ಪಿಎಸ್‌ಐ ಹುದ್ದೆಗೆ ಸಿದ್ದು ಜಿಡ್ಡಿಮನಿ ಆಯ್ಕೆ

Siddu Jiddimani selected for PSI post

ಪಿಎಸ್‌ಐ ಹುದ್ದೆಗೆ ಸಿದ್ದು ಜಿಡ್ಡಿಮನಿ ಆಯ್ಕೆ  

ಮಹಾಲಿಂಗಪುರ 19: ಅಪ್ಪಟ ಗ್ರಾಮೀಣ ಪ್ರತಿಭೆ ಕಡು ಬಡತನದಲ್ಲಿ ಹುಟ್ಟಿ ಮೇರು ಸಾಧನೆ ಮಾಡಿದ ಬನಹಟ್ಟಿಯ ಸಿದ್ದು ಪರ​‍್ಪ ಜಿಡ್ಡಿಮನಿ. ಇತೀಚೆಗೆ ನಡೆದ ರಾಜ್ಯ ಪಿ ಎಸ್ ಐ ಪರೀಕ್ಷೆಯಲ್ಲಿ ರಾಜ್ಯಕ್ಕೆ 156 ನೇ ಶ್ರೇಣಿ (ಖಂಓಏ)ಪಡೆದು ನಗರಕ್ಕೆ ಕೀರ್ತಿ ತಂದಿದ್ದಾನೆ. ಆತನ ಸಾಧನೆಗೆ ಅಭಿನಂದನೆಗಳ ಮಹಾಪುರಾವೆ ಹರಿದು ಬಂದಿದೆ. 

ನಗರದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ಕನಕದಾಸ ಪತ್ತಿನ ಸಹಕಾರಿ ಸಂಘದಲ್ಲಿ ಅಭಿಮಾನದಿಂದ ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಮಹಾಲಿಂಗಪ್ಪ ಜಕ್ಕಣ್ಣವರ, ಉಪಾಧ್ಯಕ್ಷ ಶ್ರೀಶೈಲ ಕಳ್ಯಾಗೋಳ, ನಿರ್ದೇಶಕ ಗಣಪತಿ ಮಡ್ದೆನ್ನವರ ಸಿಬ್ಬಂದಿಗಳಾದ ಪ್ರಧಾನ ವ್ಯವಸ್ಥಾಪಕ ಪ್ರಭು ಹುಬ್ಬಳ್ಳಿ, ಮಹಾಲಿಂಗ ಹುಬ್ಬಳ್ಳಿ, ಚಂದ್ರು ಸಂಶಿ, ಉಪ ಸಿಬ್ಬಂದಿಗಳಾದ ಶ್ರೀಶೈಲ್ ಅವಟಿ, ಮಹಾಲಿಂಗ ಮಾಳಿ, ದಾನೇಶ ಹೂಗಾರ, ಆನಂದ ಪೂಜಾರಿ, ಪ್ರಶಾಂತ್ ಬಂಡಿ, ಸುನಿಲ್ ಮೇಟಿ, ಶಂಕರ ಮೇಟಿ ಮುಖಂಡರಾದ ಪರ​‍್ಪ ಜಿಡ್ಡಿಮನಿ, ಬೀರ​‍್ಪ ಹಳಮನಿ, ಮಹೇಶ ಇಟಕನವರ, ಲಕ್ಷ್ಮಣ ಕಿಶೋರ ಸೇರಿ ಹಲವರು ಇದ್ದರು.