ಟ್ಯಾಲೆಂಟ್ ಹಂಟ್ ಪಾರಿತೋಷಕ ವಿತರಣೆ
Talent Hunt Prize Distribution
ಲೋಕದರ್ಶನ ವರದಿ
ವಿಜಯಪುರ 17: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜರುಗಿದ ಟ್ಯಾಲೆಂಟ್ ಹಂಟ್ ಹಿ 2026 ಕಾರ್ಯಕ್ರಮದ ವಿಜೇತರಿಗೆ ದಿ. 15ರಂದು ನಗರ ವಿ. ಭ. ದರಬಾರ ಪ್ರೌಢ ಶಾಲೆಯಲ್ಲಿ ಪ್ರಶಸ್ತಿ ವಿತರಣಾ ಸಮಾರಂಭ ಜರುಗಿತು. ದರಬಾರ ಸಮೂಹ ಶಿಕ್ಷಣಸಂಸ್ಥೆಗಳು ಹಾಗೂ ಶಮ್ಸ್ ಶಿಕ್ಷಣ ಸಂಸ್ಥೆಗಳು ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ರಾಜೇಶ ಡಿ. ದರಬಾರ ವಿದ್ಯಾರ್ಥಿಗಳಲ್ಲಿನ ಸೂಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದ ಸಮೂಹ ಶಿಕ್ಷಣ ಸಂಸ್ಥೆಗಳ ಶಿಕ್ಷಕವೃಂದದ ಕಾರ್ಯವನ್ನು ಶ್ಲಾಘಿಸುತ್ತಾ, ಪುಟಾಣಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಮುಕ್ತಕಂಠದಿಂದ ಹೊಗಳಿದರು.
ಸಂಘಟನಾ ಮುಖ್ಯಸ್ಥೆ ದರ್ಶಿನಿ ವಿ. ದರಬಾರ. ಮಾತನಾಡುತ್ತ ಎಲ್ಲ ಸ್ಪರ್ಧೆಗಳ ಸ್ಪರ್ಧಾಳುಗಳನ್ನು ಅಭಿನಂದಿಸುತ್ತಾ, ಸ್ಪರ್ಧೆಗಳ ನಿರ್ಣಯಗಳು ನಿಸ್ಪಕ್ಷಪಾತವಾಗಿರುವ ಕುರಿತು ಹರ್ಷ ವ್ಯಕ್ತಪಡಿಸುತ್ತಾ, ಬೇರೆ ಸಂಸ್ಥೆಗಳಿಂದ ಆಗಮಿಸಿದ ನಿರ್ಣಾಯಕರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಪ್ರಕಾಶ ಎಸ್. ಉಡುಪಿಕರ ಇವರು ಈ ಸ್ಪರ್ಧೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾ, ನಗರದಲ್ಲಿ ್ರ್ರಥಮವಾಗಿ ಜರುಗುತ್ತಿರುವ ಅಂತರ್ ಶಾಲಾಮಟ್ಟದ ಟ್ಯಾಲೆಂಟ್ ಹಂಟ್ ಸ್ಪರ್ಧೆಗಳು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಶಾಲೆಗಳನ್ನು ಹಾಗೂ ವಿದ್ಯಾರ್ಥಿಗಳನ್ನು ತಲುಪಲಿ ಎಂಬ ಸಂದೇಶವನ್ನು ನುಡಿದರು.
ವಿದ್ಯಾವರ್ಧಕ ಸಂಘದ ಸಮನ್ವಯಾಧಿಕಾರಿ ಡಾ. ವ್ಹಿ. ಬಿ. ಗ್ರಾಮಪುರೋಹಿತ, ಇವರು ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಟ್ಯಾಲೆಂಟ್ ಹಂಟ್ ಆಯೋಜನೆಯ ಮಹತ್ವವನ್ನು ವಿವರಿಸಿ ಅದರ ಹಿಂದಿನ ಶ್ರಮವನ್ನು ಶ್ಲಾಘಿಸಿದರು. ವಿ ಭ ದರಬಾರ ಪ್ರೌಢಶಾಲೆಯ ಹಿರಿಯ ಶಿಕ್ಷಕ ಎ. ಜಿ. ಥೊಬ್ಬಿ ಇವರು ವಂದನಾರೆ್ಣ ಸಲ್ಲಿಸಿದರು.
ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಸದಸ್ಯರುಗಳಾದ ಆದಿತ್ಯ ಎನ್. ದರಬಾರ, ಮುಖ್ಯ ಅತಿಥಿ ಸ್ಥಾನದಲ್ಲಿ ಉಪಸ್ಥಿತರಿದ್ದರು. ವೇದಿಕೆಯ ಮೇಲೆ ಶಮ್ಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಸಂಧ್ಯಾ. ಸಿ ಹಾಗೂ ಮುಖ್ಯ ಗುರುಮಾತೆ ರೇವತಿ ಕುಲಕರ್ಣಿ ಉಪಸ್ಥಿತರಿದ್ದರು.
ನರ್ಸ್ರಿ ವಿಭಾಗದಿಂದ 10ನೇ ತರಗತಿಯ ಸುಮಾರು 56 ವಿದ್ಯಾರ್ಥಿಗಳು ಪಾರಿತೋಷಕಗಳನ್ನು ಪಡೆದುಕೊಂಡರು. ವಿದ್ಯಾವರ್ಧಕ ಸಂಘದ ದರಬಾರ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕವೃಂದ, ಪಾಲಕರು, ಬೇರೆ ಶಾಲೆಗಳಿಂದ ಆಗಮಿಸಿದ ಮಾರ್ಗದರ್ಶಿ ಶಿಕ್ಷಕರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 