ಏ. 23 ರಿಂದ ಸಿದ್ಧೇಶ್ವರ ದೇವರ ಜಾತ್ರೆ

Siddheshwar God Fair from April 23

ಸಂಬರಗಿ 19: ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಮದಭಾವಿ ಗ್ರಾಮದ ಸಿದ್ಧೇಶ್ವರ ದೇವರ ಜಾತ್ರೆಯು ಏ. 23 ಬುಧವಾರದಿಂದ ಏಪ್ರಿಲ್ 28 ಸೋಮವಾರದವರೆಗೆ ನಡೆಯುತ್ತಿದ್ದು, ಅದಕ್ಕಾಗಿ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.  

23ನೇ ತಾರೀಖು ಬುಧವಾರ ರಾತ್ರಿ 9 ಗಂಟೆಗೆ ಕರಿ ಕಟ್ಟುವುದು, ಸಿದ್ಧೇಶ್ವರ ದೇವರ ಪೂಜೆ ಮತ್ತು ಅಭಿಷೇಕ ನಡೆಯಲಿದೆ. 24 ರಂದು ಸಂಜೆ 6 ಗಂಟೆಗೆ ವಿಶೇಷ ಪೂಜೆ ನಡೆಯಲಿದೆ. 25  ರಂದು ಬೆಳಿಗ್ಗೆ ಪೂಜೆ ನಡೆಯಲಿದೆ. ಸಂಜೆ ಮಹಾಪ್ರಸಾದವನ್ನು ಅರ​‍್ಿಸಲಾಗುವುದು. ಡೊಳ್ಳಿನ ಪದಗೊಳು  ಕಾರ್ಯಕ್ರಮ ನಡೆಯಲಿದೆ. 26  ರಂದು ಬೆಳಗಿನ ಪೂಜೆ ನಡೆಯಲಿದೆ. ಮಹಾಪ್ರಸಾದ ನಡೆಯಲಿದೆ. 27ರಂದು ಕ್ಷೀರಾಭಿಷೇಕ ಹಾಗೂ ನೈವೇದ್ಯ ನಡೆಯಲಿದೆ. ಬೆಳಿಗ್ಗೆ, ಡೋಲ್ ವಾದನ ಸ್ಪರ್ಧೆ ನಡೆಯಲಿದೆ. ವೀರಭದ್ರೇಶ್ವರ ನಾಟ್ಯ ಸಂಘ ಸವದಿ  ಇವರಿಂದ ಶ್ರೀಕೃಷ್ಣ ಪಾರಿಜಾತ ಕಾರ್ಯಕ್ರಮ ನಡೆಯಲಿದೆ. 28 ರಂದು ಮಹಾಪೂಜೆ ನಡೆಯಲಿದೆ. ಸಿದ್ಧೇಶ್ವರ ದೇವರ ಪಾಲ್ಕಿ ಉತ್ಸವ ನಡೆಯಲಿದೆ. ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಯಲಿದೆ. ಬಳಿಕ ಮಹಾಪ್ರಸಾದ ನಡೆಯಲಿದೆ. ಸಂಜೆ ಕುಸ್ತಿ ನಡೆಯಲಿದೆ. ದೇವಸ್ಥಾನದ ಸಮಿತಿಯಲ್ಲಿ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕೆಂದು ಜಾತ್ರಾ ಸಮಿತಿ ವಿನಂತಿಸಿದೆ.  

ಜಾತ್ರೆಗೆ ಬರುವ ಭಕ್ತರಿಗಾಗಿ ಅಥಣಿ ಮೀರಜ್ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಯಾತ್ರಾ ಸಮಿತಿ ವಿನಂತಿಸಿದೆ.