ಪರಿಹಾರ ಕಾರ್ಯದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಸಲ್ಲ: ಸಿದ್ಧರಾಮಯ್ಯ

ಬಾಗಲಕೋಟೆ: ಜಿಲ್ಲೆಗೆ ಅಪ್ಪಳಿಸಿದ ಮಲಪ್ರಭಾ ಹಾಗೂ ಘಟ್ಟಪ್ರಭಾ ನದಿಗಳ ಪ್ರವಾಹದಿಂದ ಬಾದಾಮಿ ತಾಲೂಕಿನ 43 ಗ್ರಾಮಗಳು ಪ್ರವಾಹಕ್ಕೆ ಒಳಗಾಗಿದ್ದು, ಜನ ಜಾನುವಾರ ರಕ್ಷಣೆಗೆ ಹಾಗೂ ಪ್ರವಾಹ ಪೀಡಿತರ ಸಮಸ್ಯೆಗಳಿಗೆ ಕೂಡಲೇ ಅಧಿಕಾರಿಗಳು ಸ್ಪಂದಿಸಬೇಕು ಎಂದು ಬಾದಾಮಿ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು. 

          ಜಿಲ್ಲಾ ಪಂಚಾಯತ ಭವನದಲ್ಲಿ ಅಧಿಕಾರಿಗಳ ಸಭೆ ಕರೆದು ಪ್ರವಾಹದ ಹಾನಿ ಹಾಗೂ ಸಾಧಕ ಬಾಧಕಗಳಿಗೆ ಸಕರ್ಾರದಿಂದ ಕೊಡಲಾಗಿರುವ ಪ್ರತಿಯೊಂದು ಸಹಾಯ ನೇರವಾಗಿ ಸಂತ್ರಸ್ತರಿಗೆ ತಲುಪಬೇಕು.

    ಬಾದಾಮಿ ತಾಲೂಕಿನಲ್ಲಿ ಮಲಪ್ರಭಾ ನದಿ ಅಪಾಯಮಟ್ಟ ಮೀರಿ ಹರಿಯಲಿದೆ ಎಂಬ ಸೂಚನೆ ಮೇರೆಗೆ ನಾನು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಮೊದಲೇ ವಿಷಯದ ಗಂಭೀರತೆಯನ್ನು ಅರಿತಿದ್ದರಿಂದ ಯಾವುದೇ ಜನ ಜಾನುವಾರು ಪ್ರಾಣ ಹಾನಿಯಾಗಿಲ್ಲ ಎಂದರು.

         ಅಪಾಯದ ಮುನ್ಸೂಚನೆ ಅರಿತು ಅಪಾಯಕ್ಕೆ ಸಿಲುಕುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ತಾಲೂಕಿನ ಶಿರಬಡಿಗಿ ಮತ್ತು ಐತಿಹಾಸಿಕ ಪಟ್ಟದಕಲ್ಲು ಗ್ರಾಮಗಳು ಅತೀ ಹೆಚ್ಚು ಪ್ರವಾಹಕ್ಕೆ ಒಳಗಾಗಿದ್ದರಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ ತತ್ಕ್ಷಣ ಸ್ಪಂದಿಸಿದ್ದರಿಂದ ನೀರಿನಲ್ಲಿ ಸಿಲುಕಿದ ಜನರನ್ನು ರಕ್ಷಿಸಲಾಯಿತು ಎಂದರು.

            ಈ ಹಿಂದೆ 2009ರಲ್ಲಿ ಪ್ರವಾಹಕ್ಕೆ ಒಳಗಾದಾಗ ಅನೇಕ ಹಳ್ಳಿಗಳು ಹಾಗೂ ಜಮೀನುಗಳು ಮುಳಗಡೆ ಹೊಂದಿದ್ದವು. ಅದನ್ನು ಗಮನದಲ್ಲಿಟ್ಟುಕೊಂಡು ಸಕರ್ಾರ ಇಂತಹ ಪ್ರವಾಹಕ್ಕೆ ಒಳಗಾಗಿ ಮೇಲಿಂದ ಮೇಲೆ ಹಾನಿಗೊಳಗಾದ ಸಂತ್ರಸ್ತರನ್ನು ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು ಎಂದರು. 

