ಧಾರವಾಡ30 : ಸಿದ್ಧಲಿಂಗ ದೇಸಾಯಿಯವರು ಕನ್ನಡ ನಾಡು ಕಂಡ ಶ್ರೇಷ್ಠ ಕವಿ, ಬರಹಗಾರ, ಹೋರಾಟಗಾರರಾಗಿದ್ದರು, ಹಿಡಿದ ಹಠವನ್ನು ಸಾಧಿಸಿ ತೋರಿಸುವ ಒಬ್ಬ ಧೀಮಂತ ವ್ಯಕ್ತಿ. ಇವರು ಪ್ರಗತಿಪರ ಕೃಷಿ ಮನೆತನದಲ್ಲಿ ಜನಿಸಿ ನಾಡಿಗೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದವರು. ಇವರು ಯಾವುದೇ ಅಪೇಕ್ಷೆ ಇಲ್ಲದೇ, ಪ್ರತಿಫಲವನ್ನು ಬಯಸದೇ ದೀಪದ ಬತ್ತಿಯ ಹಾಗೆ ತಮ್ಮನ್ನು ತಾವು ಸುಟ್ಟುಕೊಂಡು ಸಾಹಿತ್ಯ ಲೋಕಕ್ಕೆ ಬೆಳಕನ್ನು ನೀಡಿದವರು ಎಂದು ಧಾರವಾಡ ಶ್ರೀ ಮುರುಘಾಮಠದ ಉಪಾಧ್ಯಕ್ಷರಾದ ನಾಗರಾಜ ಪಟ್ಟಣಶೆಟ್ಟಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ಸಿದ್ಧಲಿಂಗ ದೇಸಾಯಿ ದತ್ತಿ ಅಂಗವಾಗಿ ಆಯೋಜಿಸಿದ್ದ ದಿ. ಶ್ರೀ ಸಿದ್ಧಲಿಂಗ ದೇಸಾಯಿಯವರು ರಚಿಸಿದ ಕವಿತೆಗಳ ಗೀತಗಾಯನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.
ಸಿದ್ಧಲಿಂಗ ದೇಸಾಯಿ ಅವರುಕರ್ನಾಟಕ ರಾಜ್ಯದ ದೊಡ್ಡ ದೊಡ್ಡ ವ್ಯಕ್ತಿಗಳ, ಮಂತ್ರಿ ಮಹೋದಯರ ಒಡನಾಟ ಹೊಂದಿದವರು. ಚಂದ್ರಕಾಂತ ಬೆಲ್ಲದ ಅವರು ಪಕ್ಷೇತರ ಅಭ್ಯಥರ್ಿಯಾಗಿ ಧಾರವಾಡ ಕ್ಷೇತ್ರಕ್ಕೆ ಚುನಾಯಿತರಾಗಲು ಸಿದ್ಧಲಿಂಗ ದೇಸಾಯಿಯವರು ಮನಸ್ಪೂರ್ವಕವಾಗಿ ದುಡಿದಂತ ವ್ಯಕ್ತಿ. ಗೆಳೆತನವೆಂದರೆ ಜೀವಕ್ಕೆ ಜೀವ ನೀಡುವ ವ್ಯಕ್ತಿಯಾಗಿದ್ದರು. ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗದಗದ ಮಾಜಿ ಶಾಸಕರಾದ ಶ್ರೀಶೈಲಪ್ಪ ಬಿದರೂರ ಅವರು ಮಾತನಾಡಿ, ಸಿದ್ಧಲಿಂಗ ದೇಸಾಯಿಯವರು ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಧೀಮಂತ ವ್ಯಕ್ತಿಯಾಗಿದ್ದರು. ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡವರು. ಅಪ್ಪಟ ಬಸವತತ್ವ ಅನುಯಾಯಿಯಾಗಿದ್ದ ಇವರು ಶರಣ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಂಥ ವ್ಯಕ್ತಿ. ಯಾವುದೇ ಒಂದು ಪುರೋಹಿತಶಾಹಿಯ ಮೂಢನಂಬಿಕೆಗಳನ್ನು ಸಾಕ್ಷಿ ಆಧಾರಗಳನ್ನಿಟ್ಟುಕೊಂಡು ವಿರೋಧ ಮಾಡುವಂಥ ವ್ಯಕ್ತಿಯಾಗಿದ್ದರು. ನೂರಾರು ಗ್ರಾಮೀಣ ಸೊಗಡಿನ ಹಾಸ್ಯಭರಿತ ಕವನಗಳನ್ನು ರಚಿಸಿ ಜನಮನದಲ್ಲಿ ಅಚ್ಚಳಿಯದ ಛಾಪು ಮೂಡಿಸಿದವರು. ನನ್ನ ಮತ್ತು ಸಿದ್ಧಲಿಂಗ ದೇಸಾಯಿಯವರ ಬಾಂಧವ್ಯ ಬೆಳೆದಿದ್ದೆ ಕನರ್ಾಟಕ ವಿದ್ಯಾವರ್ಧಕ ಸಂಘದಿಂದ. ದಿ. ಎಂ.