಚ್.ವಾಯ್.ಸಿಂಗೆಗೋಳ, ಕೃಷಿ ಅಧಿಕಾರಿಗಳಾದ ಎ.ಎಸ್.ಹುಣಶ್ಯಾಳ, ಸೀತಿಮನಿ ಅವರು ರೈತರ ಕುರಿತು ಮಾತನಾಡಿದರು. 

ಬೀಜ ವಿತರಣೆ ಪ್ರಾರಂಭದಲ್ಲಿ ಗದ್ದಲವಾದ ಹಿನ್ನಲೆಯಲ್ಲಿ ಪೋಲಿಸರ್ ಬಂದುಬಸ್ತಿಯಲ್ಲಿ ತೊಗರಿ ಬೀಜ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ರೈತರಾದ ಬಲವಂತಪ್ಪ ಹೂಗಾರ, ಶಂಕರ ಹೂಗಾರ, ಮಾಳು ಪೂಜಾರಿ, ಮಲ್ಲೇಶಿ ರಾಣಿ, ಬುಡ್ಡೇಸಾ ಮುಲ್ಲಾ, ಭೀಮಣ್ಣ ಪೂಜಾರಿ, ಖಾದರ ಬಂಕಲಗಿ,  ಸೇರಿದಂತ ವಿವಿಧ ಹಳ್ಳಿಯಿಂದ ರೈತರು ಭಾಗವಹಿಸಿದ್ದರು.