ನಿಷೇಧಾಜ್ಞೆ ಉಲ್ಲಂಘಿಸಿ ಅನಗತ್ಯ ರಸ್ತೆಗಿಳಿಯುವ ವಾಹನಗಳನ್ನು ಸೀಜ್ ಮಾಡಿ
ಹಾವೇರಿ: 30: ಕರೋನಾ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳಿ. ಜನರೊಂದಿಗೆ ಸೂಕ್ಷ್ಮವಾಗಿ ನಡೆದುಕೊಳ್ಳಿ, ಉದ್ದೇಶಪೂರ್ವಕವಾಗಿ ನಿಷೇಧಾಜ್ಞೆ ಉಲ್ಲಂಘಿಸುವವರ ಮೇಲೆ ಹಾಗೂ ಪರಿಸ್ಥಿತಿಯ ಲಾಭಪಡೆದು ದಿನದಿ ಹಾಗೂ ತರಕಾರಿ ದರ ದುಪ್ಪಟ್ಟು ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಶಾಸಕ ನೆಹರು ಓಲೇಕಾರ ಸೂಚಿಸಿದರು.
ಕರೋನಾ ಸೋಂಕು ತಡೆಯ ಮುನ್ನೆಚ್ಚರಿಕೆ ಕ್ರಮಗಳ ಅನುಷ್ಠಾನ ಕುರಿತಂತೆ ಸೋಮವಾರ ನಗರದ ನಗರಸಭೆ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಜನದಟ್ಟಣೆಯಾಗದಂತೆ ಕಠಿಣ ಕ್ರಮಕೈಗೊಳ್ಳಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ನಿಗಾವಹಿಸಿ, ಗೃಹ ಪ್ರತ್ಯೇಕತೆಯಲ್ಲಿರುವವರು ಮನೆಯಿಂದ ಹೊರಗೆ ಬರದಂತೆ ಎಚ್ಚರವಹಿಸಿ ಎಂದು ಸಲಹೆ ನೀಡಿದರು.
ನಗರ ಸ್ವಚ್ಛತೆ ಹಾಗೂ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಸುವಂತೆ ಪೌರಾಯುಕ್ತರಿಗೆ ಹಾಗೂ ನಗರಸಭೆ ಪರಿಸರ ಅಭಿಯಂತರರು ಹಾಗೂ ಕಾರ್ಯನಿವರ್ಾಹಕ ಇಂಜನೀಯರ್ಗೆ ಸೂಚನೆ ನೀಡಿದ ಅವರು, ಕಳೆದ ಎರಡು ದಿನಗಳಿಂದ ಕುಡಿಯುವ ನೀರಿನ ಸಬರಾಜಿನ ಪೈಪ್ ಹಾಳಾದರೂ ದುರಸ್ಥಿಮಾಡದ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರು.
ಲಾಠಿ ಬಿಡಿ-ದಂಡಹಾಕಿ: ಕಫ್ಯರ್ೂ ಜಾರಿಯಲ್ಲಿದೆ. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕೆಲವರು ಉದ್ದೇಶಪೂರ್ವಕವಾಗಿ ರಸ್ತೆಗೆ ಇಳಿಯುವುದು, ಗುಂಪುಗುಂಪಾಗಿ ಸೇರುತ್ತಾರೆ. ಕರೋನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿರುವುದರಿಂದ ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳನ್ನು ಸೀಜ್ ಮಾಡಿ ದಂಡಹಾಕಿ. ನಿಷೇಧಾಜ್ಞೆ ಮುಗಿಯುವವರೆಗೂ ವಾಹನಗಳನ್ನು ಹಿಂದಿರುಗಿಸಬೇಡಿ. ಆದರೆ ಲಾಠಿ ಪ್ರಯೋಗ ಮಾಡಬೇಡಿ ಎಂದು ಪೊಲೀಸ್ರಿಗೆ ಸಲಹೆ ನೀಡಿದರು.
