ಇಂದಿನಿಂದ ಲಿಂ.ರುದ್ರಮುನಿ ಶ್ರೀಗಳವರ ಬೆಳ್ಳಿ ರಜತ್ ಮೂರ್ತಿಯ ಮೆರವಣಿಗೆ

ಶಿಗ್ಗಾವಿ 18: ತಾಲೂಕಿನ ಬಂಕಾಪುರ ಪಟ್ಟಣದ ಭಾವೀಸ್ ಮಹಲ್ ಕಟ್ಟೀಮನಿ ಅರಳೆಲೆಹಿರೇಮಠದ ಲಿಂ.ಶ್ರೀ ರುದ್ರಮುನಿ ಶಿವಾಚಾರ್ಯರ 46 ನೇ ಪುಣ್ಯಾರಾಧನೆ, ನೂತನವಾಗಿ ನಿರ್ಮಿಸಿರುವ ಲಿಂ.ರುದ್ರಮುನಿ ಶ್ರೀಗಳವರ ಬೆಳ್ಳಿ ರಜತ್ ಮೂರ್ತಿಯ  ಮೆರವಣಿಗೆ ಹಾಗೂ ಸದ್ಭೋಧನಾ ಧರ್ಮ ಸಮಾರಂಭ ಜ. 19 ಹಾಗು 20 ರಂದು ಎರಡು ದಿನಗಳಕಾಲ ಜರುಗಲಿವೆ.

     ಜ.19 ರವಿವಾರ ಬೆಳಿಗ್ಗೆ ಶ್ರೀ ವೀರಭದ್ರೇಶ್ವರ ಗುಗ್ಗಳ ಮಹೋತ್ಸವ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಪ್ರಾರಂಭಗೋಂಡು ಊರ ಮುಖ್ಯ ರಸ್ತೆಗಳಲ್ಲಿ ಸಾಗಿಬಂದು ಪುನ: ಶ್ರೀ ಸಿದ್ಧೇಶ್ವರ ದೇವಸ್ಥಾನಕ್ಕೆ ಬಂದು ಸಮಾರೋಪಗೋಳ್ಳಲಿದೆ. ಅದೆ ದಿನ ಸಂಜೆ 6 ಗಂಟೆಯಿಂದ ಅರಳೆಲೆಮಠದ ಸಭಾಭವನದಲ್ಲಿ ಶ್ರೀ ರುದ್ರಮುನಿಶ್ವರ ಸಂಗೀತ ಶಾಲೆ ವಿದ್ಯಾರ್ಥಿ ಗಳಿಂದ ಸಂಗೀತ ಸಂಜೆ ಕಾರ್ಯಕ್ರಮ ಹಾಗು ಉತ್ತರ ಕರ್ನಾಟಕ  ಕನ್ನಡ ಕಲಾವಿದರಿಂದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಜರುಗಲಿದೆ. 

     ಕಾರ್ಯಕ್ರಮದ ನೇತೃತ್ವವನ್ನು ಮಳಲಿ ಸಂಸ್ಥಾನಮಠದ ಶ್ರೀ ಡಾ. ಗುರುನಾಗಭೂಷಣ ಶಿವಾಚಾರ್ಯರು, ರಾಣೆಬೆನ್ನೂರ ಮದ್ದರಕಿ ಹಿರೇಮಠದ ಶ್ರೀ ಶಿವಯೋಗಿ ಶಿವಾಚಾರ್ಯರು, ಹೆರೂರ ಗುಬ್ಬಿ ಮಠದ ಶ್ರೀ ನಂಜುಂಡ ಶಿವಾಚಾರ್ಯರು, ಅಕ್ಕಿಆಲೂರ ಮುತ್ತಿನಕಂತಿಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು ವಹಿಸುವರು. ಮುಖ್ಯ ಅತಿಥಿಗಳಾಗಿ ಡಾ.ಸುಖಿನ ಅರಳೆಲೆಮಠ ಸೇರಿದಂತೆ ಮತ್ತಿತರ ಗಣ್ಯಮಾನ್ಯರು ಆಗಮಿಸುವರು.

     ಜ.20 ಸೋಮವಾರ ಪ್ರಾಥ:ಕಾಲ ಲಿಂ.ರುದ್ರಮುನಿ ಶ್ರೀಗಳವರ ಕತೃ ಗದ್ದುಗೆಗೆ ವಿವಿದ ಪೂಜಾ ಕೈಂಕರ್ಯಗಳು ನಡೆಯಲಿವೆ. ನಂತರ ನೂತನವಾಗಿ ನಿರ್ಮಿಸಿರುವ  ಲಿಂ. ರುದ್ರಮುನಿ ಶಿವಾಚಾರ್ಯರ ಬೆಳ್ಳಿ ರಜತ್ ಮೂತರ್ಿಯ ಮೇರವಣಿಗೆ ಸಕಲ ವಾದ್ಯ ವೈಭವಗಳೋಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಪುನ: ಶ್ರೀ ಮಠಕ್ಕೆ ಬಂದು ಸಮಾರೋಪಗೋಳ್ಳಲಿದೆ.

     ಅಂದು ಸಂಜೆ 4 ಗಂಟೆಗೆ ನಡೆಯಲಿರುವ ಸದ್ಭೋಧನಾ ಧರ್ಮ ಸಮಾರಂಭದ ದಿವ್ಯ ಸಾನಿಧ್ಯವನ್ನು ರಂಭಾಪುರಿ ಜ. ಡಾ. ವೀರಸೋಮೇಶ್ವರ ಶಿವಾಚಾರ್ಯರು ವಹಿಸುವರು. ಮುಕ್ತಿಮಂದಿರದ ಶ್ರೀ ವಿಮಲ ರೇಣುಕ ಶಿವಾಚಾರ್ಯರು, ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯರು, ಹಾವೇರಿ ಹುಕ್ಕೇರಿಮಠದ ಶ್ರೀ ಸದಾಶಿವಸ್ವಾಮಿಗಳು, ಶಿಗ್ಗಾವಿ ವಿರಕ್ತಮಠದ ಸಂಗನಬಸವ ಸ್ವಾಮಿಜಿ ಸೇರಿದಂತೆ ನಾಡಿನ ಹರಗುರು ಚರಮೂತರ್ಿಗಳು ಬಾಗವಹಿಸುವರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಾಜಿ ವಿದಾನಪರಿಷತ್ ಸಭಾಪತಿ ಡಿ.ಎಸ್.ಶಂಕರಮೂತರ್ಿ, ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ವಿ.ಪ.ಸದಸ್ಯ ಸೋಮಣ್ಣ ಬೇವಿನಮರದ, ಭರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಸೇರಿದಂತೆ ಮತ್ತಿತರ ಗಣ್ಯಮಾನ್ಯ ಪ್ರತಿಷ್ಠಿತರು ಆಗಮಿಸುವರು. ಸಮಾರಂಭದಲ್ಲಿ ಡಾಕ್ಟರೇಟ ಪದವಿ ಪುರಸ್ಕೃತ ಗುರುಪಾದಯ್ಯ ಸಾಲಿಮಠ ರವರಿಗೆ ಶ್ರೀ ರುದ್ರಮುನಿಶ್ವರ ಸಂಪದ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.