ಲೋಕದರ್ಶನ ವರದಿ
ಸಿದ್ದಾಪುರ 23: ಸಿದ್ದಾಪುರ ಪಟ್ಟಣಕ್ಕೆ ಅರೆಂದೂರ ಹೊಳೆಯಿಂದ ನೀರು ಸರಬರಾಜು ಮಾಡುತ್ತಿರುವುದನ್ನು ವಿರೋದಿಸಿ ತಾಲೂಕಿನ ಅರೆಂದೂರಿ ಜನತೆ ಬೆಳಿಗ್ಗೆ 10.00 ಗಂಟೆಯಿಂದ ಮತದಾನದಿಂದ ದೂರ ಊಳಿದಿದ್ದರು. ಇದರಿಂದ ಆ ಭಾಗದಲ್ಲಿ ರೈತರು ಬೆಳೆದ ಭತ್ತ, ಕಬ್ಬು ಹಾಗೂ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಅರೆಂದೂರಿನ 357 ಗಂಡು, 309 ಹೆಣ್ಣು ಸೇರಿ ಒಟ್ಟು 666 ಮತದಾರರು ಮತದಾನ ಮಾಡಲಿಲ್ಲ. ಸಂಬಂದಿಸಿದ ಅಧಿಕಾರಿಗಳು ಸ್ಥಳಕ್ಕೆ ಬಂದು ನೀರಿನ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರೆ ಮಾತ್ರ ಮತದಾನ ಮಾಡುತ್ತೇವೆ ಎಂದು ಮತದಾರರು ಹೇಳಿದ್ದರು. ಸುಮಾರು 2 ಗಂಟೆಯ ವರೆಗೆ ಮತದಾನ ಕೇಂದ್ರತ್ತ ಮುಖ ಮಾಡಲಿಲ್ಲಾ. ಕೇವಲ 12 ಮತಗಳು ಮಾತ್ರ ಚಲಾವಣೆಯಾಗಿದ್ದವು. ನಂತರ ತಹಶೀಲ್ದಾರ ಗೀತಾ ಸಿ.ಜೆ ರವರು ಸ್ಥಳಕ್ಕೆ ಆಗಮಿಸಿ ವಾರಕ್ಕೆ 2 ದಿನ ಭತ್ತಕ್ಕೆ ನೀರು ಸರಬರಾಜು ಮಾಡುವ ಭರವಸೆ ನೀಡಿದ ನಂತರ ಮಧ್ಯಾಹ್ನ 2.30 ಗಂಟೆಯಿಂದ ಮತದಾರರು ಮತದಾನ ಮಾಡಲು ಪ್ರಾರಂಭಿಸಿರುತ್ತಾರೆ