ದಿನಸಿ ತರಕಾರಿಯನ್ನು ದುಪ್ಪಟ್ಟು ದರದಲ್ಲಿ ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮಕೈಗೊಳ್ಳಿ. ಪ್ರತಿ ಅಂಗಡಿಗಳ ಮುಂದೆ ದಿನಸಿ ದರಗಳ ಫಲಕಗಳನ್ನು ಪ್ರದಶರ್ಿಸಬೇಕು. ಎಂ.ಆರ್.ಪಿ.ದರದಲ್ಲೇ ಮಾರಾಟ ಮಾಡುವಂತೆ ಕ್ರಮವಹಿಸಬೇಕು. ರೈತರಿಂದ ಖರೀದಿಸಿದ ದರದ ಮೇಲೆ ಐದು ರೂ.ಲಾಭ ಇರಿಸಿ ತರಕಾರಿ ಮಾರಾಟ ಮಾಡಬೇಕು. ತಳ್ಳುಗಾಡಿಗಳ ಮೇಲೆ ತರಕಾರಿಗಳ ದರಗಳ ಫಲಕಗಳನ್ನು ಹಾಕಿಕೊಳ್ಳುವಂತೆ ಕ್ರಮವಹಿಸಲು ಕೃಷಿ ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಐಸೋಲೇಷನ್ ವಾಡರ್್ಗಳಿಗೆ ಅಗತ್ಯವಾದ ಹೆಚ್ಚುವರಿ ಕಟ್ಟಡಗಳನ್ನು ಸಿದ್ಧತೆಮಾಡಿಕೊಳ್ಳಿ, ಮೊರಾಜರ್ಿ ಶಾಲೆಗಳು, ಸಕರ್ಾರಿ ಇಂಜನೀಯರಿಂಗ್ ಕಾಲೇಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಹಳೆ ಕಚೇರಿ, ಹಾವೇರಿಯಲ್ಲಿ ಸ್ಥಗಿತಗೊಂಡಿರುವ ರೈಲ್ವೆ ಬೋಗಿಗಳ ಬಳಕೆ ಸೇರಿದಂತೆ ಎಲ್ಲ ಕ್ರಮಗಳನ್ನು ವಹಿಸಿ, ಮಾಸ್ಕ್ ಹಾಗೂ ಇತರೆ ವೈದ್ಯಕೀಯ ಸುರಕ್ಷಾ ಉಪಕರಗಳ ದಾಸ್ತಾನಿಗೆ ಕ್ರಮವಹಿಸಿ ಎಂದು ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಕಾಮರ್ಿಕ ಅಧಿಕಾರಿಗಳು, ಹಾವೇರಿ ತಾಲೂಕಿನ ಏಳುಸಾವಿರ ನೊಂದಾಯಿತ ಕಾಮರ್ಿಕರಿಗೆ ತಲಾ ಒಂದು ಸಾವಿರ ರೂ. ಪ್ರೋತ್ಸಾಹಧನ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ 1500 ಕಾಮರ್ಿಕರ ಖಾತೆಗೆ ನೇರ ಹಣ ಜಮಾಮಾಡಲಾಗಿದೆ. ರೆಡ್ ಕ್ರಾಸ್ ಸಹಯೋಗದಲ್ಲಿ ಕಾಮರ್ಿಕರಿಗೆ ಕರೋನಾ ಸುರಕ್ಷತಾ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಕೃಷಿ ಕೆಲಸಕ್ಕೆ ನಿರ್ಭಂಧ ಬೇಡ, ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಅನುಮತಿಯಲ್ಲಿ ಯಾವುದೇ ತೊಂದರೆಯಾಗಬಾರದು. ಅಗತ್ಯ ವಸ್ತುಗಳ ಸಾಗಾಣಿಕೆಗೆ ಪರವಾನಿಗೆ ನೀಡುವ ವ್ಯವಸ್ಥೆ ಸರಳಿಕರಿಸಿ. ರೇಷ್ಮೆ ಗೂಡು ಸಾಗಾಣಿಕೆ, ಹಣ್ಣು, ತರಕಾರಿ, ಸಾಗಾಣಿಕೆಗೆ ತೊಂದರೆಯಾಗಬಾರದು ಎಂದು ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ ಅವರು ಸೂಚಿಸಿದರು.
ಸಭೆಯಲ್ಲಿ ಡಿ.ವೈ.ಎಸ್.ಪಿ. ವಿಜಯಕುಮಾರ ಸಂತೋಷ್, ತಹಶೀಲ್ದಾರ ಶಂಕರ, ತಾಲೂಕು ಪಂಚಾಯತಿ ಕಾರ್ಯನಿವರ್ಾಹಕ ಅಧಿಕಾರಿ ಬಸವರಾಜ, ಪೌರಾಯುಕ್ತ ಬಸವರಾಜ ಜಿದ್ದಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 