ಲೋಕದರ್ಶನ
ವರದಿ
ಸಿಂದಗಿ 19: ವಿಶ್ವಕರ್ಮ ಸಮಾಜದವರು ಜಗತ್ತಿನ ಮೊದಲ ಅಭಿಯಂತರರು ಎಂದು
ವಿಶ್ವಕರ್ಮ ಸಮಾಜದ ಮಠಾಧಿಪತಿಗಳ ಪೀಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರು ಹಾಗೂ ಶಾಹಾಪುರದ ಏಕದಂಡಗಿ
ಪೀಠದ ಕಾಳಹಸ್ತೇಂದ್ರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಮೋರಟಗಿ ಗ್ರಾಮ ಗ್ರಾಮ ಪಂಚಾಯತಿ ಆವರಣದಲ್ಲಿ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ವಿಶ್ವಕರ್ಮ ಸಮಾಜದ ಭಾಂದವರು ಎಲ್ಲ ಸಮಾಜದವರೊಂದಿಗೆ ಹೊಂದಿಕೊಂಡು
ಹೋಗುವಂತವರು. ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜದ ಬಾಮಧವರು
ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಮುಖ್ಯವಾಹಿನಿಗೆ ಬರಬೇಕು.
ರಾಜಕೀಯವಾಗಿ ಅಭಿವೃದ್ಧಿಹೊಂದಬೇಕು ಎಂದು ಹೇಳಿದರು.
ಅಖಿಲ ಭಾರತ ವೀರಶೈವ
ಸಮಾಜದ ತಾಲೂಕಾ ಅಧ್ಯಕ್ಷ ಅಶೋಕ ವಾರದ ಅವರು
ಮಾತನಾಡಿ, ವಿಶ್ವಕರ್ಮ ಸಮಾಜದ ಬಾಂಧವರು ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಸಮಾಜದವಾಗಿದೆ. ಸಮಾಜದ ಬೆನ್ನೆಲುಬಾಗಿ ನಾವು ಇರುತ್ತೇವೆ ಎಂದರು.
ಸಾನಿಧ್ಯ ವಹಿಸಿದ ವಿಶ್ವಕರ್ಮ ಸಮಾಜದ ಶ್ರೀ ಶ್ರೀಶೈಲ ಮಹಾಸ್ವಾಮಿಗಳು,
ಶ್ರೀ ರಾಮಚಂದ್ರ ಮಹಾಸ್ವಾಮಿಗಳು, ಹೈದ್ರಾಬಾದ ಕನರ್ಾಟಕದ ಸಂಚಾಲಕ ಮೌನೇಶ ವಿಶ್ವಕರ್ಮ, ಗ್ರಾ.ಪಂ. ಸದಸ್ಯ
ನಿಂಗನಗೌಡ ಪಾಟೀಲ, ಸಮಾಜದ ಅಧ್ಯಕ್ಷ ಈರಣ್ಣ ವಿಶ್ವಕರ್ಮ ಮಾತನಾಡಿದರು.
ಇದೇ ಸಂದರ್ಭದಲ್ಲಿ ಖಾಸಗಿ
ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಿಂದ ಪ್ರಖ್ಯಾತಿ ಪಡೆದ ಶಿವಾನಂದ ಸಿಂದಗಿಯವರನ್ನು
ಸನ್ಮಾನಿನಿ ಗೌರವಿಸಿದರು.
ಜಿ.ಪಂ.ಸದಸ್ಯ
ನರಸಿಂಗಪ್ರಸಾದ ತಿವಾರಿ, ಶ್ರೀಶೈಲ ಕೆರಿಗೊಂಡ, ಗ್ರಾ.ಪಂ.ಉಪಾಧ್ಯಕ್ಷ
ಅರುಣ ಸಿಂಗೆ, ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಚಕ್ರವತರ್ಿ, ಆಹಾರ ನಿರೀಕ್ಷಕ ಪಿ.ಎಸ್.ಮೂಕಿಹಾಳ, ಪತ್ರಕರ್ತ
ನಿಂಗರಾಜ ಅತನೂರ, ಸಮಾಜದ ಜಿಲ್ಲಾಧ್ಯಕ್ಷ ಬಾಳು ಗಿರಗಾಂವಕರ್, ತಾಲೂಕಾಧ್ಯಕ್ಷ
ಶಿವಕುಮಾರ ಬಡಿಗೇರ, ಪ್ರದೀಪ ವಿಶ್ವಕರ್ಮ, ಹಿರಿಯರಾದ ಶ್ರೀಶೈಲಪ್ಪಗೌಡ ಪಾಟೀಲ, ಮಲ್ಲು ಮಸಳಿ, ಮೈಬೂಬಸಾಬ ಕಣ್ಣಿ, ಬಸಲಿಂಗಪ್ಪಸಾಹು ಬೋನಾಳ, ಗುರುನಾಥ ವಿಶ್ವಕರ್ಮ, ಅಲ್ಲಾಬಾಕ್ಷ ಬಾಗವಾನ, ಶ್ರೀಪಾಲಗೌಡ ಪಾಟೀಲ, ಚಿದಾನಂದ ವಿಶ್ವಕರ್ಮ, ಮೌನೇಶ ವಿಶ್ವಕರ್ಮ, ವಿಜಯಕುಮಾರ ವಿಶ್ವಕರ್ಮ, ಶ್ರೀಮಂತ ಮಳಗಿ ಅವರು ವೇದಿಕೆ
ಮೇಲೆ ಇದ್ದರು.