ಹುಣಸೂರು, ನ, 24: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂಟಿ ಅಲ್ಲ. ಅವರೊಂದಿಗೆ ಕಾಂಗ್ರೆಸ್ ನ ಸಮಸ್ತ ನಾಯಕರು ಕಾರ್ಯಕರ್ತರು ಇದ್ದಾರೆ ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ.
ಪಟ್ಟಣದಲ್ಲಿಂದು ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ನಾಯಕರು ಎಲ್ಲಾ 15 ಕ್ಷೇತ್ರಕ್ಕೆ ಹೋಗಬೇಕಿದೆ. ಹೀಗಾಗಿ ಎಲ್ಲಾ ಕಡೆ ಕಾಂಗ್ರೆಸ್ ಮುಖಂಡರು ತೆರಳುತ್ತಿದ್ದಾರೆ. ಇದೇ ರೀತಿ ಸಿದ್ದರಾಮಯ್ಯ ಅವರು ಕೂಡ ಒಂದೊಂದು ಕ್ಷೇತ್ರಕ್ಕೆ ಹೋಗಬೇಕಿದೆ. ಆದ್ದರಿಂದ ಎಲ್ಲಾ ಮುಖಂಡರು ಬೇರೆ ಬೇರೆ ಕಡೆ ಪ್ರಚಾರಕ್ಕೆ ತೆರಳುತ್ತಿರುವುದರಿಂದ ಒಟ್ಟಿಗೆ ಕಾಣಿಸಿಕೊಂಡಿಲ್ಲ.
ಇದರಲ್ಲಿ ಒಂಟಿ ಅಥವಾ ವಲಸಿಗ, ಮೂಲ ಎಂಬ ಮಾತೇ ಇಲ್ಲ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ಬಿಜೆಪಿ ಅವರಿಗೆ ಬೇರೆ ಯಾವುದೇ ವಿಷಯ ಇಲ್ಲದೆ ಏನೇನೋ ಮಾತಾಡುತ್ತಾರೆ. ಎಲ್ಲರಂತೆ ನಾವು ಚುನಾವಣೆಯ ತಂತ್ರಗಾರಿಕೆಯಲ್ಲಿ ತೊಡಗಿದ್ದೇವೆ. ನಮಗೆ ಬಿಜೆಪಿ ಅವರ ಮಾತಿಗೆ ಉತ್ತರ ಕೊಡುವ ಅಗತ್ಯವಿಲ್ಲ ಎಂದರು.
ಈ ಬಾರಿ ಯಾವುದೇ ಕಾರಣಕ್ಕೂ ಬಿಜೆಪಿ ಅಭ್ಯಥರ್ಿ ಹೆಚ್. ವಿಶ್ವನಾಥ್ ಗೆಲುವುದಿಲ್ಲ ಎಂದು ಅವರು ಭವಿಷ್ಯ ನುಡಿದರು.
ವಿಶ್ವನಾಥ್ ಅವರು ಸಿದ್ದರಾಮಯ್ಯ ಮಂಜುನಾಥ್ ಅವರ ಸಮಯದಲ್ಲಿಯಾದ ಅಭಿವೃದ್ಧಿಯನ್ನು
ತಮ್ಮದೆಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ವಿಶ್ವನಾಥ್ ತಮ್ಮ ಅವಧಿಯಲ್ಲಿ ಒಂದು ಒಂದು ಕೆಲಸವನ್ನು ಮಾಡಿಲ್ಲ ಎಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ ಎಂದು ಟೀಕಿಸಿದರು.