ಪಿ. ಪ್ರಕಾಶ ಅವರಿಗೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಸಿದ್ಧಲಿಂಗ ದೇಸಾಯಿಯೆಂದರೆ ಪಂಚಪ್ರಾಣ. ಸಿದ್ಧರಾಮಯ್ಯನವರಿಗೆ ಬೇಸರವಾದರೆ ಸಿದ್ಧಲಿಂಗ ದೇಸಾಯಿಯವರನ್ನು ಕರೆಸಿಕೊಂಡು ಅವರ ಕವನ, ಹಾಡುಗಳನ್ನು ಕೇಳಿ ಖುಷಿ ಪಡುತ್ತಿದ್ದರು. ಇವರು ಹತ್ತಾರು ಪ್ರಸಿದ್ಧ ನಾಟಕಗಳನ್ನು ಬರೆದಿದ್ದಾರೆ ಎಂದು ಹೇಳಿದರು.
ಸಂಗೀತಗಾರರಾದ ಮೊಹ್ಮದಶಫಿ ನೂಲಕರ ಹಾಗೂ ತಂಡದವರು ಶ್ರೀ ಸಿದ್ಧಲಿಂಗ ದೇಸಾಯಿಯವರು ರಚಿಸಿದ ಕವಿತೆಗಳ ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟು ಸಭೀಕರ ಮನತಣಿಸಿದರು. ಇವರಿಗೆ ಸುರೇಶ ನಿಡಗುಂದಿ ತಬಲಾ ಹಾಗೂ ಮೊಹ್ಮದಶಬ್ಬೀರ ಉಣಕಲ್ ಡೋಲಕ್ದಲ್ಲಿ ಸಾಥ್ ನೀಡಿದರು.
ಕಾರ್ಯಕ್ರಮದಲ್ಲಿ ದಿ. ಶ್ರೀ ಸಿದ್ಧಲಿಂಗ ದೇಸಾಯಿಯವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು. ವೇದಿಕೆ ಮೇಲೆ ಕಾಯರ್ಾಧ್ಯಕ್ಷ ಶಿವಣ್ಣ ಬೆಲ್ಲದ ದತ್ತಿ ದಾನಿಗಳಾದ ದಶರಥರಾವ ಕೇಶವರಾವ ದೇಸಾಯಿ ಉಪಸ್ಥಿತರಿದ್ದರು.
ಜಾನಪದ ವಿದ್ವಾಂಸ ಬಸವಲಿಂಗಯ್ಯ ಹಿರೇಮಠ ಸ್ವಾಗತ ಗೀತೆ ಹಾಡಿದರು. ಸ್ವಾಗತ ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಜನೆವರಿ ತಿಂಗಳ ದತ್ತಿ ಕಾರ್ಯಕ್ರಮದ ಸಂಯೋಜಕರಾದ ಸತೀಶ ತುರಮರಿ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ(ಇಟಗಿ), ಕಾರ್ಯಕಾರಿ ಸಮಿತಿ ಸದಸ್ಯರಾದ ಶಾಂತೇಶ ಗಾಮನಗಟ್ಟಿ, ಶಿವಾನಂದ ಭಾವಿಕಟ್ಟಿ, ವಿಶ್ವೇಶ್ವರಿ ಬ. ಹಿರೇಮಠ, ಸಂಘದ ಗೌರವ ಉಪಾಧ್ಯಕ್ಷರಾದ ಬಿ.ಎಲ್. ಪಾಟೀಲ ಹಾಗೂ ವಿ. ಎಸ್. ಪಾಟೀಲ, ಜಿ.ಬಿ. ಹೊಂಬಳ, ರಾಮಚಂದ್ರ ಧೋಂಗಡೆ, ವೀರಣ್ಣ ಒಡ್ಡೀನ, ಅಭಿಷೇಕ ದೇಸಾಯಿ ಸೇರಿದಂತೆ ದೇಸಾಯಿ ಕುಟುಂಬದವರು ಹಾಗೂ ಅಭಿಮಾನಿಗಳು ಮತ್ತಿತರರು ಭಾಗವಹಿಸಿದ್ದರು.