ಲೋಕದರ್ಶನ ವರದಿ
ಶಿಗ್ಗಾವಿ 08: ಸಮಾಜದಲ್ಲಿ ಸತ್ಕಾರ್ಯಗಳನ್ನು ಮಾಡುವಂತೆ ಮನಸ್ಸನ್ನು ಜಾಗೃತಿಗೊಳಿಸುವ ಒಂದು ವೇದಿಕೆಯಾಗಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ತಾಲೂಕಿನ ಬಿಸನಳ್ಳಿ ಗ್ರಾಮದ ಜಿ.ಪಂ. ವೇದ ಆಗಮ ಸಂಗೀತ ಸಂಸ್ಕೃತ ಯೋಗ ಪಾಠಶಾಲೆಯ ಆಶ್ರಯದಲ್ಲಿ ನೂತನವಾಗಿ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಸನ್ಮಾನ ಸಮಾರಂಭ ಹಾಗು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಬಡ ಪಲಾನುಭವಿಗಳಿಗೆ ಮಂಜೂರಾದ ಸಿಲೆಂಡರ್ ವಿತರಣಾ ಕಾರ್ಯಕ್ರಮವನ್ನುದ್ದೇಸಿಸಿ ಮಾತನಾಡಿದ ಅವರು ಎಲ್ಲರು ಲಾಭ ನಷ್ಟದ ಲೆಕ್ಕಾಚಾರ ಹಾಕಿ ಜೀವನ ನಡೆಸಿದರೆ ಕಾಶಿ ಡಾ. ಚಂದ್ರಶೇಖರ ಶಿವಾಚಾರ್ಯರು ಧರ್ಮ ನ್ಯಾಯ ನೀತಿ ಸತ್ಯ ಶಾಂತಿಯನ್ನು ಸಮಾಜದಲ್ಲಿ ಪುನ:ರುತ್ಥಾನಗೊಳಿಸಲು ಹಗಲಿರುಳೇನ್ನದೇ ಶ್ರಮಿಸುತ್ತಿದ್ದಾರೆ. ಪಾಪ ಪುಣ್ಯದ ಪ್ರಜ್ಞೆ ಇದ್ದ ಮನುಷ್ಯಮಾತ್ರ ಜೀವನದಲ್ಲಿ ನೆಮ್ಮದಿ ಜೀವನವನ್ನು ಸಾಗಿಸಲು ಸಾದ್ಯ. ಕಾಶಿ ಶ್ರೀಗಳವರ ಆಗಮನವೇ ನಮಗೆ ಪ್ರೇರಣೆಯಾಗಿದ್ದು ಹಂತ ಹಂತವಾಗಿ ಮಠದ ಅಭಿವೃದ್ದಿಗೆ ಶ್ರಮಿಸುವದಾಗಿ ಎಂದು ಹೇಳಿದರು.
ಈ ಹಿಂದೆ ಸಿಲೆಂಡರ್ ಗ್ಯಾಸ್ ಬರಿ ಶ್ರೀಮಂತರ ಸೊತ್ತಾಗಿತ್ತು ಆದರೆ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಉಜ್ವಲ ಯೋಜನೆ ಪ್ರತಿಫಲವಾಗಿ ಎಲ್ಲ ಬಡವರ ಮನೆಗಳಿಗೆ ಉಚಿತವಾಗಿ ಸಿಲೆಂಡರಗಳು ತಲಪುತ್ತಲಿವೆ ಎಂದು ಹೇಳಿದರು.