           ಪ್ರವಾಹ ಇಳಿಮುಖವಾಗಿದ್ದರಿಂದ ಸಂತ್ರಸ್ತರು ತಮ್ಮ ಮನೆಗಳಿಗೆ ಮರಳುತಿದ್ದು, ಸದ್ಯ ಮನೆಗಳು ವಾಸಿಸಲು ಯೋಗ್ಯವಾಗಿರದಂತಹ ಸ್ಥಿತಿಯಲ್ಲಿರುವುದರಿಂದ ಸಣ್ಣ-ಪುಟ್ಟ ರೀಪೇರಿ ಕಾರ್ಯಕ್ಕೆ ಕೂಡಲೇ ಹಣ ಬಿಡುಗಡೆಗೊಳಿಸಬೇಕು. ಸ್ಥಗಿತಗೊಂಡ ವಿದ್ಯುತ್ ಸಂಪರ್ಕ, ಕುಡಿಯುವ ನೀರು ಪುನಃ ಪೂರೈಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಹೆಸ್ಕಾಂದವರು ಜಮೀನಿನಲ್ಲಿ ಸುಟ್ಟುಹೋಗಿರುವ ಟ್ರಾಸ್ಪರ್ಮರ್ ಅಳವಡಿಸಿ ಕೃಷಿಗೆ ಅನುಕೂಲ ಮಾಡಕೊಡಬೇಕು.

 ಅಲ್ಲದೇ ಪ್ರವಾಹಕ್ಕೆ ಒಳಗಾದ ಸ್ಥಳ, ಕೆಸರು ಹಾಗೂ ಕಲುಷಿತ ಪ್ರದೇಶವಾಗಿದ್ದರಿಂದ ದುವರ್ಾಸನೆ ಹಾಗೂ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿದ್ದು, ಆರೋಗ್ಯ ಇಲಾಖೆ ಎಲ್ಲ ಚಿಕಿತ್ಸೆ ನೀಡುವ ಕಾರ್ಯ ಮಾಡಬೇಕು ಎಂದರು.

           ಪ್ರವಾಹಕ್ಕೆ ಸಿಲುಕಿ ನದಿ ತೀರದ ರೈತರ ಪಂಪಸೇಟ್ಗಳು ಹರಿದು ಹೋಗಿದ್ದು, ಬೇರೆಡೆ ದಡಕ್ಕೆ ಸೇರಿದ್ದು ಕಳ್ಳಕಾಕರು ಅವುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಗಮನಕ್ಕೆ ಬಂದಿರುವುದರಿಂದ ಪೊಲೀಸ್ ಇಲಾಖೆಯವರು ಜಾಗೃತವಾಗಿ ಅಂತಹ ಕಳ್ಳರನ್ನು ಪತ್ತೆ ಹಚ್ಚಿ ರೈತರು ಕಳೆದುಕೊಂಡ ಪಂಪ್ಸೆಟ್ಗಳನ್ನು ಮರಳಿ ಅವರಿಗೆ ತಲುಪ್ಪುವಂತೆ ಮಾಡಬೇಕು.

  ಕಳೆದುಹೋದ ಹಾಗೂ ಪತ್ತೆಯಾಗದ ಪಂಪ್ಸೆಟ್ಗಳ ಪರಿಹಾರ ನೀಡುವ ಕಾರ್ಯವಾಗಬೇಕು ಎಂದರು. ನೆರೆಹಾವಳಿ ಹಾಗೂ ಪ್ರವಾಹಕ್ಕೆ ಒಳಗಾದ ಜನ ಭಯಪಡುವ ಅವಶ್ಯಕತೆ ಇಲ್ಲ. ಮತಕ್ಷೇತ್ರದ ಪ್ರವಾಹಕ್ಕೊಳಗಾದ ಜನರ ಜೊತೆ ನಾನು ಸದಾ ಇರುತ್ತೇನೆ ಎಂದು ಹೇಳಿದರು. 

       ಸಭೆಯಲ್ಲಿ ಜಿಪಂ ಅಧ್ಯಕ್ಷೆ ಭಾಯಕ್ಕ ಮೇಟಿ, ವಿಧಾನ ಪರಿಷತ್ ಸದಸ್ಯರಾದ ಎಸ್.ಆರ್.ಪಾಟೀಲ, ಆರ್.ಬಿ.ತಿಮ್ಮಾಪುರ, ಜಮಖಂಡಿ ಶಾಸಕ ಆನಂದ ನ್ಯಾಮಗೌಡ, ಉಪಾಧ್ಯಕ್ಷ ಮುತ್ತಪ್ಪ ಕೊಮಾರ, ಜಿಲ್ಲಾಧಿಕಾರಿ ಆರ್.ರಾಮಚಂದ್ರನ್, ಜಿಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಗಂಗೂಬಾಯಿ ಮಾನಕರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್, ಅಪರ್ ಜಿಲ್ಲಾಧಿಕಾರಿ ದುಗರ್ೇಶ ರುದ್ರಾಕ್ಷಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.