ಚಿಕ್ಕೋಡಿ: ಸಿಕ್ಕಾಪಟ್ಟೆ ಲೋಡಿಂಗ್, ಯರ್ರಾಬಿರ್ರಿ ರೈಡಿಂಗ್....

ಲೋಕದರ್ಶನ ವರದಿ

ಚಿಕ್ಕೋಡಿ 25:  ತಾಲೂಕಿನ ಮಾಂಜರಿ ಗ್ರಾಮದ ಸೂತ್ತಮುತ್ತಲಿನ ಭಾಗದಲ್ಲಿ ಯದ್ವಾತದ್ವಾ ಸಂಚರಿಸುವ ಕಬ್ಬಿನ ಟ್ರ್ಯಾಕ್ಟರ್ಗಳ ಸ್ವಯಂಘೋಷಿತ ಸಂಚಾರ ನಿಯಮಗವು...

 ಬೆಳಗಾವಿ ಜಿಲ್ಲೆಯ ಹತ್ತಾರು ಸಕ್ಕರೆ ಕಾಖರ್ಾನೆಗಳಿಗೆ ಕಬ್ಬು ಸಾಗಿಸುವ ನೂರಾರು ಟ್ರ್ಯಾಕ್ಟರ್ಗಳು ರಸ್ತೆಯಲ್ಲಿ ಎಗ್ಗಿಲ್ಲದೆ ನುಗ್ಗಿ ಇತರ ವಾಹನ ಸವಾರರು ಮತ್ತು ಸಾರ್ವಜನಿಕರಲ್ಲಿ ಭಯ ಮೂಡಿಸುತ್ತಿವೆ.

ಇಲ್ಲಿ ನಡೆಯುವ ಅಪಘಾತಕ್ಕೆ ಟ್ರ್ತಾಕ್ಟರ್ಗಳೇ ಕಾರಣ ಎಂಬ ಮಾತಿದೆ. ಅಷ್ಟರಮಟ್ಟಿಗೆ ಈ ಭಾಗದಲ್ಲಿ ಟ್ರ್ತಾಕ್ಟರ್ಗಳು ರಸ್ತೆ ಮೇಲೆ ಯಮಸ್ವರೂಪಿಯಾಗಿ ಸಂಚರಿಸುತ್ತಿವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಾರೆ

ವೇಗ ನಿಯಂತ್ರಣವಿಲ್ಲ: ರಸ್ತೆ ಮೇಲಿನ ಎಲ್ಲ ವಾಹನಗಳಿಗೂ ವೇಗ ಮತ್ತು ಭಾರದ ವಿಷಯದಲ್ಲಿ ಒಂದು ಮಿತಿಯಿದೆ. ಆದರೆ ಈ ಟ್ರ್ತಾಕ್ಟರ್ಗಳಿಗೆ ಯಾವ ಮಿತಿಯೂ ಇಲ.್ಲ ಒಂದು ಟೇಲರ್ಗೆ 6 ಟನ್ ಮತ್ತು ಎರಡು ಟೇಲರ್ ಸೇರಿ 16 ಟನ್ ಭಾರ ಮಾತ್ರ ಹೇರಬೇಕೆಂಬ ನಿಯಮವಿದ್ದರೂ 35 ರಿಂದ 40 ಟನ್ ಕಬ್ಬು ಸಾಗಿಸಲಾಗುತ್ತಿದೆ. ಕೆಲವೊಮ್ಮೆ ದಾಖಲೆಗಾಗಿ ಎರಡು ಟೇಲರ್ನಲ್ಲಿ 50 ಟನ್ವರೆಗೆ ಕಬ್ಬು ಸಾಗಿಸುವ ದುಸ್ಸಾಹಸ ಮಾಡಲಾಗುತ್ತದೆ

ಚಾಲಕರು ಹೆಚ್ಚು ವೇಗವಾಗಿ ಟ್ರ್ತಾಕ್ಟರ್ ಚಲಾಯಿಸಿ ಬೇರೆ ವಾಹನ ಸವಾರರ ದಿಕ್ಕು ತಪ್ಪಿಸಿ ಅಪಘಾತಕ್ಕೆ ಕಾರಣರಾಗುತ್ತಿದ್ದಾರೆ. ಧಾಭಾ ಮತ್ತು ಪಾನ್ಶಾಪ್ಗಳ ಮುಂದೆ ಬೆಕಾಬಿಟ್ಟಿ ಟ್ರ್ಯಾಕ್ಟರ್ಗಳನ್ನು ನಿಲ್ಲಿಸಿ ಸಂಚಾರ ದಟ್ಟಣೆಗೆ ಕಾರಣರಾಗುತ್ತಿದ್ದಾರೆ. ಟ್ರ್ಯಾಕ್ಟರ್ ಡಬ್ಬಿಗಳಿಗೆ ರಿಪ್ಲೆಕ್ಟರ್ ಇಲ್ಲದ್ದರಿಂದ ಕೆಟ್ಟುನಿಂತ ಟ್ರ್ಯಾಕ್ಟರ್ಗಳಿಗೆ ಇತರ ವಾಹನಗಳು ಡಿಕ್ಕಿ ಹೊಡೆದು ಅಪಘಾತಗಳಾಗುತ್ತಿವೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅತಿಯಾದ ಶಬ್ದ ಮಾಲಿನ್ಯ

ಕಬ್ಬಿನ ಟ್ರ್ಯಾಕ್ಟರ್ಗಳ ಅತಿಯಾದ ಶಬ್ದದಿಂದ ಮುಂದೆ ಸಂಚರಿಸುವ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ. ಸಾಲದ್ದಕ್ಕೆ ಚಾಲಕರು ಟೈಂಪಾಸ್ಗಾಗಿ ಟ್ರ್ಯಾಕ್ಟರ್ ಹುಡ್ಡಾಗಳ ಎರಡೂ ಬದಿಯಲ್ಲಿ ಭಾರಿ ಶಬ್ದ ಸೌಂಡ್ ಸಿಸ್ಟಂ ಅಳವಡಿಸಿ ಹಾಡು ಹಚ್ಚುತ್ತಾರೆ. ಇವುಗಳ ಶಬ್ದ ಸುಮಾರು ಅರ್ಧ ಕಿಮೀ ದೂರದವರೆಗೆ ಕೇಳುತ್ತದೆ. ಇದರಿಂದ ರಸ್ತೆ ಪಕ್ಕದ ಶಾಲೆಗಳ ವಿದ್ಯಾಥರ್ಿಗಳ ಕಲಿಕೆಗೆ ತೊಂದರೆಯಾಗುತ್ತಿದೆ. ಆಸ್ಪತ್ರೆಗಳ ರೋಗಿಗಳೂ ತೊಂದರೆ ಅನುಭವಿಸುತ್ತಿದ್ದಾರೆ. ಅಪಾಯಕಾರಿಯಾದ ಶಬ್ದ ಮಾಲಿನ್ಯ ತಡೆಯಲು ಸಂಚಾರ ಸಂಹಿತೆ ಕಟ್ಟುನಿಟ್ಟಾಗಿ ಪಾಲನೆಯಾಗಲಿ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.