ಬೆಳಗಾವಿ: ಸರ್ಕಾರಿ ಪಾಲಿಟೆಕ್ನಿಕ್ ಜೊತೆ ತಿಳುವಳಿಕೆ ಒಪ್ಪಂದಕ್ಕೆ ಸಹಿ

ಲೋಕದರ್ಶನ ವರದಿ

ಬೆಳಗಾವಿ 05:  ಕೆಎಲ್ಎಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಎಜುಕೇಶನ್ ಮತ್ತು ರಿಸಚರ್್ ಇತ್ತೀಚೆಗೆ ಬೆಳಗಾವಿಯ ಸರ್ಕಾರಿ ಪಾಲಿಟೆಕ್ನಿಕ್ ಜೊತೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದಕ್ಕೆ ನಿದರ್ೆಶಕ ಐಎಂಇಆರ್ ಡಾ.ಅತುಲ್ ಆರ್. ದೇಶಪಾಂಡೆ ಅವರು ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ವೈ.ಎನ್.ದೊಡ್ಡಮಣಿ ಅವರೊಂದಿಗೆ ಸಹಿ ಹಾಕಿದರು.

ಸೂಕ್ತವಾದ ಬೋಧನೆ / ತರಬೇತಿ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಮಹತ್ವದ ಒಳಹರಿವುಗಳನ್ನು ಒದಗಿಸುವ ಮೂಲಕ ಎರಡೂ ಸಂಸ್ಥೆಗಳು ಬೌದ್ಧಿಕ ಸಾಮರ್ಥ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಅನುಕೂಲವಾಗಲಿದ್ದು, ಇದು ಉದ್ಯಮದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯಾಥರ್ಿಗಳ ಕೌಶಲ್ಯ ಮತ್ತು ಜ್ಞಾನವನ್ನು ಹೆಚ್ಚಿಸುವಲ್ಲಿ ವಿದ್ಯಾಥರ್ಿಗಳ ಸಮುದಾಯಕ್ಕೆ ಪ್ರಯೋಜನವನ್ನು ನೀಡುತ್ತದೆ.