ಭಾವೈಕ್ಯದ ಪುಷ್ಪಧಾರೆ ತೋಂಟದ ಸಿದ್ದಲಿಂಗ ಶ್ರೀ: ಡಾ,ಮಾದುಲಿಂಗ ಮಹಾರಾಜರು
ಚಿಕ್ಕಪಡಸಲಗಿ 22: ಮೇರು ಸದೃಶ ವ್ಯಕ್ತಿತ್ವದ ವೈಚಾರಿಕತೆ ಚಿಂತಕ ತೋಂಟದ ಡಾ.ಸಿದ್ದಲಿಂಗ ಮಹಾಸ್ವಾಮಿಗಳವರ ಮನಭಾವ ಈ ಯುಗದೊಳು ಭಾವೈಕ್ಯತೆ ಪುಷ್ಪಧಾರೆಯಲ್ಲಿ ಮಿಂದಿದೆ. ಸಾಮರಸ್ಯವೆಂಬ ಹೂ ತೋಟದ ಭಾವೈಕ್ಯತಾ ಪದರಿನ ಮೊನಚಿನಲ್ಲಿ ಸುಗಂಧ ಭರಿತ ಪರಿಮಳ ಬೀರಿವೆ.ಅವು ಎಂದೂ ಮರೆಯಲಾಗದ ಸವಿ ನೆನಪುಗಳ ಮಧುರ ಬಾಂಧವ್ಯ ತೋರಿವೆ ಎಂದು ಜಕನೂರ ಮಾದಣ್ಣ ಮದಗೊಂಡೇಶ್ವರ ಸಿದ್ಧಾಶ್ರಮದ ಡಾ, ಮಾದುಲಿಂಗ ಮಹಾರಾಜರು ಬಣ್ಣಿಸಿದರು. ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಅಂಗ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಲಿಂಗೈಕ್ಯ ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳವರ 76 ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಭಾವೈಕ್ಯತಾ ದಿನಾಚರಣೆ ಹಾಗೂ ಐದು,ಏಳು ಮತ್ತು ಹತ್ತನೇ ತರಗತಿ ಮಕ್ಕಳ ಬೀಳ್ಕೊಡುವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಸಿದ್ದಲಿಂಗ ಶ್ರೀಗಳು ನುಡಿ ಸಂಸ್ಕೃತಿಯ ಪರಿಪಾಲಕರಾಗಿದ್ದಾರೆ.ಅವರ ವಾಕ್ ಭಾಷಾ ಪ್ರಾವೀಣ್ಯತೆ ಅಪ್ರತಿಮ. ಪೂಜ್ಯರ ಚರಿತ್ರೆ ಪರಮ ಪವಿತ್ರ. ಮಾತೃ ಹೃದಯ ಭಾವಾಂತರಂಗ ನಿಷ್ಕಲ್ಮಶ. ಕರುಣರಸದ ಉತ್ತುಂಗದ ಮೌಲ್ಯ ಪ್ರತಿಪಾದಿಸಿವೆ. ಜಾತಿ,ಮತ,ಪಂಥದ ಗರಿಯೇ ಇಲ್ಲ ಎಂಬುದಕ್ಕೆ ಜನಸಾಮಾನ್ಯರ ಸ್ವಾಮೀಜಿ ತೋಂಟದ ಸಿದ್ದಲಿಂಗ ಶ್ರೀಗಳ ತತ್ವಾದರ್ಶಗಳು ಸಾಕ್ಷಿಯಾಗಿವೆ.ಪೂಜ್ಯರ ಬದುಕೇ ಭಾವೈಕ್ಯತಾ ಸಂಕೇತದ ಪ್ರತೀಕವಾಗಿದೆ ಎಂದರು. ಬಸವತತ್ವದ ಸಂಸ್ಕೃತಿಯಲ್ಲಿ ಬದುಕಿನ ಪಥ ಸಾಗಿಸಿ ಮರೆಯಾಗಿರುವ ಸಿದ್ದಲಿಂಗ ಶ್ರೀಗಳ ಸಮಾಜಮುಖಿ ಸೇವಾಭಾವದ ಚಿಂತನಾ ವ್ಯಕ್ತಿತ್ವ ವರ್ಣನಾತೀತವಾಗಿವೆ.