ಹಾವೇರಿ14: ರಾಜ್ಯದಲ್ಲಿ ಅವಧಿ ಮೂಗಿದ ಜಿಲ್ಲಾ ಬಿಜೆಪಿ ಸ್ಥಾನಕ್ಕೆ 18 ಜಿಲ್ಲೆಯಲ್ಲಿ ನೂತನ ಜಿಲ್ಲಾಧ್ಯಕ್ಷರನ್ನು ಮುಂದಿನ ಅವಧಿಯವರೆಗೆ ನೇಮಕ ಮಾಡಿ ರಾಜ್ಯ ಬಿಜೆಪಿ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ.
ರಾಜ್ಯದ ಬಿಜೆಪಿ ಕಾರ್ಯಲಯದಲ್ಲಿ ಹಾವೇರಿ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಸಿದ್ದರಾಜ ಕಲಕೋಟಿಯವರಿಗೆ ಸಚಿವ ಸಿ.ಟಿ ರವಿ, ಜಿಲ್ಲೆಯ ಮುಖಂಡರಾದ ಬೋಜರಾಜ ಕರೂದಿ, ಮಾಜಿ ಸಂಸದ ಮಂಜನಾಥ ಕುನ್ನೂರ ಬಿಜೆಪಿ ಬಾವುಟ ನೀಡಿ ಸನ್ಮಾನಿಸಿದರು.
ಈ ಹಿಂದೆ ಹಾವೇರಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಶಿವರಾಜ ಸಜ್ಜನರ ತೆರವುಗೊಳಿಸಿ ಪಕ್ಷದಲ್ಲಿ ಕಳೆದ 25 ವರ್ಷದಿಂದ ಸಕ್ರೀಯವಾಗಿ ಗುತರ್ಿಸಿಕೊಂಡಿದ್ದ ಸಿದ್ಧರಾಜ ಕಲಕೋಟಿಯವರನ್ನು ಹಾವೇರಿ ಜಿಲ್ಲಾ ಬಿಜೆಪಿ ಅಧ್ಯಕ್ಷರನ್ನಾಗಿ ಆಯ್ಕೆ ಜಿಲ್ಲಾ ಬಿಜೆಪಿ ಪಕ್ಷದ ಕಾರ್ಯಕರ್ತ ಅಭಿಮಾನಿಗಳು ನೂತನವಾಗಿ ಅಧಿಕಾರ ಸ್ವಿಕರಿಸಿದ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿಯವರಿಗೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ರವಿವಾರದಂದು ಬಿಜೆಪಿ ಬಾವುಟ ನೀಡುವ ಮೂಲಕ ಅವರನ್ನು ಗೌರವ ಪೂರ್ವಕ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷರಾದ ಶಿವರಾಜ ಸಜ್ಜನರ, ಡಾ. ಸಂತೋಷ ಆಲದಕಟ್ಟಿ, ಪ್ರಭು ಹಿಟ್ನಳ್ಳಿ, ವಿಜಯಕುಮಾರ ಚಿನ್ನಿಕಟ್ಟಿ, ಬಸವರಾಜ ಮಾಸೂರ, ಸುರೇಶ ಹೊಸಮನಿ, ಷಣ್ಮುಖ ಮಳ್ಳಿಮಠ, ವಿವೇಕಾನಂದ ಇಂಗಳಗಿ, ಪ್ರವೀಣ ಸವಣೂರ, ಸತೀಶ ತಿಮ್ಮಣ್ಣನವರ, ನಾಗರಾಜ ಹುಳ್ಳಿಕುಪ್ಪಿ, ರಮೇಶ ಬಳ್ಳಾರಿ, ಎಸ್.ಆರ್. ಹೆಗಡೆ, ಕೋಟ್ರೇಶ ಮಂಜಲಾಪೂರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.