ಬೆಳಗಾವಿ, 22: ನಡೆದಾಡುವ ದೇವರ ಅಗಲಿಕೆ ನಮ್ಮ್ ಕನರ್ಾಟಕಕ್ಕೆ ತುಂಬುಲಾರದ ನಷ್ಟ, ಶ್ರೀ ಸಿದ್ದಗಂಗಾ ಶ್ರೀಗಳು ತ್ರಿವಿಧ ದಾಸೋಹಿಗಳಾಗಿದ್ದು ನಮ್ಮ ನಾಡಿನ ಎಷ್ಟೋ ಬಡಜ್ಞಾನಾಕಾಂಶಿಗಳಿಗೆ ಸ್ಪೂತರ್ಿಯ ಸೆಲೆಯಾಗಿದ್ದರು ಎಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿದರ್ೇಶಕ ಡಾ. ಎಸ್ ಸಿ ಧಾರವಾಡ ಮಾತನಾಡುತ್ತಿದ್ದರು. ಮಾನವನ ಜೀವನದ ಮೂಲಭೂತ ಅಂಶಗಳಲ್ಲಿ ಪ್ರಧಾನಾಂಶಗಳಾದ ವಿದ್ಯೆ ಊಟ ವಸತಿಗಳನ್ನು ದೀರ್ಘಕಾಲದಿಂದ ನಡೆಸಿಕೊಂಡು ಬಂದು ಜನಮಾನದಲ್ಲಿ ಮನೆಮಾಡಿದ್ದವರು ಇಂದು ನಮ್ಮನೆಲ್ಲ ಅಗಲಿ ಶಿವಾದಿನರಾಗಿದ್ದಾರೆಂದು ಸಂತಾಪ ಸೂಚಿಸಿದರು.
ಶ್ರೀ ಗಳ ಅಗಲಿಕೆಯಿಂದ ಭವ್ಯ ಭಾರತವು ಪ್ರತಿ ವರ್ಷ ಸುಮಾರು 10 ಸಾವಿರ ವಿಧ್ಯಾಥರ್ಿಗಳಿಗೆ ಗುರುಕುಲ ಶಿಕ್ಷಣವು ಹಾಗೂ 50 ಸಾವಿರ ಪದವೀಧರರನ್ನು ವಿಧ್ಯಾರ್ಜನೆ ಮಾಡಿಸಿ ಅವರಿಗೆ ಉಚಿತ ಊಟ ವಸತಿ ಮತ್ತು ಸೌಕರ್ಯ ನೀಡುತ್ತಿದ್ದರು. ಮತ್ತು ಸುಮಾರು 5 ಲಕ್ಷ ಕೃಷಿಕರಿಗೆ ಸಹಾಯ ಮಾಡುತ್ತಿದ್ದರು. ಅವರ ನಿಸ್ವಾರ್ಥ ಸೇವೆಯನ್ನು ಎಷ್ಟು ನೆನಪಿಸಿಕೊಂಡರು ಸಾಲದು ಎಂದು ಹಿರಿಯ ವೈದ್ಯ ಬಿ.ಎಸ್.ಮಾಹಂತಶೆಟ್ಟಿ ಅವರು ಮಾತನಾಡುದರು,
ಶ್ರೀಗಳ ಭಾವಪೂರ್ಣ ಶ್ರದ್ದಾಂಜಲಿಯಲ್ಲಿ ಆಸ್ಪತ್ರೆಯ ವೈದ್ಯರು, ಶುಶ್ರುಷಕಿರು, ಮತ್ತು ಆಸ್ಪತ್ರೆಯ ಸಿಬ್ಬಂದಿಯ ವರ್ಗದವರು ಮೌನಾಚರಾಣೆ ಮಾಡಿ ಪುಷ್ಪನಮನ ಸಲ್ಲಿಸಿದರು.