ಹಾವೇರಿ ಶಾಸಕ ನೆಹರೂ ಓಲೇಕಾರ ಮಾತನಾಡಿ ಶಾಸಕ ಬಸವರಾಜ ಬೊಮ್ಮಾಯಿ ಯವರು ನೀರಾವರಿ ಸಚಿವರಾಗಿದ್ದಾಗ ಮಾಡಿದ ಏತ ನೀರಾವರಿ ಯೋಜನೆ ಈ ಬಾಗದ ರೈತರಿಗೆ ವರದಾನವಾಗಿ ಪರಿಣಮಿಸಿದೆ. ರಾಜಕಾರಣಿಯಾದವನು ಜನರ ಸಮಸ್ಯಯನ್ನು ಅರಿತು ಕೇಲಸಮಾಡಿದಾಗ ಮಾತ್ರ ಜನರ ಮನದಲ್ಲಿ ಶಾಸ್ವತವಾಗಿ ಬೇರೂರಲು ಸಾದ್ಯ. ಶ್ರೀ ಮಠದ ಅಭಿವೃದ್ಧಿಯನ್ನು ನೋಡಿ ನನಗೆ ಸಂತಸವಾಗಿದ್ದು ಶ್ರೀ ಮಠಕ್ಕೆ ನನ್ನ ವೈಯಕ್ತಿಕವಾಗಿ ಸಹಾಯಮಾಡುವದಾಗಿ ಹೇಳಿದರು.
ರಾಣೆಬೆನ್ನೂರಿನ ಪೂಜ್ಯ ಶಿವಯೋಗಿ ಶಿವಾಚಾರ್ಯರು ಮಾತನಾಡಿ ಮಠಾದೀಶರು ಹಾಗು ರಾಜಕಾರಣಿಗಳು ಈ ಸಮಾಜದ ಎರಡು ಕಣ್ಣುಗಳಿದ್ದಹಾಗೆ ಮಠ ಮಂದಿರಗಳ ಮಠಾದೀಶರು ಸಮಾಜದಲ್ಲಿ ಧರ್ಮ ಸಂಸ್ಕಾರದ ಬೀಜವನ್ನು ಬಿತ್ತಿ ಬೇಳೆಯದಿದ್ದರೆ ಮಾನವ ಸಂಕುಲನ ಅಂಧಕಾರದಲ್ಲಿ ಮುಳಗಿ ಅವನತಿಯತ್ತ ಸಾಗುತ್ತಲಿತ್ತು ಆ ಒಂದು ಸದುದ್ದೇಶದಿಂದ ಕಾಶಿ ಶ್ರೀಗಳು ಈ ಬಿಸನಳ್ಳಿ ಗ್ರಾಮದಲ್ಲಿ ವೇದ ಪಾಠ ಶಾಲೆಯನ್ನು ಪ್ರಾರಂಬಿಸಿ ಮಕ್ಕಳಲ್ಲಿ ಧರ್ಮ ಭೋದನೆಯನ್ನು ಬಿತ್ತಿ ಬೇಳೆಯುತ್ತಿದ್ದಾರೆ. ಬೆರಳೆಣಿಕೆಯ ಮಕ್ಕಳಿಂದ ಪ್ರಾರಂಬವಾದ ಈ ಪಾಠ ಶಾಲೆ ಈಗ 160 ಮಕ್ಕಳ ಸಂಖ್ಯೆಯನ್ನು ಹೊಂದಿದೆ. ಮಕ್ಕಳ ವಸತಿಗೆ ಕೊಠಡಿಗಳ ಸಂಖ್ಯೆ ಕಡಿಮೆಯಿರುವದರಿಂದ ವಟುಗಳ ವಾಸಕ್ಕೆ ತೊಂದರೆ ಯಾಗುತ್ತಲಿದೆ ಆದ್ದರಿಂದ ಹೆಚ್ಚುವರಿ ಕೊಠಡಿಗಳನ್ನು ನಿಮರ್ಿಸಲು ಸರಕಾರದಿಂದ ಅನುದಾನ ಕೊಡೆಸುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಪೂಜ್ಯ ಕಾಶಿ ಡಾ. ಚಂದ್ರಶೇಖರ ಶಿವಾಚಾರ್ಯರು ಆಶರ್ೀವಚನ ನೀಡಿ ವೇದ ಆಗಮನ ಕಾಲದಲ್ಲಿ ನಮ್ಮ ಋಷಿಮುನಿಗಳು ಕಂಠಪಾಠಮಾಡಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು ಲಿಫಿಯ ಅವಸ್ಯಕತೆ ಇಲ್ಲದ ಆಕಾಲದಲ್ಲಿ ಒಬ್ಬ ಋಷಿ ನಾಲ್ಕು ವೇದಗಳನ್ನು ಕಂಠಪಾಠ ಮಾಡುತ್ತಿದ್ದರು ಅಂತವರನ್ನು ಚತುವರ್ೇದಿ, ತ್ರಿವೇದಿ, ದ್ವೀವೇದಿ ಎಂದು ಕರೆಯುತ್ತಿದ್ದರು.
