ಮಹನೀಯರ ಅರಿವು ಮೂಡಿಸುವುದು ಗಮನಾರ್ಹ ಸಂಗತಿ

ಲೋಕದರ್ಶನ ವರದಿ

ಅಥಣಿ 11:  ಮಹಾನ್ ಮಹನಿಯರ ತ್ಯಾಗದಿಂದ ಸ್ಥಾಪಿತವಾದ ಕೆಎಲ್ಇ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಬೋಧನಾ ಕ್ಷೇತ್ರದಲ್ಲಿರುವ ಶಿಕ್ಷಕರು ವಿದ್ಯಾಥರ್ಿಗಳಿಗೆ ಸಪ್ತಷರ್ಿಗಳ, ತ್ಯಾಗವೀರ ಶಿರಸಂಗಿ ಲಿಂಗರಾಜರಂಥ ದಾನ ಮಹನೀಯರ ಪರಂಪರೆ ಬಗ್ಗೆ ಅರಿವು ಮೂಡಿಸುವುದು  ಇಂದಿನ ಗಮನಾರ್ಹ ಸಂಗತಿಯಾಗಿದೆ ಡಾ. ಬಾಳಾಸಾಬ ಲೋಕಾಪುರ ಹೇಳಿದರು.

        ಇಂದು ಲಿಂಗರಾಜ ಜಯಂತಿ ಉತ್ಸವ ಸಮಿತಿ, ಅಥಣಿ ಹಾಗೂ ಕನರ್ಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ ಅಥಣಿಯ ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶಿವಯೋಗಿ ಮುರುಘೇಂದ್ರ ಸ್ವಾಮೀಜಿ ಮಹಾವಿದ್ಯಾಲಯದ ಸಭಾ ಭವನದಲ್ಲಿ ಹಮ್ಮಿಕೊಂಡ ತ್ಯಾಗವೀರ ಶಿರಸಂಗಿ ಲಿಂಗರಾಜರ 159 ನೇ ಜಯಂತಿ ಉತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. 

         ಪುಣ್ಯ ಪುರುಷರ ಭವ್ಯ ಪರಂಪರೆ, ಅವರ ಬದುಕಿನ ದಾರಿ ವಿದ್ಯಾಥರ್ಿಗಳ ಜೀವನಕ್ಕೆ ಮಾರ್ಗದರ್ಶನ ಪಥವಾಗಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರು, ಸಾಹಿತಿಗಳು ಆದ ಡಾ. ಬಾಳಾಸಾಹೇಬ ಲೋಕಾಪೂರ  ಸನ್ಮಾನ ಹಾಗೂ ತ್ಯಾಗವೀರ ಶಿರಸಂಗಿ ಲಿಂಗರಾಜ ಪ್ರಶಸ್ತಿಯನ್ನು ಸ್ವಿಕರಿಸಿ ಮಾತನಾಡುತ್ತ, ದೇಸಾಯಿಗಳ ವಾಡೆಯಲ್ಲಿಯ ಕ್ರೌರ್ಯ, ದಬ್ಬಾಳಿಕೆಯ ಸಂಸ್ಕ್ರತಿಯನ್ನು ಹತ್ತಿಕ್ಕಿ ಅವು ಜನಮುಖಿಯಾಗಿ, ಸಮಾಜಮುಖಿಯಾಗಿ, ಮಹಿಳಮುಖಿಯಾಗಿ ಪರಿವರ್ತನೆ ಹೊಂದಿ ಶ್ರಮಿಸುವಲ್ಲಿ ಶಿರಸಂಗಿ ಲಿಂರಾಜರ ಪರಿಶ್ರಮ, ಪ್ರಯತ್ನ ಅಘಾದವಾದುದು ಎಂದು ಡಾ. ಬಾಳಾಸಾಬ ಲೋಕಾಪೂರ   ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಲಿಂಗರಾಜ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರಾದ ಡಾ.ಮಹಾಂತೇಶ ಉಕ್ಕಲಿ ಮಾತನಾಡಿ, ಮುರುಘೇಂದ್ರ ಶಿವಯೋಗಿಗಳ ಸತತ ಸಂಪರ್ಕದಲ್ಲಿದ್ದ ಲಿಂಗರಾಜರು ಅವರ ಸಲಹೆ, ಸೂಚನೆ, ಮಾರ್ಗದರ್ಶನ ಪಡೆದು ಮುನ್ನಡೆಯುತ್ತಿದ್ದ ವಿಷಯನ್ನು ಪ್ರಸ್ತಾಪಿಸಿ, ಅಥಣಿಗೂ ಲಿಂಗರಾಜರಿಗೂ ಇದ್ದ ಅವಿನಾಭಾವ ಸಂಬಂಧವನ್ನು ಸ್ವರಿಸಿಕೊಂಡು ಮಾತನಾಡಿದರು.

