ಲೋಕದರ್ಶನ ವರದಿ
ಕೊಪ್ಪಳ 14: ಇಲ್ಲಿಗೆ ಸಮೀಪದ ಭಾಗ್ಯನಗರ ಪಟ್ಟಣದಲ್ಲಿರುವ ಶ್ರೀ ನಾಗರತ್ನ ಶಿಕ್ಷಣ ಸೇವಾ ಸಂಸ್ಥೆಯ ಕಾರ್ಯದಶರ್ಿ ಅನೀಲ್ಕುಮಾರ ಬೇಗಾರ ಅವರ ನಿವಾಸದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 129ನೇ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.
ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿ ವಿಶೇಷ ಪೂಜೆ ನೆರವೇರಿಸಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ನಂತರ ನಾವೆಲ್ಲಾ ಭಾರತೀಯರು ನಮ್ಮ ಧರ್ಮ ಭಾರತೀಯ ಧರ್ಮ ನಮ್ಮ ಧರ್ಮ ಗ್ರಂಥ ಭಾರತದ ಸಂವಿಧಾನ ಎಂಬ ಮನಂರವರ ಈ ಹೇಳಿಕೆಯನ್ನು ಹೇಳುವುದರ ಮೂಲಕ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ನಾಗರತ್ನ ಶಿಕ್ಷಣ ಸೇವಾ ಸಂಸ್ಥೆಯ ಕಾರ್ಯದಶರ್ಿ ಅನೀಲ್ಕುಮಾರ ಬೇಗಾರ, ಅವರ ಧರ್ಮಪತ್ನಿ ಬಸಮ್ಮ, ಮಕ್ಕಳಾದ ಕು.ಜೀವನ್ ಬೇಗಾರ್, ಕು.ನಾಗರತ್ನ ಸೇರಿದಂತೆ ಹಿರಿಯ ಪತ್ರಕರ್ತ ಎಂ.ಸಾದಿಕ್ ಅಲಿ, ಜಗದೀಶ ಹುಯಿಲಗೋಳ ಮತ್ತಿತರರು ಪಾಲ್ಗೊಂಡಿದ್ದರು.