ಕಾಗವಾಡ ಗ್ರಾಮದಲ್ಲಿ ಸಿಲ್ಡೌನ್ ಯಶಸ್ವಿ

ಲೋಕದರ್ಶನ ವರದಿ

ಕಾಗವಾಡ 12:  ಲಾಕ್ಡೌನ್ ಸಡಿಲಿಕೆವಾದ ಬಳಿಕ ನೆರೆಯ ಮಹಾರಾಷ್ಟ್ರ ರಾಜ್ಯದಿಂದ ನೂರಾರು ಜನರು ಕಾಲ್ನಡಿಗೆಯಿಂದ, ಕೆಲವರು ವಾಹನಗಳಿಂದ ಗಡಿಯಲ್ಲಿರುವ ಕಾಗವಾಡ ಗ್ರಾಮದವರೆಗೆ ಬರುತ್ತಿದ್ದರಿಂದ ಯಾವುದೇ ಸೋಂಕಿತ ಕಾಣದೆಯಿರುವ ಕಾಗವಾಡದಲ್ಲಿ ಇಂಥವರಿಂದ ತೊಂದರೆಯಾಗಬಾರದೆಂದು ಮನಗಂಡು ಸ್ವಯಂ ಪ್ರೇರಣೆಯಿಂದ ಮಂಗಳವಾರ ಬೆಳಿಗ್ಗೆಯಿಂದ ಸಂಜೆವರೆಗೆ ಸಂಪೂರ್ಣ ದಿನನಿತ್ಯದ ವ್ಯವಹಾರಗಳು ಸ್ಥಗೀತಗೊಳಿಸಿ ಸಿಲ್ಡೌನ್ ಮಾಡಲು ಯಶಸ್ವಿವಾದರು.

ಮಂಗಳವಾರರಂದು ಕಾಗವಾಡ ಗ್ರಾಮದಲ್ಲಿ ಎಲ್ಲ ಅಂಗಡಿ ಮುಕ್ಕಟಗಳು, ಬ್ಯಾಂಕ್ ಎಲ್ಲ ವ್ಯವಹಾರಗಳು ಸ್ವಯಂ ಪ್ರೇರಣೆಯಿಂದ ಬಂದ್ವಿಟ್ಟಿದ್ದರು. ಇದಕ್ಕೆ ಎಲ್ಲ ಜನರು ಸಾಥ ನೀಡಿದ್ದರು.

ಕಾಗವಾಡ ಗ್ರಾಮದ ಮುಖಂಡರಾದ ಸದಾಶಿವ ಚೌಗುಲೆ ಮಾತನಾಡಿ, ಕಾಗವಾಡ ಗಡಿ ಗ್ರಾಮವಾಗಿದ್ದರಿಂದ ಇದರ ನೆರೆಯ ಕೊಲ್ಹಾಪುರ ಮತ್ತು ಸಾಂಗಲಿ ಜಿಲ್ಲೆಯ ಗಡಿ ಗ್ರಾಮಗಳು ಹತ್ತಿರವಾಗಿವೆ. ಸಂಪಕರ್ಿಸಲು ಕೆಲ ಕಳ್ಳಮಾರ್ಗವಿದ್ದು, ಅದರ ಮುಖಾಂತರ ಮತ್ತು ಮಹಾರಾಷ್ಟ್ರ ಪೊಲೀಸ್ರು ನೇರವಾಗಿ ಕೆಲವರನ್ನು ಅವರ ಹದ್ದಿವರೆಗೆ ತಂದು ಬಿಡಲು ಪ್ರಾರಂಭಿಸಿದ್ದಾರೆ.ಇದ್ದರಿಂದ ನೂರಾರು ಜನರು ಇಲ್ಲಿಗೆ ಆಗಮಿಸುತ್ತಿದ್ದು, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ಕೈಜೋಡಿಸಲು ಒಂದು ದಿನ ಸಿಲ್ಡೌನ್ ಮಾಡಿದ್ದೇವೆ. ನಾಳೆಯಿಂದ ಮಧ್ಯಾಹ್ನ 3ರ ವರೆಗೆ ಮಾತ್ರ ಗ್ರಾಮದಲ್ಲಿ ಕೆಲ ವ್ಯವಹಾರಗಳು ಮಾಡಬಹುದು. ನಂತರ ಎಲ್ಲ ವ್ಯವಹಾರಗಳು ಸ್ಥಗೀತಗೊಳಿಸಿ ಇಂಥವರ ಹುಡುಕಾಟ ಪ್ರಾರಂಭಿಸಲು ನಾವು ಸಹಕರಿಸುವ ನಿರ್ಧರ ತೆಗೆದುಕೊಂಡಿದ್ದೇವೆ ಎಂದರು.

ಇದೇ ರೀತಿ ಗ್ರಾಪಂ ಸದಸ್ಯರಾದ ಜಾವೇದ್ ಶೇಖ್, ಪ್ರಕಾಶ ಧೊಂಡಾರೆ, ಬಾಳಾಸಾಹೇಬ ಕಲ್ಲೋಳೆ, ರಮೇಶ ಚೌಗುಲೆ, ಮಿರಾಸಾಬ ಕಾಂಬಳೆ, ಜ್ಯೋತಿಕುಮಾರ ಪಾಟೀಲ, ಸೇರಿದಂತೆ ಇನ್ನೀತರ ಸದಸ್ಯರು, ಗ್ರಾಮಸ್ಥರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.