ಇದೇ ಸಮಯದಲ್ಲಿ ಮಾತನಾಡಿದ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾಯರ್ಾಧ್ಯಕ್ಷ ಡಾ: ಮಲ್ಲಿಕಾಜರ್ುನ ಹಂಜಿ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಸುಮಾರು ಏಳನೂರು ಸಂಸ್ಥಾನಗಳಿದ್ದು, ಅದರಲ್ಲಿ ಶಿರಸಂಗಿ ಸಂಸ್ಥಾನವು ಅತ್ಯಂತ ಚಿಕ್ಕದಾಗಿದ್ದರೂ ತನ್ನ ಸಮಾಜಮುಖಿ, ಜನಮುಖಿ ಅಭಿವೃದ್ಧಿ ಕಾರ್ಯಗಳ ಮೂಲಕ ಅದು ಅತ್ಯುನ್ನತ ಶಿಖರಕ್ಕೆರಿ ಪ್ರಸಿದ್ಧಿ ಪಡೆದುದ್ದನ್ನು ತಿಳಿಸಿದರು. ಪ್ರಾರಂಭದಲ್ಲಿ ತ್ಯಾಗವೀರ ಶಿರಸಂಗಿ ಲಿಂಗರಾಜರ ಭಾವಚಿತ್ರಕ್ಕೆ ಜೋತಿ ಬೆಳಗಿಸಿ ಪುಷ್ಪವನ್ನು ಅಪರ್ಿಸಲಾಯಿತು. ಆಂಗ್ಲ ಮಾದ್ಯಮ ಶಾಲೆಯ ವಿದ್ಯಾಥರ್ಿನಿಯರು ಪ್ರಾರ್ಥನೆ ಹಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಆರ್.ಎಫ್.ಇಂಚಲ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಕೆ.ಆರ್ ಸಿದ್ದಗಂಗಮ್ಮಾ ಅವರು ಅತಿಥಿಗಳನ್ನು ಪರಿಚಯಿಸಿದರು. ದಾನಿಗಳಾದ ಜಗದೀಶ ನೇಮಗೌಡ, ಬಸವರಾಜ ಇಟ್ನಾಳ, ಮಲ್ಲಿಕಾಜರ್ುನ ಸಂಕ ಹಾಗೂ ಎ.ಎಸ್. ಹಿರೇಮಠ ಇವರ್ನು ಸನ್ಮಾನಿಸಲಾಯಿತು.  ಜಯಂತಿ ನಿಮಿತ್ಯವಾಗಿ ಹಮ್ಮಿಕೊಂಡ ಭಾಷಣ ಹಾಗೂ ಗಾಯನ ಸ್ಪಧರ್ೆಯಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಬಹುಮಾನ ನೀಡಲಾಯಿತು. ಕಾವ್ಯ ಗಾಯನ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನಗಳಿಸಿದ ಶ್ರೀನಿವಾಸ ಚೌದರಿ-ಪ್ರಾಥಮಿಕ, ಸಾಗರ ಸಂಕ್ರಟ್ಟಿ-ಪ್ರೌಢ, ನಿಲಾಂಬಿಕಾ ಹೊನ್ನೊಳ್ಳಿ-ಕಾಲೇಜು ಈ ವಿದ್ಯಾಥರ್ಿಗಳು ತಮ್ಮ ಗಾಯನವನ್ನು ಪ್ರಸ್ತುತ ಪಡಿಸಿದರು.  ಸಿ.ಎಸ್. ಜನವಾಡೆಯವರು ಬಹುಮಾನ ವಿತರಣೆಯನ್ನು ನಡೆಸಿಕೊಟ್ಟರು.  ಡಾ.ವಿಜಯ ಕಾಂಬಳೆ ಕಾರ್ಯಕ್ರಮ ನಿರೂಪಿಸಿದರು.  ಡಾ. ಎಸ್.ವಾಯ್.ಹೊನ್ನುಂಗರ ವಂದಿಸಿದರು. ತ್ಯಾಗವೀರ ಶಿರಸಂಗಿ ಲಿಂಗರಾಜರ ಜಯಂತಿ ಉತ್ಸವ ಸಮೀತಿಯ ಉಪ ಅಧ್ಯಕರಾದ ನಂದಕುಮಾರ ಟಿ ಸಾವಡಕರ , ಸಿ.ಎಸ್.ಜನವಾಡೆ ವೇದಿಕೆಯ ಮೇಲೆ ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ  ಎಚ್.ಆರ್ ಚಮಕೇರಿ, ಅಲ್ಲಪ್ಪಣ್ಣಾ ನಿಡೋಣಿ, ಪ್ರಕಾಶ ಪಾಟೀಲ, ವಿಜಯಕುಮಾರ ಬುಲರ್ಿ  ಎಮ್.ಎನ್.ಚಿಂಚೋಳಿ, ಮುಂತಾದ ಜಯಂತಿ ಉತಸ್ವದ ಸದಸ್ಯರು ಮಹಾವಿದ್ಯಾಲಯದ ಹಾಗೂ ಎಲ್ಲ ಅಂಗ ಸಂಸ್ಥೆಗಳ ಎಲ್ಲ ಸಿಬ್ಬಂದಿ, ವಿದ್ಯಾಥರ್ಿ- ವಿದ್ಯಾಥರ್ಿನಿಯರು ಪಾಲ್ಗೊಂಡಿದ್ದರು.