ಬೈಲಹೊಂಗಲ: ಸಿದ್ಧರಾಮ ಶಿಯೋಗಿಗಳ ಪುಣ್ಯಾರಾಧನೆ ಕಾರ್ಯಕ್ರಮ

ಲೋಕದರ್ಶನ ವರದಿ

ಬೈಲಹೊಂಗಲ 25:  ಸಮೀಪದ ಇಂಚಲ ಗ್ರಾಮದ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದಲ್ಲಿ ವಾಕ್ ಸಿದ್ಧಿಪುರುಷ ಸಿದ್ಧರಾಮ ಶಿಯೋಗಿಗಳ 44ನೇ ಪುಣ್ಯಾರಾಧನೆ ಕಾರ್ಯಕ್ರಮ ಶನಿವಾರ ಜರುಗಿತು.

ಇದೇ ವೇಳೆ ಮಠದ ಪೀಠಾಧಿಪತಿಗಳಾದ ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳ ಪಾಲಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಇದೇ ವೇಳೆ ನೂರಾರು ಭಕ್ತರು, ಶಾಲಾ ವಿದ್ಯಾಥರ್ಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.