ಹಾವೇರಿ: ಜಿಲ್ಲೆಯಲ್ಲಿ ಉಪ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಜಿಲ್ಲಾಡಳಿತದಿಂದ ಸರಳವಾಗಿ ಆಚರಿಸಲಾಯಿತು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಕೃಷ್ಣಾ ಭಾಜಪೆಯಿ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪ ಸಮಪರ್ಿಸಿ ಗೌರವನಮನ ಸಲ್ಲಿಸಿ ಮಾತನಾಡಿ, ಕನಕದಾಸರು 15ನೇ ಶತಮಾನದ ಶ್ರೇಷ್ಠಕವಿಗಳು, ಚಿಂತಕರು, ಸಮಾಜ ಸುಧಾರಕರು ಹಾಗೂ ನಾಡಿನ ಸಂಸ್ಕೃತಿಯ ನಿಮರ್ಾತೃಗಳು. ಸಮಾಜದ ಮೌಢ್ಯತೆಯನ್ನು ತೊಡೆದು ಮನು ಕುಲ ಒಂದೆ ಎಂಬ ಸಮಾನತೆಯ ಮಂತ್ರ ಸಾರಿದ ಹರಿಕಾರರು. ಕನಕರ ತತ್ವ ಆದರ್ಶಗಳು ನಮಗೆ ದಾರಿ ದೀಪವಾಗಲಿ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿವರ್ಾಹಕ ಅಧಿಕಾರಿಗಳಾದ ರಮೇಶ ದೇಸಾಯಿ ಅವರು ಮಾತನಾಡಿ, ದಾಸ ಪರಂಪರೆಯಲ್ಲಿ ಕನಕದಾಸರ ಕೊಡುಗೆ ಅಪಾರ. ಸಮಾಜದಲ್ಲಿರುವ ಮೌಢ್ಯತೆ ಅಹಂಕಾರ ತೊಡೆದು ಜನರಿಗೆ ಜ್ಞಾನ ಸೌಹಾರ್ದತೆ ನೀಡುವಲ್ಲಿ ತಮ್ಮ ಜೀವನ ಮುಡುಪಾಗಿಟ್ಟವರು. ಇಂತಹ ಜಗತ್ ಪ್ರಖ್ಯಾತ ವ್ಯಕ್ತಿಗಳು ನಮ್ಮ ಜಿಲ್ಲೆಯಲ್ಲಿ ಜನಿಸಿದ್ದು ನಮ್ಮ ಪುಣ್ಯ ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜರ್ುನ ಬಾಲದಂಡಿ ಅವರು ಮಾತನಾಡಿ, ಸಮಾಜದಲ್ಲಿ ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿವೆ. ಆದರೆ ಕನಕದಾಸರು ಮೇಲು ಕೀಳು ಎಂಬ ಜಾತಿ ಮತ ಸಿದ್ಧಾಂತದ ವಿರುದ್ಧ ಹೋರಾಡಿ ಎಲ್ಲಾ ಜನಾಂಗದವರ ಮನದಲ್ಲಿ ಆದರ್ಶದ ಬೀಜ ಬಿತ್ತಿದ್ದಾರೆ. ಸಮಾನ ಸಮಾಜದ ಪ್ರತಿಪಾದನೆಯ ಕನಕರ ಸಿದ್ಧಾಂತಗಳ ಪಾಲನೆ ನಮ್ಮೆಲ್ಲರ ಕರ್ತವ್ಯ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕರಾದ ಶಶಿಕಲಾ ಹುಡೇದ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಕುರುಬ ಸಂಘದ ಅಧ್ಯಕ್ಷರಾದ ಮುದಕಣ್ಣನವರ, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.