ಹುತಾತ್ಮರ ದಿನಾಚರಣೆಗೆ ಮೌನಾಚರಣೆ
ಹಂಪಿ 01: ಕರ್ನಾಟಕ ಸರ್ಕಾರದ ಆದೇಶದಂತೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಹುತಾತ್ಮರಾದ ಮಹನೀಯರ ಜ್ಞಾಪಕಾರ್ಥವಾಗಿ ಗೌರವ ಸೂಚಿಸಲು ಭಾರತ ಸರ್ಕಾರದ ನಿರ್ದೇಶನದ ಅನ್ವಯ 2025ರ ಜನವರಿ 30ರಂದು ಬೆಳಿಗ್ಗೆ 11.ಗಂಟೆಗೆ ಕನ್ನಡ ವಿಶ್ವವಿದ್ಯಾಲಯದ ಕ್ರಿಯಾಶಕ್ತಿಯ ಸಿಂಡಿಕೇಟ್ ಸಭಾಂಗಣದಲ್ಲಿ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ, ಕುಲಸಚಿವರಾದ ಡಾ.ವಿಜಯ್ ಪೂಣಚ್ಚ ತಂಬಂಡ, ಅಧಿಕಾರಿ ವರ್ಗ, ಸಿಬ್ಬಂದಿಗಳು ಸೇರಿ 2 ನಿಮಿಷಗಳ ಕಾಲ ಮೌನಾಚರಣೆ ಮಾಡಿದರು. ಆಯಾ ವಿಭಾಗಗಳಲ್ಲೂ ಅಧ್ಯಾಪಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು 2 ನಿಮಿಷಗಳ ಕಾಲ ಮೌನಾಚರಣೆ ಮಾಡಿದರು.