ಕನ್ನಡ ಸ್ವಾಮೀತ್ವದ ಲೋಕದಲ್ಲಿ ಗಟ್ಟಿಯಾಗಿ ಮಿನುಗಿದೆ.ಬಾಂಧವ್ಯ, ಬೆಸುಗೆಗೆ ಪ್ರೇರೇಪಿಸಿವೆ ಎಂದರು. ಇಂದಿನ ಮಕ್ಕಳಿಗೆ ಶಿಕ್ಷಣ, ಸಂಸ್ಕೃತಿ,ಸಂಸ್ಕಾರ ಬಲು ಮುಖ್ಯವಾಗಿವೆ. ಇವು ಇಲ್ಲದಿದ್ದರೆ ಜೀವನ ಶೂನ್ಯ. ಈ ಶಾಲೆ ಎದುರಿನ ರಸ್ತೆ ಮೂಲಕ ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಅವರೊಮ್ಮೆ ಹೊರಡುತ್ತಿದ್ದಾಗ ಶಾಲಾ ಮಕ್ಕಳ ಶಿಸ್ತು ಬದ್ದತೆ ಕಂಡು ಬೆರಗಾದರು. ಈ ಶಾಲೆಗೆ, ಶಿಸ್ತಿನ ಸಿಪಾಯಿಗಳಿಗೆ ಮಾಜಿ ಸಿಎಂ ಗೌರವಭಾವ ವ್ಯಕ್ತಪಡಿಸಿದರು ಎಂದು ಡಾ.ಮಾದುಲಿಂಗ ಮಹಾರಾಜರು ಅಂದಿನ ಹಳೆ ನೆನಪುಗಳನ್ನು ನೆನಪಿಸಿಕೊಂಡರು. ಮನುಷ್ಯ ತಾಯಿ,ಗುರು ಹಾಗೂ ಹೊತ್ತು ಮೇರೆಸಿರುವ ಭೂಮಿಯ ಋಣ ತೀರಿಸಲಾರ. ಈ ಮೂರು ಋಣಭಾರಗಳು ಎಲ್ಲಕ್ಕಿಂತ ಮಿಗಿಲಾಗಿವೆ. ಅದಕ್ಕಾಗಿ ಇವುಗಳ ಬಗ್ಗೆ ಮನಸ್ಸಿನಲ್ಲಿ ಸದಾ ಗೌರವಭಾವ ಇರಿಸಿಕೊಳ್ಳಬೇಕು. ಶಾಲೆ ಜೀವಂತ ಮಂದಿರ.ಕಾರಣ ಶಿಕ್ಷಕರು ವೃತ್ತಿ ಜೀವನದಲ್ಲಿ ಪ್ರೀತಿ, ವಾತ್ಸಲ್ಯ ಭಾವನೆ ಹೊಂದಬೇಕು. ಪುಸ್ತಕಗಳ ಜೊತೆಗೆ ಮಕ್ಕಳು ನೆಂಟು ಬೆಳೆಸಿಕೊಂಡರೆ ಸಮಾಜದಲ್ಲಿ ತೆಲೆಯತ್ತಿ ಸಾಗಬಹುದು. ಮೊಬೈಲ್ ಒಡನಾಟದಲ್ಲಿ ಬಿದ್ದರೆ ತಲೆ ಎತ್ತದಂತೆ ಜೀವನ ಕುಸಿತವಾಗುತ್ತದೆ. ಆ ದಿಸೆಯಲ್ಲಿ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ಸನ್ಮಾರ್ಗ ಕಂಡುಕೊಳ್ಳಬೇಕು ಎಂದರು. ಮುಖ್ಯ ಅತಿಥಿಗಳಾಗಿ ಜಮಖಂಡಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ಮಾತನಾಡಿ, ತೋಂಟದ ಸಿದ್ದಲಿಂಗ ಶ್ರೀಗಳು ಇಲ್ಲಿ ಮಕ್ಕಳು ಬದುಕಿನ ಮೌಲ್ಯ ಕಟ್ಟಿಕೊಳ್ಳಲು ಸಂಸ್ಥೆ ತೆರೆದಿದ್ದಾರೆ. ಮಕ್ಕಳ ಶಿಕ್ಷಣದ ಅಂತಃಕರಣಕ್ಕೆ ಮುನ್ನುಡಿ ಬರೆದಿದ್ದಾರೆ. ಶ್ರೀಗಳು ಶಿಕ್ಷಣ ಸಂಸ್ಕೃತಿ ಮೇಲೆ ತೋರಿದ ಕಳಕಳಿ ಇಲ್ಲಿನ ಮಕ್ಕಳು ಸಾರ್ಥಕ ಪಡಿಸಿಕೊಂಡು ಜೀವನದ ದಾರಿಯಲ್ಲಿ ಯಶಸ್ಸು ಕಾಣಬೇಕು. ಜೀವನವೆಂಬುದು ನಿತ್ಯ ಪಥದ ಹೋಮ್ ವರ್ಕ್ ಇದ್ದಂತೆ. ವಿದ್ಯಾರ್ಥಿಗಳು ಶಿಸ್ತು ರೂಢಿಸಿಕೊಳ್ಳಬೇಕು. ರಾತ್ರಿ ಬೇಗನೆ ಮಲಗಿ ಬೆಳಗಿನ ಜಾವ ಬೇಗನೆ ಎದ್ದೇಳಬೇಕು. ನಿಯಮಗಳ ಆಳವಡಿಕೆಗಳಿಲ್ಲದಿದ್ದರೆ ಏನು ಕಲಿಯಲಾಗದು. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕಾಲ ಸನ್ನಿಹಿತವಾಗಿದೆ. ವ್ಯರ್ಥವಾಗಿ ಕಾಲಹರಣ ಮಾಡದೇ ಸರಿಯಾದ ಅಭ್ಯಾಸಗೊಂದಿಗೆ ಉತ್ತಮ ಫಲಿತಾಂಶ ಪಡೆದುಕೊಳ್ಳಬೇಕು. ಸಾಧನೆವೆಂಬ ಜ್ಞಾನ ಹಿತಕ್ಕೆ ಸ್ವಯಂ ಪ್ರೇರಿತ ಶಕ್ತಿ ಮಹತ್ವದ್ದಾಗಿದೆ.ಅದು ಕಾರ್ಯ ರೂಪಕ್ಕೆ ತರುವ ಅನುಷ್ಠಾನದ ಇಚ್ಚಾಶಕ್ತಿ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಬಿಇಒ ಅಶೋಕ ಬಸಣ್ಣವರ ಹಾಗೂ ತಾಲೂಕಿನ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಸಂಗಮೇಶ ಬಿಜಾಪೂರ ಅವರನ್ನು ಸಂಸ್ಥೆ, ಶಾಲೆ ಪರವಾಗಿ ಶಾಲುಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು. ವಿಶ್ರಾಂತ ಶಿಕ್ಷಕ ಬಸವರಾಜ ಅನಂತಪೂರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಗ್ರಾಮ ಸಹಾಯಕ ಬುಡೆಸಾಬ ಗೆಣ್ಣೂರ, ಚಿಕ್ಕಪಡಸಲಗಿ ಎಂ.ಎಂ.ಐಟಿಐ ಕಾಲೇಜಿನ ಪ್ರಾಂಶುಪಾಲ ರಾಯಪ್ಪ ಸಣಮನಿ, ನಾಗನೂರ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಭೀಮು ಬಡಿಗೇರ, ಆಲಗೂರ ತೋಟದ ಸರಕಾರಿ ಎಚ್.ಪಿ.