ಅರಣ್ಯದ ಮದ್ಯದಲ್ಲಿ ವಾಸಿಸುತ್ತಿರುವ ಗುರುಗಳ ಸೇವೆಯನ್ನು ಮಾಡಿ ಶಿಷ್ಯರು ವಿದ್ಯಯನ್ನು ಸಂಪಾದಿಸಿದ ಪ್ರತಿಫಲವಾಗಿ ಇಂದು ಅವು ನಮಗೆ ನೊಡಲು ಸಿಗುತ್ತಿವೆ. ದೇವಾನು ದೇವತೆಕಾಲಗಳಿಂದಲೂ ಬಂದ ವೇದ ಆಗಮ ಸಂಗೀತ ಸಂಸ್ಕೃತ ಯೋಗ ವಿದ್ಯೆಯನ್ನು ಇಲ್ಲಿನ ಮಕ್ಕಳಿಗೆ ಧಾರೆ ಎರೆಯ ಬೇಕೆಂಬುದೇ ನಮ್ಮ ಪೀಠದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಕೂಡಲದ ಪೂಜ್ಯ ಮಹೇಶ್ವರ ಶ್ರೀಗಳು, ಹುಬ್ಬಳ್ಳಿ ನವನಗರದ ಪೂಜ್ಯ ಸಿದ್ಧರಾಮ ಶ್ರೀಗಳು, ಅಕ್ಕಿ ಆಲೂರಿನ ಚಂದ್ರಶೇಖರ ಶ್ರೀಗಳು ಆಶೀರ್ವಚನ ನೀಡಿದರು. ವೇದ ಪಾಠಶಾಲೆಯ ಉಪಾದ್ಯಕ್ಷ ಶಂಬಣ್ಣ ಮಾಮ್ಲೇಪಟ್ಟಣಶೆಟ್ಟರ, ತಾಲೂಕಾ ಬಿಜೆಪಿ ಅದ್ಯಕ್ಷ ದೇವಣ್ಣ ಚಾಕಲಬ್ಬಿ, ಭರತ ಸೇವಾ ಸಂಸ್ಥೆಯ ಅದ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಎಂ.ಸಿ.ಪಾಟೀಲ, ವೀರಯ್ಯ ಹಿರೇಮಠ, ಶೋಬಾ ಗಂಜಿಗಟ್ಟಿ, ಪಾಠಶಾಲೆಯ ಮುಖ್ಯೋಪಾದ್ಯಾಯ ಶ್ರೀ ವಿಶ್ವೇಶ್ವರಯ್ಯ ಶಾಸ್ತ್ರೀಗಳು ಗುರುಶಾಂತಪ್ಪ ನರೇಗಲ್, ಗದಿಗೇಪ್ಪ ಮಾಮ್ಲೇಪಟ್ಟಣಶೆಟ್ಟರ, ಕಲ್ಲಪ್ಪ ಆಜೂರ, ಗದಿಗಯ್ಯ ಹಿರೇಮಠ ಸೇರಿದಂತೆ ಮತ್ತಿತರರು ಇದ್ದರು. ಉಮೇಶ ಅಂಗಡಿ ಸ್ವಾಗತಿಸಿದರು. ಗಂಗುಬಾಯಿ ದೇಸಾಯಿ ನಿರೂಪಿಸಿದರು.