ಎಸ್. ಶಾಲೆ ಮುಖ್ಯ ಶಿಕ್ಷಕ ಬಾಹುಬಲಿ ಬೀಳಗಿ, ಕವಟಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಅನಿತಾ ಗೋರಕಲ್, ಆಲಗೂರ ಶಾಂತಿನಾಥ ಎಚ್.ಪಿ.ಎಸ್.ಶಾಲೆ ಮುಖ್ಯ ಶಿಕ್ಷಕಿ ಚೌಗಲಾ, ಚಿಕ್ಕಪಡಸಲಗಿ ಶಿವಶರಣ ಹರಳಯ್ಯ ಸ್ಮಾರಕ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಸ್.ಎಸ್.ಅರಬಳ್ಳಿ, ಜಿ.ಎಸ್.ಬಾಳೆಕುಂದ್ರಿ ಆಂಗ್ಲ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಮಾಲಾ ಕಲ್ಯಾಣಿ ಮತ್ತಿತರರು ವೇದಿಕೆಯಲ್ಲಿದ್ದರು. ಅಂಗ ಸಂಸ್ಥೆಗಳ ಗುರು ವೃಂದಕ್ಕೆ ಹಾಗೂ ಅತಿಥಿ ಗಣ್ಯರಿಗೆ ಶಾಲು ಹೊದಿಸಿ ಸನ್ಮಾನಿಸಿ ಬಿನ್ನವತ್ತಳೆ ನೀಡಿ ಗೌರವಿಸಿದ್ದು ವಿಶೇಷ. ಜೆಟಿವಿಪಿ ಶಿಕ್ಷಣ ಅಂಗ ಸಂಸ್ಥೆಗಳ ಐದು, ಏಳು ಹಾಗೂ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಬೀಳ್ಕೊಡಲಾಯಿತು. ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯ ಪ್ಪಭಾರಿ ಮುಖ್ಯ ಶಿಕ್ಷಕ ಬಸವರಾಜ ಜಾಲೋಜಿ ಅವರ ಉಸ್ತುವಾರಿಯಲ್ಲಿ ನಡೆದ ಸಮಾರಂಭದಲ್ಲಿ ಹಣಮಂತ ಗದಿಗೆಪ್ಪಗೋಳ, ಸುರೇಶ ಸಂತಿ, ಲೋಹಿತ ಮಿಜಿ9, ಗುಲಾಬಚಂದ ಜಾಧವ, ಶ್ರೀಶೈಲ ಹುಣಶಿಕಟ್ಟಿ, ಕುಮಾರ ವಾಣಿ, ಸದಾಶಿವ ಹೊಸಮನಿ, ಸದಾಶಿವ ಬೋದ್ಲಿ, ಮಲ್ಲಯ್ಯ ಮಠಪತಿ, ಸಹನಾ ಹತ್ತಳ್ಳಿ (ಕಲ್ಯಾಣಿ), ಶೃತಿ ಲಿಗಾಡೆ, ಶೋಭಾ ಹಿರೇಮಠ, ಸುನಂದಾ ಬಬಲಾದಿಮಠ, ಭಾಗ್ಯಶ್ರೀ ವಿಭೂತಿಮಠ, ಚಂಪಾ ದಯಗೊಂಡ,ರೇಶ್ಮಾ ಕನಾಳ, ರೇಣುಕಾ ಲಾಳಸಂಗಿ, ಅಶ್ವಿನಿ ಕಲ್ಯಾಣಿ, ಪೂಜಾ ಜಾಡರ, ಶಾಂತಾ ರೋಣಿಹಾಳ, ಲಕ್ಕವ್ವ ಸನದಿ, ಮಾಲಾ ಯಣಗಾಯಿ, ಶಾಯಿನ್ ಗೆಣ್ಣೂರ, ಕಸ್ತೂರಿ ಪಟ್ಚಣಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.